ಆಲಪ್ಪುಳ(ಕೇರಳ) : ಮುಂಜಾನೆ 3 ಗಂಟೆ ಸುಮಾರಿಗೆ ಹರಿಪ್ಪಾಡ್ ಕರುವಾಟ್ಟಾದ ರಾಷ್ಟ್ರೀಯ ಹೆದ್ದಾರಿ ಬಳಿಯ ಇರುವ ಬ್ರದರ್ಸ್ ಜುವೆಲರ್ಸ್ ಅಂಗಡಿಯಲ್ಲಿ ದರೋಡೆ ನಡೆದಿದೆ.
ಜುವೆಲರ್ಸ್ ಮುಂಭಾಗದ ಶಟರ್ ಮುರಿದು ಒಳ ನುಗ್ಗಿದ ಕಳ್ಳರು 25 ಸವರನ್ ಗೋಲ್ಡ್ ಕದ್ದು ಪರಾರಿಯಾಗಿದ್ದಾರೆ ಎಂದು ಮಾಲೀಕರು ದೂರಿದ್ದಾರೆ. ಸುಮಾರು ಒಂದು ವಾರದಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಕಳ್ಳತನ ಇದಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಹತ್ತಿರದ ಬ್ಯಾಂಕಿನಲ್ಲಿ ಇದೇ ರೀತಿಯ ದರೋಡೆ ನಡೆದಿತ್ತು. ಕಳ್ಳನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆರಳಚ್ಚು ಗುರುತಿಸುವಿಕೆಯನ್ನು ತಡೆಗಟ್ಟಲು ಕೈಗವಸುಗಳನ್ನು ಬಳಸಿ ಕಳ್ಳತನ ಎಸಗಲಾಗಿದೆ. ಕಳ್ಳ ಕೂಡ ಫೇಸ್ ಮಾಸ್ಕ್ ಧರಿಸಿದ್ದ. ಹರಿಪ್ಪಾಡ್ ಪೊಲೀಸ್ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.