ರಾಮೇಶ್ವರಂ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಜೀವನ ದುಸ್ತರಗೊಂಡು ಅಲ್ಲಿನ ನಾಗರಿಕರು ಭಾರತಕ್ಕೆ ವಲಸೆ ಬರುವ ಪ್ರಕ್ರಿಯೆ ಮುಂದುವರೆದಿದೆ. ಮಂಗಳವಾರ ಚಿಕ್ಕ ಮಕ್ಕಳನ್ನು ಒಳಗೊಂಡ ಎರಡು ಕುಟುಂಬಗಳು ಭಾರತಕ್ಕೆ ಬಂದಿವೆ. ಇದಕ್ಕೂ ಮುನ್ನ ಶ್ರೀಲಂಕಾದಲ್ಲಿನ ಕೆಟ್ಟ ಪರಿಸ್ಥಿತಿಯಲ್ಲಿ ಜೀವನ ನಡೆಸಲಾಗದೆ 105 ಜನ ಭಾರತಕ್ಕೆ ಆಗಮಿಸಿದ್ದಾರೆ.
ಮಂಗಳವಾರದಂದು ಅರಿಚಲ್ಮುನೈ ಎಂಬಲ್ಲಿ ಎಂಟು ಜನ ಸಿಕ್ಕಿಹಾಕಿಕೊಂಡಿರುವುದನ್ನು ಭಾರತೀಯ ಮೀನುಗಾರರು ಗಮನಿಸಿದ್ದರು. ಶ್ರೀಲಂಕಾದಿಂದ ಬೋಟ್ನಲ್ಲಿ ಬಂದು ಇವರು ಅರಿಚಲ್ಮುನೈ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಸಮುದ್ರ ಭದ್ರತಾ ಪಡೆಗಳು ಸ್ಥಳಕ್ಕೆ ತೆರಳಿ ಶ್ರೀಲಂಕಾ ನಿರಾಶ್ರಿತರನ್ನು ರಕ್ಷಿಸಿ ಧನುಷ್ಕೊಡಿ ಕ್ಯಾಂಪ್ಗೆ ಕಳುಹಿಸಿವೆ. ಇಲ್ಲಿಂದ ಅವರನ್ನು ಮಂಡಪಮ್ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ಸಂವಿಧಾನವು ಸಾರ್ವಜನಿಕರ ಲೂಟಿ ಮಾಡಲು ಸಹಾಯ ಮಾಡುತ್ತಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕೇರಳ ಸಚಿವ