ETV Bharat / bharat

ಮಿಜೋರಾಂ: ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು - ಮಿಜೋರಾಂನಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು

ಶನಿವಾರ ಬಿಡುಗಡೆ ಮಾಡಿರುವ ಅಂತಿಮ ಮತದಾರರ ಪಟ್ಟಿ ಪ್ರಕಾರ, ರಾಜ್ಯದಲ್ಲಿ ಒಟ್ಟು 8,33,426 ಮತದಾರರಿದ್ದಾರೆ. ಅವರಲ್ಲಿ 4,28,459 ಮಹಿಳೆಯರು ಮತ್ತು 4,04,967 ಪುರುಷರು. ತೃತೀಯ ಲಿಂಗಿ ವರ್ಗದಲ್ಲಿ ಯಾವುದೇ ಮತದಾರರಿಲ್ಲ.

ಮಿಜೋರಾಂ
ಮಿಜೋರಾಂ
author img

By

Published : Jan 16, 2022, 11:42 AM IST

ಮಿಜೋರಾಂ: ಮುಂಬರುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಿಜೋರಾಂನಲ್ಲಿ ಹೊಸ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪುರುಷರಿಗಿಂತ 23,492 ಹೆಚ್ಚು ಮಹಿಳಾ ಮತದಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬಿಡುಗಡೆ ಮಾಡಿರುವ ಅಂತಿಮ ಮತದಾರರ ಪಟ್ಟಿ ಪ್ರಕಾರ, ರಾಜ್ಯದಲ್ಲಿ ಒಟ್ಟು 8,33,426 ಮತದಾರರಿದ್ದಾರೆ. ಅವರಲ್ಲಿ 4,28,459 ಮಹಿಳೆಯರು ಮತ್ತು 4,04,967 ಪುರುಷರು. ತೃತೀಯ ಲಿಂಗಿ ವರ್ಗದಲ್ಲಿ ಯಾವುದೇ ಮತದಾರರಿಲ್ಲ.

ಕಳೆದ ವರ್ಷ ಜನವರಿಯಲ್ಲಿ ಪ್ರಕಟವಾದ ಪಟ್ಟಿಗೆ ಹೋಲಿಸಿದರೆ ಈ ಬಾರಿ 17,288 ಮತದಾರರು ಹೆಚ್ಚಾಗಿದ್ದಾರೆ. 12 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಐಜ್ವಾಲ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 2,76,155 ಮತದಾರರಿದ್ದಾರೆ. ಲುಂಗ್ಲೈ ಜಿಲ್ಲೆಯಲ್ಲಿ 97,303 ಮತದಾರರಿದ್ದಾರೆ. ರಾಜ್ಯದ ದಕ್ಷಿಣ ಭಾಗದಲ್ಲಿರುವ ಲುಂಗ್ಲೈ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ.

2019 ರಲ್ಲಿ ರಚಿಸಲಾದ Hnahthial ಜಿಲ್ಲೆಯು 15,730 ಮತದಾರರನ್ನು ಹೊಂದಿದ್ದು, ಒಂದೇ ವಿಧಾನಸಭಾ ಕ್ಷೇತ್ರವಿದೆ. ಕೊಲಾಸಿಬ್ ಜಿಲ್ಲೆಯಲ್ಲಿ 62,610 ಮತದಾರರು, ಚಂಫೈ ಜಿಲ್ಲೆಯಲ್ಲಿ 55,357 ಮತದಾರರು, ಸೆರ್ಚಿಪ್ ಜಿಲ್ಲೆಯಲ್ಲಿ 52,952 ಮತದಾರರು, ಲಾಂಗ್ಟ್‌ಲೈ ಜಿಲ್ಲೆಯಲ್ಲಿ 87,608 ಮತದಾರರು, ಸಿಯಾಹಾ - 43,015 ಮತದಾರರು, ಸೈಚುವಲ್ 54,585 ಮತದಾರರನ್ನು ಹೊಂದಿದ್ದು, ಖವ್ಜಾಲ್ ಜಿಲ್ಲೆಯಲ್ಲಿ 17,250 ಮತದಾರರಿದ್ದಾರೆ.

ಮಿಜೋರಾಂನಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿದ್ದು, 1,247 ಮತಗಟ್ಟೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.