ನವದೆಹಲಿ : ನೈಋತ್ಯ ಮಾನ್ಸೂನ್ ಮೇ 27ರಂದು ಅಥವಾ ನಾಲ್ಕು ದಿನಗಳ ಹೆಚ್ಚು ಕಡಿಮೆಯ ಅಂತರದಲ್ಲಿ ಕೇರಳ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮುನ್ಸೂಚನೆ ನೀಡಿದೆ. 2021ರಲ್ಲಿ ನೈಋತ್ಯ ಮಾನ್ಸೂನ್ ಮೇ 31 ರಂದು ಪ್ರಾರಂಭವಾಗಿತ್ತು. ಈ ವರ್ಷ, ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಸಾಮಾನ್ಯ ದಿನಾಂಕಕ್ಕಿಂತ ಮುಂಚಿತವಾಗಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನೈಋತ್ಯ ಮಾನ್ಸೂನ್ ಮೇ 22ರ ಸುಮಾರಿಗೆ ಅಂಡಮಾನ್ ಸಮುದ್ರದ ಮೇಲೆ ಹಾದು ಹೋಗಲಿದೆ. ಮೇ 15ರ ಸುಮಾರಿಗೆ ನೈರುತ್ಯ ಮಾನ್ಸೂನ್ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳನ್ನು ಆವರಿಸುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಹಿಂದಿನ ಮಾಹಿತಿಯ ಪ್ರಕಾರ ಅಂಡಮಾನ್ ಸಮುದ್ರದಲ್ಲಿ ಮಾನ್ಸೂನ್ ಪ್ರಾರಂಭವಾಗುವ ದಿನಾಂಕದೊಂದಿಗೆ ಕೇರಳದ ಮೇಲೆ ಮಾನ್ಸೂನ್ ಅಪ್ಪಳಿಸಲಿರುವ ದಿನಾಂಕ ಅಥವಾ ದೇಶದಲ್ಲಿ ಮಾನ್ಸೂನ್ ಮಳೆಯ ಪ್ರಾರಂಭದ ದಿನಾಂಕಗಳಿಗೆ ಯಾವುದೇ ಸಂಬಂಧವಿಲ್ಲ ಎಂದು IMD ಹೇಳಿಕೆಯೊಂದರಲ್ಲಿ ತಿಳಿಸಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ, ಕೇರಳದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭಿಕ ಆಕ್ರಮಣವು ಆಸಾನಿ ಚಂಡಮಾರುತದ ಅವಶೇಷಗಳ ಪ್ರಭಾವಕ್ಕೆ ಒಳಪಟ್ಟಿದ್ದು, ಇದು ಋತುಮಾನದ ಮಳೆಯ ಪ್ರಾರಂಭಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: ಅಸಾನಿ ಚಂಡಮಾರುತಕ್ಕೆ ಕರಾವಳಿ ಆಂಧ್ರ ತತ್ತರ; ಭಾರಿ ಮಳೆಗೆ ಭೂಕುಸಿತ, ಕೊಚ್ಚಿ ಹೋದ ರಸ್ತೆ