ETV Bharat / bharat

ಭಾರತಕ್ಕೂ ಮಂಕಿಪಾಕ್ಸ್​ ಲಗ್ಗೆ?.. ಗಾಜಿಯಾಬಾದ್ ಬಾಲಕಿ ಮಾದರಿ ಸಂಗ್ರಹ

author img

By

Published : Jun 4, 2022, 3:54 PM IST

ಕೊರೊನಾ ಬಳಿಕ ಇದೀಗ ಮಂಕಿಪಾಕ್ಸ್ ವೈರಸ್ ವಿಶ್ವದಾದ್ಯಂತ ಆತಂಕ ಮೂಡಿಸುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಮಂಕಿಪಾಕ್ಸ್ ಲಗ್ಗೆ ಹಾಕಿರುವ ಶಂಕೆ ಶುರುವಾಗಿದೆ.

Monkeypox virus suspected case in Ghaziabad

ಗಾಜಿಯಾಬಾದ್​(ಉತ್ತರ ಪ್ರದೇಶ): ವಿದೇಶಗಳಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಮಂಕಿಪಾಕ್ಸ್​ ಹಾವಳಿ ಇದೀಗ ಭಾರತದಲ್ಲೂ ಶುರುವಾಗುವ ಲಕ್ಷಣ ಗೋಚರಿಸಿದೆ. ಗಾಜಿಯಾಬಾದ್​ನ 5 ವರ್ಷದ ಬಾಲಕಿಯೋರ್ವಳಲ್ಲಿ ಈ ರೋಗದ ಶಂಕಿತ ಲಕ್ಷಣಗಳು ಕಂಡು ಬಂದಿವೆ ಎಂದು ಎಎನ್​ಐ ಸುದ್ದಿ ಮಾಡಿದೆ.

ಬಾಲಕಿಯ ಶಂಕಿತ ಮಾದರಿ ಸಂಗ್ರಹ ಮಾಡಿ ಈಗಾಗಲೇ ಪರೀಕ್ಷೆಗೋಸ್ಕರ ಐಸಿಎಂಆರ್​​ ಪುಣೆಗೆ ರವಾನೆ ಮಾಡಲಾಗಿದ್ದು, ಬಾಲಕಿ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಬ್ರಿಜೇಶ್ ಪಾಠಕ್ ತಿಳಿಸಿದ್ದಾರೆ. ಜೊತೆಗೆ ಬಾಲಕಿಯಲ್ಲಿ ಇತರೆ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ ಎನ್ನಲಾಗ್ತಿದೆ.

  • Ghaziabad case is suspected and under observation, samples have been sent to ICMR NIV Pune: UP Deputy CM and Health Minister Brajesh Pathak to ANI

    — ANI UP/Uttarakhand (@ANINewsUP) June 4, 2022 " class="align-text-top noRightClick twitterSection" data=" ">

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿಯ 14 ಅಭ್ಯರ್ಥಿಗಳು ಸೇರಿ 41 ಮಂದಿ ಅವಿರೋಧ ಆಯ್ಕೆ

ಐದು ವರ್ಷದ ಬಾಲಕಿ ದೇಹದಲ್ಲಿ ತುರಿಕೆ ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತಿದ್ದಂತೆ ಮಾದರಿ ಸಂಗ್ರಹ ಮಾಡಿ, ಪರೀಕ್ಷೆಗೋಸ್ಕರ ರವಾನೆ ಮಾಡಲಾಗಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ತಿಳಿಸಿದೆ. ಬಾಲಕಿಯನ್ನ ಈಗಾಗಲೇ ಕುಟುಂಬಸ್ಥರಿಂದ ಪ್ರತ್ಯೇಕವಾಗಿಡಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.

ಏನಿದು ಮಂಕಿಪಾಕ್ಸ್​?: ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. 1958ರಲ್ಲಿ ಇದನ್ನು ಮೊದಲ ಬಾರಿಗೆ ಮಂಗಗಳಲ್ಲಿ ಕಂಡು ಹಿಡಿಯಲಾಗಿತ್ತು. ಹೀಗಾಗಿ, ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋದ ಬಾಲಕನಲ್ಲಿ ರೋಗ ಪತ್ತೆಯಾಗಿತ್ತು. ಈಗಾಗಲೇ ಮಂಕಿಪಾಕ್ಸ್ 20ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, 200 ಪ್ರಕರಣಗಳು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ತಿಳಿಸಿದೆ.

ಕೋವಿಡ್ ಭೀತಿಯಿಂದ ಚೇತರಿಸಿಕೊಂಡಿರುವ ಭಾರತಕ್ಕೂ ಮಂಕಿಪಾಕ್ಸ್ ಆತಂಕ ಶುರುವಾಗಿದೆ. ವೈರಸ್ ದೇಶದೊಳಗೆ ನುಸುಳದಂತೆ ತಡೆಗಟ್ಟಲು ಅಂತಾರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂಬೈನಲ್ಲಿ ಈಗಾಗಲೇ ಮಂಕಿಪಾಕ್ಸ್​ ರೋಗಕ್ಕಾಗಿ ಪ್ರತ್ಯೇಕ ವಾರ್ಡ್​ ನಿರ್ಮಿಸಲಾಗಿದೆ.

ಮಂಕಿಪಾಕ್ಸ್ ವೈರಸ್ ಮಾನವರಿಗೆ ಬೇಗನೇ ಮತ್ತು ಸುಲಭವಾಗಿ ಹರಡುವುದಿಲ್ಲ. ಹರಡಿದರೂ ಇದನ್ನು ಕೆಲವೇ ವಾರಗಳಲ್ಲಿ ಗುಣಪಡಿಸಬಹುದು. ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಸಿಡುಬಿಗೆ ನೀಡಲಾಗುವ ಲಸಿಕೆಯೇ ರಾಮಬಾಣ ಎಂದು ಗುರುತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.