ಕುಶಿನಗರ (ಉತ್ತರಪ್ರದೇಶ) : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಮಂಗಗಳ ಮರಿಯನ್ನು ನಾಯಿಗಳು ಸಾಯಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಾಯಿ ಮರಿಗಳನ್ನು ಮರ ಅಥವಾ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ನೆಲಕ್ಕೆ ಬಿಟ್ಟು ಸಾಯಿಸುವ ಸುದ್ದಿ ದೇಶದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಮಂಗಗಳಿಗೆ ಈ ರೀತಿಯ ದ್ವೇಷ ಇರುತ್ತಾ ಅಂತಾ ಹಲವರು ಪ್ರಶ್ನಿಸಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಮಂಗವೊಂದು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ.
ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪದ್ರೌನಾ ನಗರದಲ್ಲಿ ಮಂಗವೊಂದು ನಾಯಿ ಮರಿಯನ್ನು ಎತ್ತಿಕೊಂಡು ಅಲೆದಾಡುತ್ತಿದೆ. ಈ ಕೋತಿ ನಾಯಿ ಮರಿಗೆ ಹಾಲುಣಿಸಿ ಆರೈಕೆ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಸದ್ಯ ನಾಯಿ ಮರಿಯನ್ನು ಎತ್ತಿಕೊಂಡು ಮಂಗ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Monkeys V/s Dogs : 300ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು