ETV Bharat / bharat

ಉತ್ತರ ಪ್ರದೇಶ : ಸನ್ಯಾಸಿಯನ್ನು ಹತ್ಯೆಗೈದ ಮತ್ತೋರ್ವ ಸನ್ಯಾಸಿ! - murder in Uttara Pradesh

ಕೆಲವು ದುಷ್ಕರ್ಮಿಗಳು ತನ್ನ ಸ್ನೇಹಿತನನ್ನು ಕೊಂದು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರವೇಶ್ ಗಿರಿ ಸುಳ್ಳು ಆರೋಪ ಮಾಡಿದ್ದಾನೆ. ಆದ್ರೆ, ಪ್ರವೇಶ್ ಗಿರಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲದ ಹಿನ್ನೆಲೆ ಪೊಲೀಸರು ಪ್ರವೇಶ್ ಗಿರಿ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ..

Monk kills monk during squabble in Uttara Pradesh
ಸನ್ಯಾಸಿಯನ್ನು ಹತ್ಯೆಗೈದ ಮತ್ತೋರ್ವ ಸನ್ಯಾಸಿ
author img

By

Published : Mar 13, 2022, 12:14 PM IST

ಸಹರಾನ್‌ಪುರ (ಉತ್ತರಪ್ರದೇಶ) : ಶನಿವಾರದಂದು ಸನ್ಯಾಸಿಯೋರ್ವರ ಅರ್ಧ ಸುಟ್ಟ ಮೃತ ದೇಹ ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಬಾದಶಾಹಿ ಬಾಗ್ ಪ್ರದೇಶದ ಶಿವಾಲಿಕ್ ಪರ್ವತದಲ್ಲಿ ಪತ್ತೆಯಾಗಿತ್ತು. ಬಳಿಕ ಪ್ರವೇಶ್ ಗಿರಿ ಎನ್ನುವ ಸನ್ಯಾಸಿಯಿಂದ ಈ ಹತ್ಯೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಇಬ್ಬರು ಸನ್ಯಾಸಿಗಳು ಸ್ನೇಹಿತರಾಗಿದ್ದರು. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ನಂತರ ಸಾಧು ಪ್ರವೇಶ್ ಗಿರಿ ತನ್ನ ಸ್ನೇಹಿತ (ಸಾಧು)ನನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.

ಕೋಪದ ಭರದಲ್ಲಿ ತನ್ನ ಸ್ನೇಹಿತನ ಕತ್ತು ಕೊಯ್ದು ಮೃತದೇಹವನ್ನು ಗುಡಿಸಲಿನಲ್ಲಿಟ್ಟು ಗುಡಿಸಲಿಗೇನೆ ಬೆಂಕಿ ಇಟ್ಟು ಮೃತ ದೇಹವನ್ನು ಸುಟ್ಟು ಹಾಕಿದ್ದಾನೆ. ನಂತರ ಆರೋಪಿ ಪ್ರವೇಶ್ ಗಿರಿ ಬೆಂಕಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾನೆ.

ಕೆಲವು ದುಷ್ಕರ್ಮಿಗಳು ತನ್ನ ಸ್ನೇಹಿತನನ್ನು ಕೊಂದು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರವೇಶ್ ಗಿರಿ ಸುಳ್ಳು ಆರೋಪ ಮಾಡಿದ್ದಾನೆ. ಆದ್ರೆ, ಪ್ರವೇಶ್ ಗಿರಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲದ ಹಿನ್ನೆಲೆ ಪೊಲೀಸರು ಪ್ರವೇಶ್ ಗಿರಿ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಮಿಕಲ್​​ ಅಂಗಡಿಗಳಿಗೆ ಬೆಂಕಿ ಹಚ್ಚಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕಲ್ಲು ತೂರಾಟ : 10 ಮಂದಿಗೆ ಗಾಯ

ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರವೇಶ್ ಗಿರಿ ಶನಿವಾರದಂದು ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರವೇಶ್​ ಗಿರಿಯನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.