ETV Bharat / bharat

ಅಕ್ರಮ ಹಣ ವರ್ಗಾವಣೆ ಪ್ರಕರಣ : ಪೂಜಾ ಸಿಂಘಾಲ್​​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್​

ಜಾರ್ಖಂಡ್ ಮನಿ ಲಾಂಡರಿಂಗ್ ತನಿಖೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಜಾರಿ ನಿರ್ದೇಶನಾಲಯ ನ್ಯಾಯಾಲಯವು ಬುಧವಾರ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜೂನ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶಿಸಿದೆ..

Money laundering case
ಪೂಜಾ ಸಿಂಘಾಲ್​​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್​
author img

By

Published : May 25, 2022, 4:19 PM IST

ನವದೆಹಲಿ : ಜಾರ್ಖಂಡ್​ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಜಾರಿ ನಿರ್ದೇಶನಾಲಯ ನ್ಯಾಯಾಲಯವು ಬುಧವಾರ ಆರೋಪಿ ಪೂಜಾ ಸಿಂಘಾಲ್ ಅವರನ್ನು ಜೂನ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಜಾರ್ಖಂಡ್‌ನ ರಾಂಚಿಯ ಆರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. 2009 ಮತ್ತು 2010ರಲ್ಲಿ ರಾಜ್ಯದ ಖುಂಟಿ ಜಿಲ್ಲೆಯ ಉಪ ಆಯುಕ್ತರಾಗಿ ಸಿಂಘಾಲ್​​ ಸೇವೆ ಸಲ್ಲಿಸಿದ್ದಾರೆ.

ಇವರನ್ನು ಮೇ 11ರಂದು ಇಡಿ ಬಂಧಿಸಿತ್ತು. ಜಾರ್ಖಂಡ್ ಸರ್ಕಾರವು ಮೇ 12ರಂದು ಸಿಂಘಾಲ್​ ಅವರನ್ನು ಕೆಲಸದಿಂದ ಅಮಾನತುಗೊಳಿಸಿತು. ಈ ತಿಂಗಳ ಆರಂಭದಲ್ಲಿ, ಆಕೆಯ ಪತಿ ಅಭಿಷೇಕ್ ಝಾ ಒಡೆತನದ ರಾಂಚಿಯ ಪಲ್ಸ್ ಆಸ್ಪತ್ರೆಯ ಮೇಲೆ ಇಡಿ ದಾಳಿ ನಡೆಸಿತ್ತು.

ಇದನ್ನೂ ಓದಿ: ಮಧ್ಯಪ್ರದೇಶದ ಪನ್ನಾದಲ್ಲಿ ಮಹಿಳೆಗೆ ಸಿಕ್ತು ರತ್ನ ಖಚಿತ ವಜ್ರ.. ರಾತ್ರೋರಾತ್ರಿ ಮಿಲಿಯೇನರ್​ ಆದ ಬಡ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.