ETV Bharat / bharat

ಸೋಮವಾರದ ಭವಿಷ್ಯ.. ಈ ದಿನದ ನಿಮ್ಮ ರಾಶಿಫಲ ತಿಳಿಯಿರಿ - Monday horoscope

ಸೋಮವಾರದ ರಾಶಿಫಲ ಹೀಗಿದೆ..

Etv bharat horoscope
ಸೋಮವಾರದ ಭವಿಷ್ಯ
author img

By

Published : Jul 12, 2021, 8:40 AM IST

Updated : Jul 12, 2021, 9:56 AM IST

ಮೇಷ: ಇಂದು ನೀವು ಮಹತ್ತರ ಸಾಧನೆ ಮಾಡುತ್ತೀರಿ. ನಿಮ್ಮ ಅಭಿವ್ಯಕ್ತಿಯ ಶಕ್ತಿ ಹಲವು ಜನರನ್ನು ಪ್ರಭಾವಿತಗೊಳಿಸುತ್ತದೆ. ಹಣಕಾಸಿನ ಕೆಲಸಗಳು ಕೈಗೂಡುತ್ತವೆ. ಆದರೆ, ಸಣ್ಣಪುಟ್ಟ ಅಪಘಾತಗಳು ಮತ್ತು ಅನಾರೋಗ್ಯದ ಬಗ್ಗೆ ಎಚ್ಚರದಿಂದಿರಿ.

ವೃಷಭ: ನಿಮಗೆ ಅತ್ಯಂತ ಆಹ್ಲಾದಕರ ದಿನ. ನೀವು ಇಂದಿನ ಕೆಲಸಗಳನ್ನು ಅತ್ಯಂತ ಸ್ಥಿರವಾಗಿ, ಗಮನವಿಟ್ಟು ಮಾಡುತ್ತೀರಿ. ನೀವು ನಿಮ್ಮ ಮಿತ್ರರ ಜೊತೆಯಲ್ಲಿ ಖುಷಿಯಾಗಿರುತ್ತೀರಿ.

ಮಿಥುನ: ನೀವು ಇಂದು ಹಲವು ಜನರಿಂದ ಹಲವಾರು ಬೇಡಿಕೆಗಳನ್ನು ಎದುರಿಸುತ್ತೀರಿ. ಆದರೆ ನಿಮಗೆ ಅವರ ಎಲ್ಲರ ಬೇಡಿಕೆಗಳಲ್ಲೂ ಪೂರೈಸುವುದು ಕಷ್ಟಕರ ಎಂದು ಅನಿಸುವುದು. ನಿಮ್ಮ ಅಗತ್ಯತೆಗಳನ್ನು ಈಡೇರಿಸಿಕೊಳ್ಳುತ್ತೀರಿ. ಜನರು ನಿಮ್ಮ ಜಾಣ್ಮೆ ಮತ್ತು ಸೃಜನಶೀಲತೆಯನ್ನು ಪ್ರಶಂಸೆ ಮಾಡುತ್ತಾರೆ.

ಕರ್ಕಾಟಕ: ಬದಲಾವಣೆಯ ಗಾಳಿಯನ್ನು ಗಮನಿಸಿರಿ ಮತ್ತು ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿ. ನೀವು ಶಾಂತವಾಗಿರುವುದು ಅಗತ್ಯ. ನೀವು ಪರಿಸ್ಥಿತಿಗಳಿಗೆ ಹೊಂದಿಕೊಂಡರೆ ನಿಮ್ಮ ಗುರಿಸಾಧನೆ ಸುಲಭವಾಗುತ್ತದೆ. ವಿನೋದ ಮತ್ತು ಮನರಂಜನೆ ಇಂದಿನ ಪಾಸ್ವರ್ಡ್. ಸಾಮಾಜಿಕ ವಲಯ, ವ್ಯಾಪಾರದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.

ಸಿಂಹ: ಮಾರಾಟ ಮತ್ತು ಮಾರ್ಕೆಟಿಂಗ್ ಉದ್ಯೋಗಗಳಲ್ಲಿ ತೊಡಗಿಕೊಂಡಿರುವವರಿಗೆ ಇಂದು ಸುದಿನ. ಆದರೆ, ಪ್ರಯಾಣದಲ್ಲಿ ಸ್ವಲ್ಪ ಅಡಚಣೆಯಾಗುವ ಸಾಧ್ಯತೆ ಇದೆ. ನಿಮ್ಮ ಆಂತರಿಕ ಸಾಮರ್ಥ್ಯಗಳನ್ನು ಗುರುತಿಸಲು ಇದು ಅತ್ಯುತ್ತಮ ಸಮಯ. ನೀವು ಮುಂದಿನ 2-3 ದಿನಗಳಲ್ಲಿ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಲಿದ್ದೀರಿ.

ಕನ್ಯಾ: ನಿಮ್ಮ ದೈನಂದಿನ ಸಂಕಷ್ಟಗಳ ನಡುವೆ ಅತ್ಯಂತ ಅಗತ್ಯವಾಗಿರುವ ಬಿಡುವು ತೆಗೆದುಕೊಳ್ಳಿ. ಎಲ್ಲ ಕೆಲಸಗಳಿಗೆ ವೈವಿಧ್ಯತೆಯ ಅಂಶವನ್ನು ಸೇರ್ಪಡೆ ಮಾಡಿ. ನಿಮ್ಮ ಉತ್ಸಾಹಿಯಾಗಿರ ಇರಲು ಇತರರೊಂದಿಗೆ ಬೆರೆಯುವುದು ಸೂಕ್ತ.

ತುಲಾ: ನಿಮ್ಮ ಕುಟುಂಬ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಹೆಚ್ಚು ಗಮನ ನೀಡುತ್ತೀರಿ. ಮನೆಯ ಒಳಾಂಗಣ ನವೀಕರಿಸಲು ಮತ್ತು ಬದಲಾಯಿಸಲು ಬಯಸುತ್ತೀರಿ ಅಥವಾ ಹೊಸ ಗೃಹಾಲಂಕಾರದ ವಸ್ತುಗಳನ್ನು ಕೊಳ್ಳಲು ತೆರಳುತ್ತೀರಿ. ಇಂದು ನಿಮ್ಮ ಸಮಯವನ್ನು ಕುಟುಂಬ ಸದಸ್ಯರೊಂದಿಗೆ ಕಳೆಯುತ್ತೀರಿ.

ವೃಶ್ಚಿಕ: ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಹೀಗಾಗಿ ಇಂದು ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಿ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ದಿನಚರಿಯನ್ನು ರೂಪಿಸಿಕೊಳ್ಳಿ.

ಧನು: ನೀವು ಇಂದು ಗೆಲುವು ಸಾಧಿಸುತ್ತೀರಿ. ನಾಯಕನಾಗಿ ಕೈ ಕೆಳಗಡೆ ಇರುವವರಿಗೆ ಅವರು ಬಯಸಿದಾಗ ಮಾರ್ಗದರ್ಶನ ಮತ್ತು ಸೂಚನೆ ನೀಡುತ್ತೀರಿ. ಒಂದು ರೀತಿಯಲ್ಲಿ ನೀವು ಅವರನ್ನು ಉತ್ತೇಜನ ಹಾಗೂ ಪ್ರೇರೇಪಿಸುತ್ತೀರಿ. ಒಟ್ಟಾರೆ, ದಿನದ ಅಂತ್ಯಕ್ಕೆ ನೀವು ಅತ್ಯಂತ ಸಂತೋಷದ ವ್ಯಕ್ತಿಯಾಗಿರುತ್ತೀರಿ.

ಮಕರ: ಕೆಲವೊಮ್ಮೆ, ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಸಾಧಿಸುತ್ತವೆ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪ್ರವೃತ್ತಿ ಒಳ್ಳೆಯದಲ್ಲ. ನಿಮಗೆ ಇದರಿಂದ ಕೆಡುಕಾಗಬಹುದು. ಇತರರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸದಿದ್ದರೆ, ಇದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗಬಹುದು.

ಕುಂಭ: ನೀವು ನಿಮ್ಮ ದೃಢತೆ ಸಾಬೀತುಪಡಿಸುವ ಮನಸ್ಥಿತಿಯಲ್ಲಿರುವುದರಿಂದ ನಿಮ್ಮ ಕಡುವಿರೋಧಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದರೆ ಒಳ್ಳೆಯದು. ನೀವು ಯಶಸ್ಸಿನ ದಾರಿಯಲ್ಲಿರುವಾಗ ಹಲವು ಜನರ ಹೃದಯಗಳನ್ನು ಗೆಲ್ಲುತ್ತೀರಿ.

ಮೀನ: ಇಂದು ನಿಮ್ಮ ಬೌದ್ಧಿಕ ಸಾಮರ್ಥ್ಯ ಮುಂಬದಿಗೆ ಬರುತ್ತದೆ. ನೀವು ನಿಮ್ಮ ಕುತೂಹಲದಲ್ಲಿ ಮುಳುಗಿಹೋಗುತ್ತೀರಿ ಮತ್ತು ನೈಸರ್ಗಿಕ ವಿದ್ಯಮಾನದಲ್ಲಿ ಆಸಕ್ತಿ ವಹಿಸುತ್ತೀರಿ. ನಿಮ್ಮ ನಂಬಿಕೆ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸಲು ನಿಮಗೆ ನೆರವಾಗುತ್ತದೆ. ನೀವು ವಿಷಯಗಳನ್ನು ವಿಧಿಯ ತೀರ್ಮಾನಕ್ಕೆ ಬಿಡುತ್ತೀರಿ. ನೀವು ವೃತ್ತಿಪರವಾದುದಕ್ಕಿಂತ ಬೌದ್ಧಿಕ ಅನ್ವೇಷಣೆಗಳತ್ತ ಹೆಚ್ಚು ಗಮನ ವಹಿಸುತ್ತೀರಿ. ಆದರೆ, ನಿಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ.

Last Updated : Jul 12, 2021, 9:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.