ETV Bharat / bharat

ಅಮೆರಿಕದಲ್ಲೇ ಹೆಚ್​1ಬಿ ವೀಸಾ ನವೀಕರಣ: ಪ್ರಧಾನಿ ಮೋದಿ ಮಹತ್ವದ ಘೋಷಣೆ - H1B visa renewed

ಉದ್ಯೋಗ ವೀಸಾವಾದ ಹೆಚ್​1ಬಿ ನವೀನಕರಣಕ್ಕೆ ಇನ್ನು ಭಾರತಕ್ಕೆ ಬರುವ ತಾಪತ್ರಯ ಇರಲ್ಲ. ಅಮೆರಿಕದಲ್ಲೇ ವೀಸಾವನ್ನು ರಿನ್ಯುವಲ್​ ಮಾಡಿಕೊಳ್ಳಬಹುದಾಗಿದೆ. ಮೋದಿ ಮತ್ತು ಬೈಡನ್​​ ಮಧ್ಯೆ ಇಂತಹ ಮಹತ್ವದ ಮಾತುಕತೆ ನಡೆದಿದೆ.

ಅಮೆರಿಕದಲ್ಲೇ ಹೆಚ್​1ಬಿ ವೀಸಾ ನವೀಕರಣ
ಅಮೆರಿಕದಲ್ಲೇ ಹೆಚ್​1ಬಿ ವೀಸಾ ನವೀಕರಣ
author img

By

Published : Jun 24, 2023, 1:55 PM IST

ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಭಾರತೀಯರು ಹೆಚ್​1ಬಿ ವೀಸಾ ನವೀಕರಣಕ್ಕಾಗಿ ಇನ್ನು ಭಾರತಕ್ಕೆ ಬರುವ ಅಗತ್ಯವಿಲ್ಲ. ಅಲ್ಲೇ ವೀಸಾವನ್ನು ನವೀಕರಣ ಮಾಡಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.

4 ದಿನಗಳ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು, ಆ ದೇಶದೊಂದಿಗೆ ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಭಾರತೀಯ ಉದ್ಯೋಗಿಗಳಿಗೆ ಭಾರೀ ಅನುಕೂಲವಾಗುವ ಹೆಚ್​1ಬಿ ವೀಸಾ ನವೀಕರಣ ಆ ದೇಶದಲ್ಲೇ ಮಾಡಿಸಿಕೊಳ್ಳುವುದೂ ಒಂದಾಗಿದೆ.

ಈ ಬಗ್ಗೆ ಶುಕ್ರವಾರ ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ಬಿಲ್ಡಿಂಗ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವೀಸಾ ನವೀಕರಣ ಇನ್ನು ಸರಳವಾಗಲಿದೆ. ಅದರ ನವೀಕರಣಕ್ಕಾಗಿಯೇ ಭಾರತಕ್ಕೆ ಬರುವ ತಾಪತ್ರಯ ತಪ್ಪಲಿದೆ. ಭಾರತವು ಸಿಯಾಟಲ್‌ನಲ್ಲಿ ಹೊಸ ದೂತಾವಾಸವನ್ನು ಸ್ಥಾಪಿಸಲಿದೆ. ಇತರ ಎರಡು ನಗರಗಳಲ್ಲಿ ಇನ್ನೆರಡು ದೂತಾವಾಸವನ್ನು ಸ್ಥಾಪಿಸಲಿದ್ದು, ಅಲ್ಲಿ ವೀಸಾ ನವೀಕರಣಕ್ಕೆ ಅವಕಾಶ ನೀಡಲಾಗುವುದು ಎಂದು ಮೋದಿ ತಿಳಿಸಿದರು.

ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸಲು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ಹೆಚ್ಚುವರಿ ಕಾನ್ಸುಲೇಟ್‌ಗಳನ್ನು ತೆರೆಯುವ ಉದ್ದೇಶವನ್ನು ಅಮೆರಿಕ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ. ಈ ಕಾನ್ಸುಲೇಟ್‌ಗಳು ಅಮೆರಿಕ -ಭಾರತದ ಸಂಬಂಧದ ಬಲವನ್ನು ಖಚಿತಪಡಿಸುತ್ತವೆ ಎಂದು ಹೇಳಿದರು.

ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಬಯಸುವ ಭಾರತೀಯ ನಾಗರಿಕರ ಮೇಲಿನ ಹೊರೆಯನ್ನು ತಗ್ಗಿಸುತ್ತದೆ. ನವೀಕರಣದ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಇದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು. ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಅನುಕೂಲವಾಗುವಂತೆ ಅದನ್ನು ವಿಸ್ತರಿಸಲಾಗುವುದು ಎಂದು ಇದೇ ವೇಳೆ ಹೇಳಿದರು.

ಏನಿದು ಹೆಚ್​1ಬಿ ವೀಸಾ, ನವೀನಕರಣ: ಅಮೆರಿಕದಲ್ಲಿ ಉದ್ಯೋಗ ಪಡೆಯುವ ಯಾವುದೇ ರಾಷ್ಟ್ರಗಳ ವ್ಯಕ್ತಿಗಳು ಕಡ್ಡಾಯವಾಗಿ ಹೆಚ್​1ಬಿ ವೀಸಾವನ್ನು ಹೊಂದಿರಬೇಕು. ಅದನ್ನು ಇಂತಿಷ್ಟು ವರ್ಷಗಳಿಗೆ ಮಾತ್ರ ನೀಡಲಾಗುತ್ತದೆ. ಅದಾದ ಬಳಿಕ ಕೆಲಸದಲ್ಲಿ ಮುಂದುವರಿಯಬೇಕಾದರೆ, ಅಗತ್ಯ ದಾಖಲೆಗಳ ಸಮೇತ ವೀಸಾ ನವೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ರದ್ದಾದಲ್ಲಿ ಅವರು ಕೆಲಸ ಮತ್ತು ದೇಶವನ್ನು ತೊರೆಯಬೇಕಾಗುತ್ತಿತ್ತು.

2022 ರ ಆರ್ಥಿಕ ವರ್ಷದಲ್ಲಿ ಸುಮಾರು 4,42,000 ಹೆಚ್​-1ಬಿ ಕಾರ್ಮಿಕರಲ್ಲಿ ಭಾರತೀಯ ಪ್ರಜೆಗಳೇ ಶೇ.73 ರಷ್ಟಿದ್ದಾರೆ. ಅಮೆರಿಕದ ಈ ವೀಸಾ ಬಳಸುವ ಅತಿದೊಡ್ಡ ರಾಷ್ಟ್ರ ಭಾರತವಾಗಿದೆ. ವೀಸಾ ನವೀಕರಣವು ಸದ್ಯ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ನಾಲ್ಕು ದೂತಾವಾಸಗಳಲ್ಲಿ ಮಾತ್ರ ನಡೆಯುತ್ತಿತ್ತು. ಹೊಸ ಒಪ್ಪಂದದಂತೆ ಇದೀಗ ಅಮೆರಿಕದಲ್ಲೇ ನವೀಕರಣ ಮಾಡಿಕೊಳ್ಳಬಹುದಾಗಿದೆ.

ಹೊಸ ನಿಯಮಕ್ಕೆ ಕರತಾಡನ: ಮೋದಿ ಅವರು ವೀಸಾ ನವೀಕರಣದ ಹೊಸ ನಿಯಮವನ್ನು ಘೋಷಿಸಿದ ಬಳಿಕ ಸಭೆಯಲ್ಲಿ ಭಾರೀ ಕರತಾಡನ ಕೇಳಿಬಂತು. ಲಕ್ಷಾಂತರ ಭಾರತೀಯರು ಈ ಸಮಸ್ಯೆಯಿಂದ ಹೊರಬೀಳಲಿದ್ದು, ಸರಳ ಮತ್ತು ಕಡಿಮೆ ಖರ್ಚಿನ ಈ ವ್ಯವಸ್ಥೆ ಭಾರೀ ಅನುಕೂಲ ಮಾಡಿಕೊಡಲಿದೆ.

ಇದನ್ನೂ ಓದಿ: ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ಅವಕಾಶ: ಯುಎಸ್​​ ಕೋರ್ಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.