ETV Bharat / bharat

ಕೋವಿಡ್ 19 ಲಸಿಕೆ ಅಭಿವೃದ್ಧಿ ಬಗ್ಗೆ ತಿಳಿಯಲು ಇಂದು ಎಸ್‌ಐಐ​, ಭಾರತ್​ ಬಯೋಟೆಕ್​ಗೆ ಮೋದಿ ಭೇಟಿ - COVID-19 vaccine productionUK-based company AstraZenecaBharat Biotech

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕಡೆಯಿಂದ ' ಕೋವಿಶೀಲ್ಡ್'​ ಹೆಸರಿನ ಲಸಿಕೆಯ ಅಭಿವೃದ್ಧಿಪಡಿಸಲಾಗಿದೆ ಇದು ಎಸ್‌ಐಐ ನಲ್ಲಿ ಅಂತಿಮ ಪರೀಕ್ಷಾ ಹಂತದಲ್ಲಿದೆ. ಹೀಗಾಗಿ ಈ ಕುರಿತು ಮಾಹಿತಿ ಪಡೆಯಲು ಪ್ರಧಾನಿ ಆಗಮಿಸುತ್ತಿದ್ದು, ಮೋದಿಯವರ ಜೊತೆ ವಿದೇಶಿ ರಾಯಭಾರಿಗಳು ಸಹ ಆಗಮಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ.

ಕೋವಿಡ್ 19 ಲಸಿಕೆ
ಕೋವಿಡ್ 19 ಲಸಿಕೆ
author img

By

Published : Nov 28, 2020, 3:28 AM IST

ನವದೆಹಲಿ: ಕೋವಿಡ್​ -19 ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಗೆ ಭೇಟಿ ನೀಡಲಿದ್ದಾರೆ. ನಂತರ ಭಾರತ್​ ಬಯೋಟೆಕ್​ ಕಂಪನಿಗೂ ಭೇಟಿ ನೀಡಲಿದ್ದು, ಕೊವಾಕ್ಸಿನ್ ತಯಾರಿಕೆಯ ಪ್ರಗತಿ ವೀಕ್ಷಿಸಲು ಹೈದರಾಬಾದ್​ಗೂ ತೆರಳಲಿದ್ದಾರೆ.

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕಡೆಯಿಂದ ' ಕೋವಿಶೀಲ್ಡ್'​ ಹೆಸರಿನ ಲಸಿಕೆಯ ಅಭಿವೃದ್ಧಿಪಡಿಸಲಾಗಿದೆ ಇದು ಎಸ್‌ಐಐ ನಲ್ಲಿ ಅಂತಿಮ ಪರೀಕ್ಷಾ ಹಂತದಲ್ಲಿದೆ. ಹೀಗಾಗಿ ಈ ಕುರಿತು ಮಾಹಿತಿ ಪಡೆಯಲು ಪ್ರಧಾನಿ ಆಗಮಿಸುತ್ತಿದ್ದು, ಮೋದಿಯವರ ಜೊತೆ ವಿದೇಶಿ ರಾಯಭಾರಿಗಳು ಸಹ ಆಗಮಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ.

  • Tomorrow, PM @narendramodi will embark on a 3 city visit to personally review the vaccine development & manufacturing process. He will visit the Zydus Biotech Park in Ahmedabad, Bharat Biotech in Hyderabad & Serum Institute of India in Pune.

    — PMO India (@PMOIndia) November 27, 2020 " class="align-text-top noRightClick twitterSection" data=" ">

ದೇಶದಲ್ಲಿ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳ ವೆಚ್ಚವನ್ನು ಸರ್ಕಾರಿ ಸಂಸ್ಥೆಯಾದ ಐಸಿಎಂಆರ್ ಭರಿಸುತ್ತಿದೆ. ಕೋವಿ‌ಶೀಲ್ಡ್ ಲಸಿಕೆಯ ಇತರ ವೆಚ್ಚಗಳನ್ನು ಸೀರಮ್ ಸಂಸ್ಥೆ ಭರಿಸುತ್ತಿದೆ.

ಪುಣೆಗೆ ಭೇಟಿ ನೀಡಿದ ನಂತರ ಮಧ್ಯಾಹ್ನ ಹೈದರಾಬಾದ್​ನ ಭಾರತ್ ಬಯೋಟೆಕ್​ ಲಸಿಕಾ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ನಂತರ ಹೈದರಾಬಾದ್​ನಿಂದ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.