ETV Bharat / bharat

ಮೋದಿ-ಪುಟಿನ್​​ ಮಾತುಕತೆ: ಭಾರತೀಯ ಪ್ರಜೆಗಳ ಸುರಕ್ಷಿತ ಸ್ಥಳಾಂತರದ ಬಗ್ಗೆ ಮಹತ್ವದ ಚರ್ಚೆ - ಉಕ್ರೇನ್​​ ರಷ್ಯಾ ಸಂಘರ್ಷ

ಉಕ್ರೇನ್​ನಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷರೊಂದಿಗೆ ಇಂದು ರಾತ್ರಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.

Modi spoke on phone today with Russian President

author img

By

Published : Mar 2, 2022, 10:56 PM IST

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಸುರಕ್ಷಿತವಾಗಿ ಈ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರುವ ಕೆಲಸ ನಡೆಯುತ್ತಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಮಹತ್ವದ ಮಾತುಕತೆ ನಡೆಸಿದರು.

  • PM Narendra Modi spoke on phone today with Russian President Vladimir Putin. The leaders reviewed the situation in Ukraine, especially in Kharkiv where many Indian students are stuck. They discussed the safe evacuation of the Indian nationals from the conflict areas.

    (File pics) pic.twitter.com/IUPgj0Dung

    — ANI (@ANI) March 2, 2022 " class="align-text-top noRightClick twitterSection" data=" ">

ದೂರವಾಣಿ ಮೂಲಕ ನಡೆದ ಮಾತುಕತೆಯಲ್ಲಿ ಉಕ್ರೇನ್​​ನಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗಿದ್ದು, ವಿಶೇಷವಾಗಿ ಖಾರ್ಕಿವ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನ ವಾಪಸ್​​ ಕರೆತರುವ ಬಗ್ಗೆ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು.

ಇದನ್ನೂ ಓದಿರಿ: ನವೀನ್ ಮೃತದೇಹ ತರಲು ಕೇಂದ್ರ ಸರ್ಕಾರದಿಂದ ನಿರಂತರ ಶ್ರಮ: ರಾಜನಾಥ್ ಸಿಂಗ್

ಮೋದಿ ಉನ್ನತ ಮಟ್ಟದ ಸಭೆ: ರಷ್ಯಾ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾದರು.

ಮುಂದುವರೆದ ರಷ್ಯಾ ದಾಳಿ: ಉಕ್ರೇನ್​ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿದೆ. ಹೀಗಾಗಿ ಝೈಟೊಮಿರ್​​ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ವಾಯುನೆಲೆ ಗುರಿಯಾಗಿಸಿ ನಡೆದ ದಾಳಿಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್​, ರಷ್ಯಾ ನಿಯೋಗಗಳ ಮಧ್ಯೆ ನಾಳೆ ಶಾಂತಿ ಮಾತುಕತೆ ನಡೆಯಲಿದೆ.

ರಷ್ಯಾ ವಿರೋಧವಾಗಿ 141 ದೇಶಗಳು ಮತ: ಉಕ್ರೇನ್ ಮೇಲೆ ದಾಳಿ ನಡೆಸಿತ್ತಿರುವ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ 141 ದೇಶಗಳು ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದು, 5 ದೇಶಗಳು ಪರವಾಗಿ ವೋಟ್ ಮಾಡಿವೆ. ಆದರೆ, ಭಾರತ ಸೇರಿದಂತೆ 35 ದೇಶಗಳು ತಟಸ್ಥವಾಗಿದ್ದು, ಯಾವುದೇ ವೋಟ್ ಮಾಡಿಲ್ಲ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 141 ದೇಶಗಳು ಉಕ್ರೇನ್​​ನಲ್ಲಿರುವ ರಷ್ಯಾ ಸೇನೆ ಹಿಂತೆಗೆದುಕೊಳ್ಳುವುದರ ಪರವಾಗಿ ಮತ ಚಲಾವಣೆ ಮಾಡಿದ್ದು, 5 ದೇಶಗಳು ಮಾತ್ರ ಈ ನಿರ್ಣಯದ ವಿರುದ್ಧ ಮತ ಹಾಕಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.