ETV Bharat / bharat

ಅಮೆರಿಕ​ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಪಿಎಂ ಮೋದಿ ಜೊತೆ ಬೈಡನ್​ ಮಾತುಕತೆ - ಪ್ರಧಾನಿ ನರೇಂದ್ರ ಮೋದಿ

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆ ಶಾಂತಿ ಮತ್ತು ಸುರಕ್ಷತೆಗಾಗಿ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ನಾವು ಎದುರು ನೋಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಜೊತೆ ಮಾತನಾಡಿದ ಬಳಿಕ ಪಿಎಂ ಮೋದಿ ಟ್ವೀಟ್​ ಮಾಡಿದ್ದಾರೆ.

Modi speaks to Biden
ಮೋದಿ - ಬೈಡನ್​
author img

By

Published : Feb 9, 2021, 7:17 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್​ ದೂರವಾಣಿ ಮೂಲಕ ಮಾತನಾಡಿದ್ದು, ಅನೇಕ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಬೈಡನ್​ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ದೇಶಗಳ ನಾಯಕರ ಮೊದಲ ಮಾತುಕತೆ ಇದಾಗಿದೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಪಿಎಂ ಮೋದಿ, ಬೈಡನ್​ ಅವರ ಯಶಸ್ಸಿಗೆ ನನ್ನ ಅಭಿನಂದನೆಗಳು. ನಾವು ಪ್ರಾದೇಶಿಕ ಸಮಸ್ಯೆಗಳು ಮತ್ತು ಅವುಗಳ ಆದ್ಯತೆ ಕುರಿತು ಚರ್ಚಿಸಿದ್ದೇವೆ. ಹವಾಮಾನ ಬದಲಾವಣೆಯ ವಿರುದ್ಧ ನಮ್ಮ ಸಹಭಾಗಿತ್ವ ಹೆಚ್ಚಿಸಲು ಒಪ್ಪಿದ್ದೇವೆ ಎಂದು ಹೇಳಿದ್ದಾರೆ.

  • President @JoeBiden and I are committed to a rules-based international order. We look forward to consolidating our strategic partnership to further peace and security in the Indo-Pacific region and beyond. @POTUS

    — Narendra Modi (@narendramodi) February 8, 2021 " class="align-text-top noRightClick twitterSection" data=" ">

ನಾನು ಮತ್ತು ಬೈಡನ್​​, ನಿಯಮ ಆಧಾರಿತ ಅಂತಾರಾಷ್ಟ್ರೀಯ ಆದೇಶಕ್ಕೆ ಬದ್ಧರಾಗಿರುವೆವು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆ ಶಾಂತಿ ಮತ್ತು ಸುರಕ್ಷತೆಗಾಗಿ ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ನಾವು ಎದುರು ನೋಡುತ್ತೇವೆ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

  • President Biden spoke to PM Modi, committing that US & India will work closely together to win fight against COVID-19 pandemic, renew their partnership on climate change, rebuild the global economy in a way that benefits the people of both countries: White House, Washington DC pic.twitter.com/AovAFerupZ

    — ANI (@ANI) February 8, 2021 " class="align-text-top noRightClick twitterSection" data=" ">

ವಾಷಿಂಗ್ಟನ್​ನ ಶ್ವೇತಭವನ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷ ಬೈಡನ್​ ಅವರು ಪಿಎಂ ಮೋದಿಯವರೊಂದಿಗೆ ಮಾತನಾಡಿದ್ದಾರೆ. ಕೋವಿಡ್​-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು, ಹವಾಮಾನ ಬದಲಾವಣೆಯ ಬಗ್ಗೆ ತಮ್ಮ ಸಹಭಾಗಿತ್ವವನ್ನು ಹೆಚ್ಚಿಸಲು ಹಾಗೂ ಜಾಗತಿಕ ಆರ್ಥಿಕತೆಯನ್ನು ಎರಡೂ ದೇಶಗಳ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪುನರ್​ನಿರ್ಮಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.