ETV Bharat / bharat

ಗುಜರಾತ್​ನಲ್ಲಿ ಮೋದಿ, ರಾಹುಲ್ ಗಾಂಧಿ ಚುನಾವಣಾ ರ‍್ಯಾಲಿ ಇಂದು - ಗುಜರಾತ್ ಚುನಾವಣೆಯ ಬಿಜೆಪಿಯ ಸ್ಟಾರ್ ಪ್ರಚಾರಕ

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯದ ದ್ವಾರಕಾ, ಸೋಮನಾಥ್, ಜುನಾಗಢ ಮತ್ತು ಕಛ್ ಜಿಲ್ಲೆಗಳಲ್ಲಿ ನಾಲ್ಕು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ದ್ವಾರಕಾ ಜಿಲ್ಲೆಯ ಖಂಬಲಿಯಾ ವಿಧಾನಸಭಾ ಕ್ಷೇತ್ರದಲ್ಲಿ ಷಾ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಕೋಡಿನಾರ್‌ನಲ್ಲಿರುವ ಸೋಮನಾಥದಲ್ಲಿ ಮತ್ತೊಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಗುಜರಾತ್​ನಲ್ಲಿ ಮೋದಿ, ರಾಹುಲ್ ಗಾಂಧಿ ಚುನಾವಣಾ ರ್ಯಾಲಿ ಇಂದು
modi rahul election rallies in gujarat today
author img

By

Published : Nov 21, 2022, 11:32 AM IST

ರಾಜ್‌ಕೋಟ್ (ಗುಜರಾತ್): ಮುಂಬರಲಿರುವ ಗುಜರಾತ್ ವಿಧಾನಸಭಾ ಚುನಾವಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತ್​ನಲ್ಲಿ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯದಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಜಯ ಸಂಕಲ್ಪ ಸಮ್ಮೇಳನ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ರ್ಯಾಲಿ ಸುರೇಂದ್ರನಗರದಲ್ಲಿ ಬೆಳಗ್ಗೆ 11 ಗಂಟೆಗೆ, ನಂತರ ಜಬುಸರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತು ನಂತರ ನವಸಾರಿಯಲ್ಲಿ ಮಧ್ಯಾಹ್ನ 3 ರ ಸುಮಾರಿಗೆ ನಡೆಯಲಿದೆ.

ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯದ ದ್ವಾರಕಾ, ಸೋಮನಾಥ್, ಜುನಾಗಢ ಮತ್ತು ಕಛ್ ಜಿಲ್ಲೆಗಳಲ್ಲಿ ನಾಲ್ಕು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ದ್ವಾರಕಾ ಜಿಲ್ಲೆಯ ಖಂಬಲಿಯಾ ವಿಧಾನಸಭಾ ಕ್ಷೇತ್ರದಲ್ಲಿ ಷಾ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಕೋಡಿನಾರ್‌ನಲ್ಲಿರುವ ಸೋಮನಾಥದಲ್ಲಿ ಮತ್ತೊಂದು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜುನಾಗಢ್‌ನ ಮಂಗ್ರೋಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಕಛ್‌ನ ಭುಜ್ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಮತ್ತು 4 ಗಂಟೆಗೆ ನಡೆಯಲಿವೆ ಇನ್ನೆರಡು ಸಭೆ ನಡೆಯಲಿವೆ.

ಗುಜರಾತ್ ಚುನಾವಣೆಯ ಬಿಜೆಪಿಯ ಸ್ಟಾರ್ ಪ್ರಚಾರಕರೂ ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹ್ಮದವಾಡ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶನಿವಾರ ಸಂಜೆ ತವರು ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವಲ್ಸಾದ್‌ನಲ್ಲಿ ರೋಡ್ ಶೋ ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ತಮ್ಮ ಚೊಚ್ಚಲ ರ‍್ಯಾಲಿಯನ್ನು ಇಂದು ರಾಜ್ಯದಲ್ಲಿ ನಡೆಸಲಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ, ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ಮೊದಲ ಬಾರಿಗೆ ಗುಜರಾತ್‌ನಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿ ಇದುವರೆಗೆ ರಾಜ್ಯದಲ್ಲಿ ಪ್ರಚಾರ ನಡೆಸಿಲ್ಲ.

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ರಾಹುಲ್ ಗಾಂಧಿ, ಮೊದಲ ಬಾರಿಗೆ ರಾಜ್‌ಕೋಟ್ ಮತ್ತು ಸೂರತ್‌ನಲ್ಲಿ ಎರಡು ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೂರತ್ ಜಿಲ್ಲೆಯ ಮಹುವಾ ಪಟ್ಟಣದ ಬಳಿ ಅನವಲ್ ಗ್ರಾಮದ ಪಂಚ್ ಕಾಕ್ಡಾ ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆಗೆ ಮೊದಲ ರ್ಯಾಲಿ ಹಾಗೂ ರಾಜಕೋಟ್​​ನ ಶಾಸ್ತ್ರಿ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಎರಡನೇ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.

ರಾಹುಲ್ ಗಾಂಧಿ ಸೆಪ್ಟೆಂಬರ್ 5 ರಂದು ಗುಜರಾತ್​ಗೆ ಬಂದಿದ್ದು, ಅದರ ನಂತರ ಮತ್ತೆ ಬಂದಿಲ್ಲ. ಆಗ ಅವರು ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಭಾರತ್ ಜೋಡೊ ಯಾತ್ರೆ ಆರಂಭವಾಗುವ ಎರಡು ದಿನಗಳ ಮುನ್ನ ಅವರು ಗುಜರಾತ್​ಗೆ ಬಂದಿದ್ದರು. ಈಗ ಮತ್ತೆ ಗುಜರಾತ್ ಭೇಟಿ ಹಿನ್ನೆಲೆಯಲ್ಲಿ ಸೋಮವಾರ ಭಾರತ್ ಜೋಡೊ ಯಾತ್ರೆಗೆ ವಿರಾಮವಿರಲಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.