ETV Bharat / bharat

ದಲಿತರನ್ನು ಕೊಂದಾಗ ಒಂದು ಮಾತೂ ಆಡದಿದ್ದರೆ ಅದು ಆಡಳಿತವೇ?: ಕಪಿಲ್ ಸಿಬಲ್ - ಮೋದಿ ವಿರುದ್ಧ ಕಪಿಲ್ ಸಿಬಲ್ ಆಕ್ರೋಶ

ಪ್ರಧಾನಿ ಮೋದಿ ಸಂಸತ್ತಿನಲ್ಲಿ ಜನರ ಪರವಾಗಿ ಮಾತನಾಡಿ ಹೊರಗೆ ಜನರನ್ನು ನಿಂದಿಸಿ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಆರೋಪಿಸಿದರು.

Modi not willing to understand others' point of view: Sibal
ದಲಿತರನ್ನು ಕೊಂದಾಗ ಒಂದು ಮಾತೂ ಆಡದಿದ್ದರೆ ಅದು ಆಡಳಿತವೇ?: ಕಪಿಲ್ ಸಿಬಲ್ ಪ್ರಶ್ನೆ
author img

By

Published : Oct 3, 2021, 10:24 AM IST

ಅಹಮದಾಬಾದ್(ಗುಜರಾತ್): ಪ್ರಧಾನಿ ಮೋದಿ ಬೇರೆ ಜನರ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಲು ಬಯಸುವುದಿಲ್ಲ. ಈ ನಡೆಯೇ ದೇಶದಲ್ಲಿ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್​ನಲ್ಲಿ 'ಮೋದಿ ಯುಗದಲ್ಲಿ ಭಾರತ' (India in the Age of Modi) ಎಂಬ ವಿಷಯದ ಕುರಿತು ಗಿರೀಶ್ ಪಟೇಲ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ಬದಲಾವಣೆ ಬಯಸುತ್ತಿರುವ ದೇಶದ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದ ಸೆಂಟ್ರಲ್ ವಿಸ್ಟಾದಂತಹ (ಹೊಸ ಸಂಸತ್ತು ಕಟ್ಟಡ) ಯೋಜನೆಗಳನ್ನು ಮಾಡುವುದರಿಂದ ಅವು ಪ್ರಜಾಪ್ರಭುತ್ವವನ್ನು ಪುಷ್ಠೀಕರಿಸುವುದಿಲ್ಲ ಎಂದು ಟೀಕಿಸಿದ್ದಾರೆ.

ಆ ಕಟ್ಟಡದೊಳಗಿನ ಜನರು ಹಲವು ಕಡೆಗಳಿಂದ ಬಂದಿದ್ದು, ವಿವಿಧ ಆಕಾಂಕ್ಷೆಗಳು ಅವರಿಗಿರುತ್ತವೆ. ನಿಮಗೆ ಬೇಕಾದ ಯಾವುದೇ ಕಟ್ಟಡಗಳನ್ನು ನೀವು ನಿರ್ಮಾಣ ಮಾಡಬಹುದು. ಆದರೆ ದೇಶದ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ನೀವು ಎಂದಿಗೂ ಪ್ರಜಾಪ್ರಭುತ್ವ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.

'ಇದು ಆಡಳಿತವೇ?'

ಸರ್ಕಾರ ರಚನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂದ ಘೋಷಣೆ ಮಾಡಿದ್ದರು. ಆದರೆ ವಾಸ್ತವದಲ್ಲಿ ಆ ಘೋಷಣೆಗೆ ವಿರುದ್ಧವಾದ ಸರ್ಕಾರವಿದ್ದು, ಗರಿಷ್ಠ ಸರ್ಕಾರವಿದ್ದು, ಆಡಳಿತವೇ ಇಲ್ಲ ಎಂದು ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಆಡಳಿತ ಎಲ್ಲಿದೆ?' ಎಂದು ಪ್ರಶ್ನಿಸಿರುವ ಅವರು, 'ಜನರನ್ನು ಅವರು ಧರಿಸುವ ಬಟ್ಟೆಯಿಂದ ಗುರುತಿಸಿದರೆ, ಇದು ಆಡಳಿತವೇ?', 'ದಲಿತರನ್ನು ಕೊಂದಾಗ ಒಂದು ಮಾತೂ ಆಡದಿದ್ದರೆ ಅದು ಆಡಳಿತವೇ?', 'ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದಿದ್ದರೆ, ವ್ಯಾಕ್ಸಿನ್ ಸರಿಯಾಗಿ ಪೂರೈಕೆಯಾಗದಿದ್ದರೆ ಅದು ಆಡಳಿತವೇ?' ಎಂದು ಪ್ರಶ್ನಿಸಿದ್ದಾರೆ.

ಭಾರತದ ಪ್ರಧಾನಿಯೊಬ್ಬರು ದೇಶದ 130 ಕೋಟಿ ಜನರ ಪರವಾಗಿ ಮಾತನಾಡಬೇಕು. ಆದರೆ ಮೋದಿ ಸಂಸತ್ತಿನಲ್ಲಿ ಜನರ ಪರವಾಗಿ ಮಾತನಾಡಿ, ಹೊರಗೆ ಜನರನ್ನು ನಿಂದಿಸಿ ಮಾತನಾಡುತ್ತಾರೆ ಎಂದು ಕಪಿಲ್ ಸಿಬಲ್ ಆರೋಪಿಸಿದರು.

ದೇಶದಲ್ಲಿ ಪ್ರಸ್ತುತ ನಿರುದ್ಯೋಗ ದರವು ಶೇಕಡಾ 6.1ರಷ್ಟಿದೆ. ಇದು 41 ವರ್ಷಗಳಲ್ಲಿ ಅತಿ ಹೆಚ್ಚು. 25 ಮಿಲಿಯನ್ ಜನರು ಜನವರಿ 2021ರಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಬಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ರೇವ್‌ ಪಾರ್ಟಿ: ಬಾಲಿವುಡ್‌ 'ಸೂಪರ್‌ ಸ್ಟಾರ್‌' ಪುತ್ರ ಸೇರಿ ಹಲವರು ಎನ್‌ಸಿಬಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.