ನವದೆಹಲಿ : ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಅಮೆರಿಕದ ಸೆನೆಟರ್ ಜಾನ್ ಕಾರ್ನಿನ್(Senator John Cornyn) ನೇತೃತ್ವದ ಅಮೆರಿಕದ ಸಂಸದರ ನಿಯೋಗವನ್ನು (US Congressional delegation) ಭೇಟಿಯಾಗಿ ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಭಯೋತ್ಪಾದನೆ, ಹವಾಮಾನ ಬದಲಾವಣೆ ಚರ್ಚೆ ನಡೆಸಿದ್ದಾರೆ.
ದಕ್ಷಿಣ ಏಷ್ಯಾ ಮತ್ತು ಇಂಡೋ-ಪೆಸಿಫಿಕ್ ಪ್ರದೇಶ ( Indo-Pacific region) ಸೇರಿದಂತೆ ಪರಸ್ಪರ ಹಿತಾಸಕ್ತಿ ಇರುವ ಪ್ರಾದೇಶಿಕ ವಿಷಯಗಳ ಕುರಿತು ಪ್ರಧಾನಿ ಮತ್ತು ಅಮೆರಿಕದ ನಿಯೋಗದ ನಡುವೆ ಸ್ಪಷ್ಟ ಚರ್ಚೆ ನಡೆದಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆ ನೀಡಿದೆ.
ಅಮೆರಿಕ ಮತ್ತು ಭಾರತ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಈಗಿರುವ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಅಮೆರಿಕ ಸಂಸತ್ನ ಸ್ಥಿರವಾದ ಬೆಂಬಲವನ್ನು ಮತ್ತು ಪಾತ್ರವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.
ಭಾರತದಲ್ಲಿ ಕೋವಿಡ್ ನಿಯಂತ್ರಣವನ್ನು ಅಮೆರಿಕದ ಸಂಸದರ ನಿಯೋಗ ಗಮನಿಸಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಅಮೆರಿಕದ ಸಂಸದರ ನಿಯೋಗದಲ್ಲಿ ಸೆನೆಟರ್ ಮೈಕೆಲ್ ಕ್ರಾಪೊ, ಸೆನೆಟರ್ ಥಾಮಸ್ ಟ್ಯೂಬರ್‌ವಿಲ್ಲೆ, ಸೆನೆಟರ್ ಮೈಕೆಲ್ ಲೀ, ಕಾಂಗ್ರೆಸ್‌ನ ಟೋನಿ ಗೊನ್ಜಾಲ್ಸ್ ಮತ್ತು ಜಾನ್ ಕೆವಿನ್ ಎಲಿಜೆ ಇದ್ದರು.
ಇದನ್ನೂ ಓದಿ: Gadchiroli encounter.. ಮಹಾರಾಷ್ಟ್ರದಲ್ಲಿ 26 ನಕ್ಸಲರ ಬೇಟೆಯಾಡಿದ ಪೊಲೀಸರು