ETV Bharat / bharat

ಪ್ರಧಾನಿ ಮೋದಿ ದೇಶದ ಜನರಿಗೆ 'ನಂಬಿಕೆಯ ಲಸಿಕೆ' ಚುಚ್ಚಿದ್ದಾರೆ : ಬಿಜೆಪಿ ವಕ್ತಾರ ಸುದೇಶ್ ವರ್ಮಾ

ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಬಿಜೆಪಿ ವಕ್ತಾರ ಸುದೇಶ್ ವರ್ಮಾ ಶ್ಲಾಘಿಸಿದ್ದಾರೆ.

author img

By

Published : Mar 1, 2021, 3:55 PM IST

BJP leaders react to Modi getting vaccine
ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಸುದೇಶ್ ವರ್ಮಾ

ನವದೆಹಲಿ : ಭಾರತ್ ಬಯೋಟೆಕ್​​ನ ಕೊವ್ಯಾಕ್ಸಿನ್ ಕೋವಿಡ್​ ಲಸಿಕೆ ಪಡೆಯುವ ಮೂಲಕ ಪ್ರಧಾನಿ ಮೋದಿ ದೇಶದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೋವಿಡ್​ ವಿರುದ್ಧದ ಹೋರಾಟವನ್ನು ಮುನ್ನಡೆಸುವ ಮೂಲಕ ಅನುಮಾನಗಳನ್ನು ಹೋಗಲಾಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ ಹೇಳಿದ್ದಾರೆ.

ಪ್ರಧಾನಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದರೂ, ಪ್ರಧಾನಿ ಮೋದಿ ತನ್ನ ಸರದಿ ಬರುವವರೆಗೆ ಕಾದು ರಾಷ್ಟ್ರಕ್ಕೆ ಒಂದು ಉದಾಹರಣೆಯಾಗಿದ್ದಾರೆ ಎಂದಿದ್ದಾರೆ.

ಓದಿ : ನಮಗೆ ವಯಸ್ಸಾಯ್ತು.. ಯುವಕರಿಗೆ ಮೊದಲು ಕೋವಿಡ್ ಲಸಿಕೆ ನೀಡಿ: ಮಲ್ಲಿಕಾರ್ಜುನ ಖರ್ಗೆ!

ಪ್ರಧಾನಿ ಮೋದಿ ಕೋವಿಡ್ ಲಸಿಕೆ ಪಡೆಯುವ ಮೂಲಕ ದೇಶದ ಜನರಲ್ಲಿ ನಂಬಿಕೆಯ ಲಸಿಕೆ ಚುಚ್ಚಿದ್ದಾರೆ. ಜೊತೆಗೆ ಜೈವಿಕ ತಂತ್ರಜ್ಞಾನ ಸಂಸ್ಥೆ ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಸ್ವದೇಶಿ ಲಸಿಕೆಯ ಕುರಿತ ಗೊಂದಲಗಳನ್ನು ಹೋಗಲಾಡಿಸಿದ್ದಾರೆ. ಈ ಮೂಲಕ ಮೋದಿಯವರು ರಾಷ್ಟ್ರದ ಕಲ್ಯಾಣವನ್ನು ಯೋಚಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ವರ್ಮಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.