ETV Bharat / bharat

ಮೋದಿ ಸರ್ಕಾರವು ಯುವಕರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ: ರಾಹುಲ್​ ಗಾಂಧಿ ಆರೋಪ

ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಅನ್ನು ಸಾಧನವಾಗಿ ಬಳಸಿಕೊಂಡು ಈ ದೇಶದ ಯುವಕರ ಧ್ವನಿ "ಹತ್ತಿಕ್ಕುತ್ತಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

author img

By

Published : Aug 5, 2021, 8:07 PM IST

rahul gandhi
ರಾಹುಲ್​ ಗಾಂಧಿ ಆರೋಪ

ನವದೆಹಲಿ: ಪೆಗಾಸಸ್ ಸ್ಪೈವೇರ್ ಅನ್ನು ಸಾಧನವಾಗಿ ಬಳಸಿಕೊಂಡು ಈ ದೇಶದ ಯುವಕರ ಧ್ವನಿಯನ್ನು "ಹತ್ತಿಕ್ಕುತ್ತಿದೆ" ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ ಸರ್ಕಾರವು ಯುವಕರ ಫೋನ್ ಒಳಗೆ ಪೆಗಾಸಸ್ ಅನ್ನು ಇರಿಸಿದೆ ಎಂದು ರಾಹುಲ್​​ ಆರೋಪಿಸಿದ್ರು.

ದೆಹಲಿಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಆಯೋಜಿಸಿದ್ದ "ಸಂಸತ್​ ಘೇರಾವ್" ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ದಯವಿಟ್ಟು ನೆನಪಿಡಿ, ನಿಮ್ಮ ಫೋನ್ ನಿಮ್ಮ ಧ್ವನಿಯಾಗಿದೆ. ನಿಮ್ಮ ಫೋನ್ ಮೂಲಕ ನಿಮ್ಮ ಅಭಿಪ್ರಾಯವನ್ನು ನೀವು ವ್ಯಕ್ತಪಡಿಸಬಹುದು. ನರೇಂದ್ರ ಮೋದಿಯವರು ನಿಮ್ಮ ಫೋನ್ ಒಳಗೆ ಪೆಗಾಸಸ್ ಹಾಕಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.

ಕೇವಲ ನನ್ನ ಫೋನಿನಲ್ಲಿ ಮಾತ್ರವಲ್ಲ, ಪೆಗಾಸಸ್ ಅನ್ನು ಮೋದಿಯವರು ಈ ದೇಶದ ಯುವಕರ ಫೋನ್‌ಗಳಲ್ಲಿ ಅಳವಡಿಸಿದ್ದಾರೆ. ನೀವು ಸತ್ಯ ನುಡಿದ್ರೆ, ಪೆಗಾಸಸ್ ನಿಮ್ಮ ಫೋನಿನೊಳಗೆ ಇರುತ್ತೆ'' ಎಂದರು.

ರಾಹುಲ್​ ಗಾಂಧಿ ಆರೋಪ

"ಮೋದಿ ಸರ್ಕಾರವು ಸಣ್ಣ ಕೈಗಾರಿಕೋದ್ಯಮಿಗಳು, ಯುವಕರು ಮತ್ತು ಸಾಮಾನ್ಯ ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರ ಪಾಲುದಾರಿಕೆ ಕೇವಲ ಎರಡು ಅಥವಾ ಮೂರು ಕೈಗಾರಿಕೋದ್ಯಮಿಗಳೊಂದಿಗೆ ಮಾತ್ರ. ಅವರ ಗುರಿ ಭಾರತದ ಯುವಕರ ಧ್ವನಿಯನ್ನು ಹತ್ತಿಕ್ಕುವುದು. ಭಾರತದ ಯುವಕರು ಸತ್ಯವನ್ನು ಹೇಳಲು ಆರಂಭಿಸಿದ ದಿನ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಏನೆಂದು ಬಹಿರಂಗಗೊಳ್ಳುತ್ತದೆ ಎಂದು ತಿಳಿದಿದೆ.

ಮೋದಿ ಸರ್ಕಾರ ಅಧಿಕಾರದಲ್ಲಿರುವವರೆಗೂ ಈ ರಾಷ್ಟ್ರದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಕೈಗಾರಿಕೋದ್ಯಮಿಗಳೊಂದಿಗಿನ ಮೋದಿಯ ಪಾಲುದಾರಿಕೆಯು ನಮ್ಮ ಯುವಕರ ಭವಿಷ್ಯದ ಮೇಲೆ ದಾಳಿ ಮಾಡುತ್ತಿದೆ." ಎಂದು ವಾಗ್ದಾಳಿ ನಡೆಸಿದ್ರು.

ಪೆಗಾಸಸ್ ಮತ್ತು ಕೃಷಿ ಕಾನೂನುಗಳ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಐವೈಸಿ "ಸಂಸತ್ ಘೇರಾವ್" ಅನ್ನು ಆಯೋಜಿಸಿತ್ತು. ಸಂಸತ್ತಿನ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ದೇಶಾದ್ಯಂತ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು. ರಾಹುಲ್ ಗಾಂಧಿಯವರಲ್ಲದೇ, ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್, ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.