ETV Bharat / bharat

ಮೋದಿ ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ.. ಆದರೆ, ಅದರಂತೆ ನಡೆಯಲ್ಲ: ಖರ್ಗೆ ಟೀಕೆ

author img

By

Published : Apr 6, 2023, 2:08 PM IST

ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಪ್ರತಿಪಕ್ಷಗಳು ಸಂಸದರು ಗುರುವಾರ ಸಂಸತ್ತಿನಿಂದ ವಿಜಯ್ ಚೌಕ್‌ಗೆ ತಿರಂಗಾ ಜಾಥಾ ಕೈಗೊಂಡಿದ್ದರು.

Modi govt talks lot about democracy but does not walk the talk: Cong chief
ಮೋದಿ ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ... ಆದರೆ, ಅದರಂತೆ ನಡೆಯಲ್ಲ: ಖರ್ಗೆ ಟೀಕೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಕೂಡ ಸುಗಮ ಕಲಾಪ ನಡೆಯಲಿಲ್ಲ. ಎರಡನೇ ಹಂತದ ಅಧಿವೇಶನದ ಆರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಲಂಡನ್​ನಲ್ಲಿ ದೇಶದ ಪ್ರಜಾಪ್ರಭುತ್ವದ ನೀಡಿದ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಡಳಿತಾರೂಢ ಬಿಜೆಪಿ ಉಭಯ ಸದನದಲ್ಲಿ ಒತ್ತಾಯಿಸಿತ್ತು. ಮತ್ತೊಂದೆಡೆ, ಉದ್ಯಮಿ ಗೌತಮ್​ ಅದಾನಿ ವಿಷಯದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಬೇಲು ಎಂದು ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಹಿಡಿದ್ದವು. ಕೊನೆಯ ದಿನವಾದ ಇಂದು ಸಹ ಅದಾನಿ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದವು. ಇದರ ನಡುವೆ ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿತ್ತು.

ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ತಕ್ಷಣವೇ ಪ್ರತಿಪಕ್ಷಗಳು ಸಂಸದರು ಗುರುವಾರ ಸಂಸತ್ತಿನಿಂದ ವಿಜಯ್ ಚೌಕ್‌ಗೆ ತಿರಂಗಾ ಜಾಥಾ ಕೈಗೊಂಡಿದರು. ಇದರ ನಡುವೆ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಬಿಜೆಪಿ ಬೆಳಗ್ಗೆ ಸಂಸತ್ತಿನಲ್ಲಿ ಸಂಸದೀಯ ಪಕ್ಷದ ಸಭೆಯನ್ನು ನಡೆಸಿತು. ಏತನ್ಮಧ್ಯೆ, ಇಂದು ಲೋಕಸಭೆ ಸ್ಪೀಕರ್ ಆಯೋಜಿಸುವ Evening Tea ಸಭೆ ಕರೆದಿದ್ದಾರೆ. ಆದರೆ, ಇದರಿಂದ ಪ್ರತಿಪಕ್ಷಗಳು ದೂರ ಉಳಿಯಲು ನಿರ್ಧರಿಸಿವೆ ಎಂದು ವರದಿಯಾಗಿದೆ.

  • #WATCH | Delhi: They didn’t do any other work other than putting a new engine in old trains and then flagging it off along with a long speech. For launching a train, what is the need of you (PM Modi), you have local MPs for it: Mallikarjun Kharge, Congress National President pic.twitter.com/fnOdRrJQUb

    — ANI (@ANI) April 6, 2023 " class="align-text-top noRightClick twitterSection" data=" ">

ಆಡಳಿತ ಪಕ್ಷದಿಂದ ಗೊಂದಲ ಸೃಷ್ಟಿ - ಖರ್ಗೆ ಟೀಕೆ: ತಿರಂಗಾ ಜಾಥಾದ ನಂತರ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಪ್ರತಿಪಕ್ಷಗಳ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹವಾಗಿದೆ. ಆದರೆ, ಇದರ ಗಮನವನ್ನು ಬೇರೆಡೆ ಸೆಳೆಯಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆ. ಪ್ರಜಾಸತ್ತಾತ್ಮಕ ತತ್ವಗಳಡಿ ಸರ್ಕಾರ ನಡೆದುಕೊಳ್ಳುತ್ತಿಲ್ಲ ಮತ್ತು ಸಂಸತ್ತಿನಲ್ಲಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.

  • #WATCH | Delhi: The Modi govt speaks a lot about democracy but what they say they don’t reflect that in their actions: Mallikarjun Kharge, Congress National President pic.twitter.com/E5R0gh55Wf

ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆದರೆ, ಸರ್ಕಾರ ತಾನೇ ಏನು ಹೇಳುತ್ತಿದೆ. ಅದನ್ನೇ ಅನುಸರಿಸುತ್ತಿಲ್ಲ. 50 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಕೇವಲ 12 ನಿಮಿಷಗಳಲ್ಲಿ ಅಂಗೀಕರಿಸಲಾಗಿದೆ. ಆದರೆ, ಬಿಜೆಪಿಯವರು ಯಾವಾಗಲೂ ಪ್ರತಿಪಕ್ಷಗಳಿಗೆ ಯಾವುದೇ ಆಸಕ್ತಿಯಿಲ್ಲ ಎಂದು ಆರೋಪಿಸುತ್ತಾರೆ. ಆಡಳಿತ ಪಕ್ಷದಿಂದ ಗೊಂದಲ ಸೃಷ್ಟಿಯಾಗಿದೆ. ನಾವು ಬೇಡಿಕೆ ಇಟ್ಟಾಗಲೆಲ್ಲ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. 52 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹದ್ದನ್ನು ನಾನು ಮೊದಲ ಬಾರಿಗೆ ನೀಡುತ್ತೇನೆ. ಹಿಂದೆಂದೂ ಇಂತಹ ಘಟನೆ ನಡೆದಿರಲಿಲ್ಲ ಎಂದು ಕಿಡಿಕಾರಿದರು.

ಸರ್ಕಾರವೇ ಬಜೆಟ್ ಅಧಿವೇಶನವನ್ನು ಹಾಳು ಮಾಡಲು ಕಾರಣ. ಈ ಧೋರಣೆಯನ್ನು ನಾವು ಖಂಡಿಸುತ್ತೇವೆ. ಇದೇ ರೀತಿ ಮುಂದುವರಿದರೆ, ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತದೆ. ನಾವು ಸರ್ವಾಧಿಕಾರದತ್ತ ಸಾಗುತ್ತೇವೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ, 18ರಿಂದ 19 ಪ್ರತಿಪಕ್ಷಗಳು ಅದಾನಿ ವಿಷಯದ ಬಗ್ಗೆ ಧ್ವನಿ ಎತ್ತಿವೆ. ಅದಾನಿ ಸಂಪತ್ತು ಕೇವಲ 2 ರಿಂದ 2.5 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂ.ಗೆ ಹೇಗೆ ಹೆಚ್ಚಾಯಿತು ಎಂದು ಪ್ರಶ್ನೆ ಮಾಡುತ್ತಿವೆ. ಈ ಸಂಬಂಧ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಆದರೆ, ಬಿಜೆಪಿಗೆ ಬಹುಮತವಿದೆ ಎಂದಾಗಲೂ ಜಂಟಿ ಸಂಸದೀಯ ಸಮಿತಿ ತನಿಖೆಗೆ ಏಕೆ ಭಯಪಡುತ್ತೀರಿ?, ಏನೋ ಮೀನಮೇಷ ಎಣಿಸುತ್ತದೆ. ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆಗೆ ಆದೇಶಿಸಲು ಸರ್ಕಾರ ಒಪ್ಪುತ್ತಿಲ್ಲ. ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಸರ್ಕಾರ ಉತ್ತರಿಸಲಿಲ್ಲ. ಬದಲಿಗೆ ಲಂಡನ್​ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕ್ಷಮೆಯಾಚನೆಗೆ ಒತ್ತಾಯಿಸುವ ಮೂಲಕ ಗಮನವನ್ನು ಬೇರೆಡೆಗೆ ತಿರುಗಿಸಿತು ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಬಿಡಲು ರಾಹುಲ್​ ಗಾಂಧಿ ಕಾರಣ, ಮೋದಿ ಚತುರ ಆಡಳಿತಗಾರ: ಗುಲಾಂ ನಬಿ ಆಜಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.