ನವದೆಹಲಿ: ಕಳೆದ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಆರ್ಥಿಕ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಆಡಳಿತದ ವಿರುದ್ಧ ಟ್ವೀಟ್ ಮಾಡಿರುವ ಅವರು ಆರ್ಥಿಕ ಬೆಳವಣಿಗೆ ದರ 2016ರಿಂದ ಸತತವಾಗಿ ಕುಸಿಯುತ್ತಿದೆ. ರಾಷ್ಟ್ರೀಯ ಭದ್ರತೆಯು ದುರ್ಬಲಗೊಂಡಿದೆ. ಭಾರತ-ಚೀನಾ ಸಂಬಂಧವನ್ನು ಮತ್ತೆ ಹಳಿಗೆ ತರಲು ಅವಕಾಶವಿದ್ದು, ಆ ಅವಕಾಶವನ್ನು ಮೋದಿ ನಿರ್ಲಕ್ಷಿಸಿದ್ದಾರೆ. ಆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬುದು ಮೋದಿಗೆ ಗೊತ್ತಿದೆಯೇ ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸಮಸ್ಯೆಗಳನ್ನು ಪರಿಹರಿಸಲು ನೀವು ಏನು ಸಲಹೆ ನೀಡುತ್ತೀರಿ ಎಂದು ಟ್ವೀಟ್ನಲ್ಲಿ ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸುಬ್ರಮಣಿಯನ್ ಸ್ವಾಮಿ, ಪ್ರಾಚೀನ ಕಾಲದ ಋಷಿಗಳು ಜ್ಞಾನವನ್ನು ಹೊಂದಿರುವವರಿಗೆ ಜ್ಞಾನವನ್ನು ನೀಡಬೇಕು ಎಂದು ಸಲಹೆ ನೀಡುತ್ತಾರೆ. ಪ್ರಸ್ತುತ ಪ್ರಧಾನಿಗೆ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
-
In 8 years in office we see that Modi has failed to achieve targets of economic growth. On the contrary, growth rate has declined annually since 2016. National security has weakened hugely. Modi inexplicably is clueless about China. There is scope to recover but does he know how?
— Subramanian Swamy (@Swamy39) April 19, 2022 " class="align-text-top noRightClick twitterSection" data="
">In 8 years in office we see that Modi has failed to achieve targets of economic growth. On the contrary, growth rate has declined annually since 2016. National security has weakened hugely. Modi inexplicably is clueless about China. There is scope to recover but does he know how?
— Subramanian Swamy (@Swamy39) April 19, 2022In 8 years in office we see that Modi has failed to achieve targets of economic growth. On the contrary, growth rate has declined annually since 2016. National security has weakened hugely. Modi inexplicably is clueless about China. There is scope to recover but does he know how?
— Subramanian Swamy (@Swamy39) April 19, 2022
ಮತ್ತೊಬ್ಬ ಟ್ವಿಟರ್ ಬಳಕೆದಾರರು ಸಬ್ರಮಣಿಯನ್ ಸ್ವಾಮಿ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಕಾಮೆಂಟ್ ಮಾಡಿದ್ದು, ಪ್ರಧಾನಿ ಕುರ್ಚಿಯಲ್ಲಿ ಬೇರೆಯವರು ಇದ್ದಿದ್ದರೆ ನಮ್ಮ ಪರಿಸ್ಥಿತಿ ಈಗಿರುವುದಕ್ಕಿಂತ ಹದಗೆಡುತ್ತಿತ್ತು. ಬಹುಶಃ ಪಾಕಿಸ್ತಾನ ಅಥವಾ ಶ್ರೀಲಂಕಾದ ಪರಿಸ್ಥಿತಿ ನಮಗೆ ಬರುತ್ತಿತ್ತು. ಹೊಸ ಪ್ರಧಾನಿ ಬಂದ ನಂತರ ಮೋದಿಯವರ ಮಹತ್ವ ತಿಳಿಯಲಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿ ಅವರು ಬ್ರಿಟಿಷರು ಭಾರತ ಛಿದ್ರವಾಗುತ್ತದೆ ಎಂದು ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಹೇಳಿದ್ದರು ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮಥುರಾ-ವೃಂದಾವನದಲ್ಲಿ ಮದ್ಯ-ಮಾಂಸ ಮಾರಾಟ ನಿಷೇಧ ಪ್ರಶ್ನಿಸಿದ್ದ ಪಿಐಎಲ್ ವಜಾ