ETV Bharat / bharat

ಕೇಜ್ರಿವಾಲ್ ರೋಡ್ ಶೋ ವೇಳೆ ಎಎಪಿ ಶಾಸಕ ಸೇರಿ ಮೂವರ ಫೋನ್​ ಕಳ್ಳತನ - municipal elections in Delhi

ಮುಂಬರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಿನ್ನೆ ನಡೆದ ರೋಡ್ ಶೋ ವೇಳೆ ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಸೇರಿದಂತೆ ಇನ್ನಿಬ್ಬರ ಮೊಬೈಲ್ ಫೋನ್‌ಗಳನ್ನು ಖದೀಮರು ಎಗರಿಸಿದ್ದಾರೆ.

Kejriwals roadshow
ಕೇಜ್ರಿವಾಲ್ ರೋಡ್ ಶೋ
author img

By

Published : Dec 1, 2022, 9:57 AM IST

ನವದೆಹಲಿ: ಉತ್ತರ ದೆಹಲಿಯ ಮಲ್ಕಾಗಂಜ್ ಪ್ರದೇಶದಲ್ಲಿ ಬುಧವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ರೋಡ್ ಶೋ ವೇಳೆ ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಸೇರಿದಂತೆ ಇನ್ನಿಬ್ಬರ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಎಲ್​ಎ ಅಖಿಲೇಶ್ ಪತಿ ತ್ರಿಪಾಠಿ, ಆಪ್ ಶಾಸಕ ಸೋಮನಾಥ್ ಭಾರ್ತಿ ಅವರ ಕಾರ್ಯದರ್ಶಿ ಮತ್ತು ಗುಡ್ಡಿ ದೇವಿ ಎಂಬುವರು ತಮ್ಮ ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ಇದನ್ನೂ ಓದಿ: ನಾನು ಭಯೋತ್ಪಾದಕನಲ್ಲ, ಭ್ರಷ್ಟನೂ ಅಲ್ಲ, ಜನರ ಪ್ರೀತಿಪಾತ್ರನು: ಸಿಎಂ ಕೇಜ್ರಿವಾಲ್

ದೆಹಲಿಯಲ್ಲಿ ಮುಂಬರುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈಗಿನಿಂದಲೇ ರೋಡ್‌ಶೋ ನಡೆಸುವ ಮೂಲಕ ಮತ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆ ಆಮ್ ಆದ್ಮಿ ಪಕ್ಷದ ಧ್ವಜಗಳು ಮತ್ತು ಕೇಜ್ರಿವಾಲ್ ಬ್ಯಾನರ್‌ಗಳನ್ನು ಹೊತ್ತ ಸಾವಿರಾರು ಜನ ಚಂದ್ರವಾಲ್ ರಸ್ತೆಯಲ್ಲಿ ಜಮಾಯಿಸಿ, ಕೇಜ್ರಿವಾಲ್ ಪರ ಜಯಘೋಷ ಕೂಗಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.