ಚಂಡಿಗಡ: ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಹರಿಯಾಣದ 17 ಜಿಲ್ಲೆಗಳಲ್ಲಿ ಜನವರಿ 30ರ ಸಂಜೆ 5ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸೋನಿಪತ್, ಜಜ್ಜರ್, ಪಾಲ್ವಾಲ್, ಅಂಬಾಲಾ, ಯಮುನಾ ನಗರ, ಕುರುಕ್ಷೇತ್ರ, ಕರ್ನಾಲ್, ಕೈತಾಲ್, ಪಾಣಿಪತ್, ಹಿಸಾರ್, ಜಿಂದ್, ರೋಹ್ಟಕ್, ಭಿವಾನಿ, ಚಾರ್ಖಿ ದಾದ್ರಿ, ರೇವಾರಿ, ಫತೇಹಾಬಾದ್ ಮತ್ತು ಸಿರ್ಸಾಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 2017ರ ನಿಯಮ 2ರ ಅಡಿಯಲ್ಲಿ ಟೆಲಿಕಾಂ ತಾತ್ಕಾಲಿಕ ಸೇವಾ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳು ಹಾಗೂ 2017ರ ನಿಯಮ 2ರ ಅಡಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.