ಪೂಂಪುಹಾರ್(ತಮಿಳುನಾಡು): ತಿರುವಿಡೈಕಾಳಿ-ಮೈಲಿಯಾಡುತುರೈ ನಡುವಿನ ಬಸ್ ಸಂಚಾರಕ್ಕೆ ಸುಮಾರು ಐದು ವರ್ಷಗಳ ನಂತರ ಇಂದು ಚಾಲನೆ ನೀಡಲಾಯಿತು. ಶಾಸಕ ನಿವೇದಾ ಮುರುಗನ್ ಬಸ್ ಸಂಚಾರಕ್ಕೆ ಚಾಲನೆ ನೀಡುವ ಜೊತೆಗೆ ಡ್ರೈವರ್ ಆಗಿ ಕೆಲ ಹೊತ್ತು ಸೇವೆ ಸಲ್ಲಿಸಿದರು.
ಪೂಂಪುಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಬರುವ ತಿರುವಿಡೈಕಾಳಿ ಶಾಸಕರಾಗಿರುವ ನಿವೇದಾ ಮುರುಗನ್ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿರುವ ಬೆನ್ನಲ್ಲೇ ಪ್ರಯಾಣಿಕರನ್ನ ಹತ್ತಿಸಿಕೊಂಡು ಸುಮಾರು ಆರು ಕಿಲೋಮೀಟರ್ ಡ್ರೈವ್ ಮಾಡಿದ್ದು, ಇದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದೆ ಸಂಬಳ ಹೆಚ್ಚಿಸುವಂತೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಕೆ.ಆರ್. ರಾಜಕೃಷ್ಣನ್ ಬಸ್ ಚಾಲನೆ ಮಾಡಿ ಗಮನ ಸೆಳೆದಿದ್ದರು. ಇವರು, ಆಂಧಿಯೂರಿನಿಂದ ಭವಾನಿವರೆಗೆ ಬಸ್ ಡ್ರೈವ್ ಮಾಡಿ ಅನೇಕ ಪ್ರಯಾಣಿಕರನ್ನ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ