ETV Bharat / bharat

ಸುವೇಂದು ಬೆನ್ನಲ್ಲೇ ಶಿಲ್​ಬದ್ರಾ ರಾಜೀನಾಮೆ: ಅಧಿಕಾರಿ ರಾಜೀನಾಮೆ ರಿಜೆಕ್ಟ್​ ಮಾಡಿದ ಸ್ಪೀಕರ್​ - ಪಶ್ಷಿಮ ಬಂಗಾಳ ಸುವೆಂದು ಅಧಿಕಾರಿ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬಾರಕ್​ಪೊರ್​ ಶಾಸಕ ಶಿಲ್​ಬದ್ರಾ ದತ್ತಾ ಸಹ ರಾಜಿನಾಮೆ ಪತ್ರವನ್ನು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಮಧ್ಯೆ ಸುವೇಂದು ಅಧಿಕಾರಿ ರಾಜೀನಾಮೆ ಅಂಗೀಕರಿಸಲು ಸ್ಪೀಕರ್​ ನಿರಾಕರಿಸಿದ್ದಾರೆ.

ಶಾಸಕ ಶಿಲ್​ಬದ್ರಾ ದತ್ತಾ
ಶಾಸಕ ಶಿಲ್​ಬದ್ರಾ ದತ್ತಾ
author img

By

Published : Dec 18, 2020, 5:30 PM IST

ಪಶ್ಷಿಮ ಬಂಗಾಳ: ಮಾಜಿ ಸಾರಿಗೆ ಸಚಿವ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್​ಗೆ ರಾಜಿನಾಮೆ ನೀಡಿದ ಒಂದು ದಿನದ ಬಳಿಕ ಬಾರಕ್​ಪೊರ್​ ಶಾಸಕ ಶಿಲ್​ಬದ್ರಾ ದತ್ತಾ ಸಹ ರಾಜಿನಾಮೆ ಪತ್ರವನ್ನು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಕಳುಹಿಸಿ ಕೊಟ್ಟಿದ್ದಾರೆ.

"ನಾನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷ ಮತ್ತು ಅದರ ಸಹವರ್ತಿ ಸಂಘಟನೆಯಲ್ಲಿ ನಾನು ಹೊಂದಿರುವ ಎಲ್ಲ ಇತರ ಸ್ಥಾನಗಳನ್ನು ಕೂಡಲೇ ತ್ಯಜಿಸುತ್ತಿದ್ದೇನೆ" ಎಂದು ರಾಜಿನಾಮೆ ಪತ್ರದಲ್ಲಿ ಬರೆದಿದ್ದಾರೆ.

ಪಕ್ಷದ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಅವರ ತಂಡವನ್ನು ಭೇಟಿಯಾಗಲು ದತ್ತಾ ಈ ಹಿಂದೆ ನಿರಾಕರಿಸಿದ್ದರು. ಡಿ.17ರಂದು ಪಾಂಡಬೇಶ್ವರ ಶಾಸಕ ಮತ್ತು ಟಿಎಂಸಿಯ ಪಾಸ್ಚಿಮ್ ಬರ್ಧಮನ್ ಜಿಲ್ಲಾ ಘಟಕದ ಅಧ್ಯಕ್ಷ ಜಿತೇಂದ್ರ ತಿವಾರಿ ಅವರು ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ನಡುವೆ, ಈ ಮಧ್ಯೆ ಸುವೇಂದು ಅಧಿಕಾರಿ ರಾಜೀನಾಮೆ ಅಂಗೀಕರಿಸಲು ಸ್ಪೀಕರ್​ ನಿರಾಕರಿಸಿದ್ದಾರೆ.

ಸ್ಮಾರ್ಟ್​ಸಿಟಿ ಯೋಜನೆಗಾಗಿ ಕೇಂದ್ರ ಜಾರಿಗೊಳಿಸಿದ 2 ಸಾವಿರ ಕೋಟಿ ರೂ.ಗಳ ಸರ್ಕಾರ ನಿರ್ಬಂಧಿಸಿದೆ ಎಂದು ಆರೋಪಿಸಿ ಅಸನ್ಸೋಲ್ ಕಾರ್ಪೊರೇಶನ್‌ನ ಮಾಜಿ ಅಧ್ಯಕ್ಷರಾದ ತಿವಾರಿ ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್‌ಗೆ ಪತ್ರವೊಂದನ್ನು ಬರೆದಿದ್ದರು. ಇನ್ನು ಇನ್ನೊಬ್ಬ ಟಿಎಂಸಿ ಸಂಸದ ಸುನಿಲ್ ಮಂಡಲ್ ಮತ್ತು ಬಂಗಾಳ ಅರಣ್ಯ ಸಚಿವ ರಾಜೀಬ್ ಬ್ಯಾನರ್ಜಿ ಕೂಡ ಪಕ್ಷದ ವಿರುದ್ಧ ಮಾತನಾಡಿದ್ದಾರೆ.

ವಾರಾಂತ್ಯದಲ್ಲಿ ಮದಿನಿಪುರದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹಲವಾರು ಬಂಡಾಯ ಟಿಎಂಸಿ ಶಾಸಕರು ಮತ್ತು ನಾಯಕರು ಸುವೆಂದು ಅವರೊಂದಿಗೆ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಟಿಎಂಸಿ ನಾಯಕ ಕಬಿರುಲ್ ಇಸ್ಲಾಂ ಅವರು ಪಕ್ಷದ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ಮೂಲಗಳು ಈ ಸುದ್ದಿಯನ್ನು ದೃಢಪಡಿಸಿದ್ದು, “ಕಬೀರುಲ್ ಇಸ್ಲಾಂ ಅವರು ಇಂದು ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಶೇಖ್ ನೂರುಲ್ ಇಸ್ಲಾಂಗೆ ಕಳುಹಿಸಿದ್ದಾರೆ. ಪಕ್ಷದ ಉನ್ನತ ನಾಯಕತ್ವ ಮತ್ತು ಅದರ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ತಂಡದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ" ಎಂದು ಮೂಲಗಳು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.