ಬಂಡಿಪೋರಾ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಯುವಕನನ್ನು ಪಾಕಿಸ್ತಾನ ಅಧಿಕಾರಿಗಳು ಮಂಗಳವಾರ ವಾಪಸ್ ಭಾರತಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮನುಷ್ಯತ್ವ ಇರಬೇಕಲ್ವೇ.. ಸೋಂಕಿತರಿರುವ ಮನೆ ಲಾಕ್ ಮಾಡಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್ಮೆಂಟ್ ಜನ..
ಬಂಡಿಪೋರಾದ ಗುರೆಜ್ ಪ್ರದೇಶದ 18 ವರ್ಷದ ಮೊಹಮ್ಮದ್ ಸಯೀದ್ ಮೊಹಿನುದ್ದೀನ್ ಅಜಾಗರೂಕತೆಯಿಂದ ಕಳೆದ ವರ್ಷ ಗಡಿ ದಾಟಿದ್ದ. ಇಂದು ನಾಗರಿಕ ಮತ್ತು ರಕ್ಷಣಾ ಅಧಿಕಾರಿಗಳ ಸಮ್ಮುಖದಲ್ಲಿ ಪಾಕಿಸ್ತಾನ ಸೇನೆಯು ಯುವಕನನ್ನು ಟೀತ್ವಾಲ್ ಸೆಕ್ಟರ್ ಮೂಲಕ ಭಾರತದ ಕಡೆಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.