ETV Bharat / bharat

9 ವರ್ಷಗಳ ಬಳಿಕ ಪೋಷಕರನ್ನು ಸೇರಿದ ಕಾಣೆಯಾಗಿದ್ದ ಬಾಲಕ: ಇದು ಫುಟ್ಬಾಲ್ ಮ್ಯಾಜಿಕ್! - ಬಾಲಕನ ಆಧಾರ್ ಬಯೋಮೆಟ್ರಿಕ್

6ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದ ಬಾಲಕನೊಬ್ಬ 9 ವರ್ಷಗಳ ನಂತರ ಮತ್ತೆ ಪೋಷಕರೊಂದಿಗೆ ಜೊತೆಯಾಗಿರುವ ಅಚ್ಚರಿಯ ಘಟನೆ ಜರುಗಿದೆ.

Missing boy reunites with parents after 9 years

author img

By

Published : Feb 3, 2023, 4:52 PM IST

ನಾರಾಯಣ ಪೇಟ (ತೆಲಂಗಾಣ) : ಮೊಹಮ್ಮದ್ ಡ್ಯಾನಿಷ್ ಹೆಸರಿನ ಬಾಲಕನೊಬ್ಬ ತನ್ನ 6ನೇ ವಯಸ್ಸಿನಲ್ಲಿ ತೆಲಂಗಾಣದ ನಾರಾಯಣ ಪೇಟದಿಂದ ಕಾಣೆಯಾಗಿದ್ದ. ಹೀಗೆ ಕಾಣೆಯಾದವ ಮುಂಬೈನ ಸಾಂತ್ವನ ಕೇಂದ್ರವೊಂದರಲ್ಲಿ ದಾಖಲಾಗಿದ್ದ. ಸಾಂತ್ವನ ಕೇಂದ್ರದ ಸಿಬ್ಬಂದಿಯು ಬಾಲಕನ ಆಧಾರ್ ಬಯೋಮೆಟ್ರಿಕ್ ಬಳಸಿ ಆತನ ಊರು, ವಿಳಾಸ ಹಾಗೂ ಪಾಲಕರ ಹೆಸರು ಪತ್ತೆ ಮಾಡಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಫಲ ಸಿಕ್ಕಿರಲಿಲ್ಲ.

ಏನೇ ಮಾಡಿದರೂ ಬಾಲಕನ ಪೋಷಕರು ಯಾರು ಎಂಬುದು ಗೊತ್ತಾಗಿರಲಿಲ್ಲ. ಇದಾಗಿ ಸುಮಾರು 9 ವರ್ಷಗಳ ನಂತರ ಬಾಲಕ 15 ವರ್ಷದೊಳಗಿನವರ ರಾಷ್ಟ್ರೀಯ ಫುಟ್​ಬಾಲ್ ತಂಡಕ್ಕೆ ಆಯ್ಕೆಯಾದ. ಈ ಹಂತದಲ್ಲಿ ಬಾಲಕನ ಪಾಲಕರನ್ನು ಹೇಗಾದರೂ ಮಾಡಿ ಹುಡುಕಲೇಬೇಕೆಂದು ಹಟಕ್ಕೆ ಬಿದ್ದರು ತಂಡದ ಮ್ಯಾನೇಜರ್​ಗಳು.

ಡ್ಯಾನಿಶ್ ಪ್ರಸ್ತುತ 15 ವರ್ಷ ವಯಸ್ಸಿನವರಾಗಿದ್ದು, ಇತ್ತೀಚೆಗೆ 15 ವರ್ಷದೊಳಗಿನವರ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಅವನ ಸೇರ್ಪಡೆಯನ್ನು ಪೂರ್ಣಗೊಳಿಸಲು, ಸಂಬಂಧಪಟ್ಟ ಅಧಿಕಾರಿಗಳು ಅವನ ಪಾಲಕರು ಮತ್ತು ಸ್ಥಳೀಯ ವಿಳಾಸವನ್ನು ಕಂಡುಹಿಡಿಯಬೇಕಾಗಿತ್ತು. ಬಾಲಕ ಮುಂಚೆ ಇದ್ದ ಸಾಂತ್ವನ ಕೇಂದ್ರದವರು ಸಹ ಈ ಮಾಹಿತಿ ನೀಡಲಿಲ್ಲ. ಕೊನೆಗೆ ಫುಟ್ಬಾಲ್ ತಂಡದವರು ಆತನ ಇತ್ತೀಚಿನ ಫಿಂಗರ್​ಪ್ರಿಂಟ್​ ಪರೀಕ್ಷೆ ಮಾಡಿದಾಗ ಬಾಲಕನ ಪೋಷಕರ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳನ್ನು ನೀಡಿತು.

ಒಂಬತ್ತು ವರ್ಷಗಳಿಂದ ತಿಳಿಯದ ವಿಚಾರಗಳು ಈಗ ಗೊತ್ತಾಗಿದ್ದವು. ಬಾಲಕ ಡ್ಯಾನಿಷ್ ತೆಲಂಗಾಣ ಮೂಲದವನಾಗಿದ್ದು, ನಾರಾಯಣಪೇಟ ಜಿಲ್ಲಾ ಕೇಂದ್ರದ ಬಹಾರ್‌ಪೇಟ್‌ನ ಮೊಹಮ್ಮದ್ ಮೊಯಿಜ್ ಮತ್ತು ಶಬಾನಾ ದಂಪತಿಯ ಪುತ್ರನಾಗಿದ್ದಾನೆ ಎಂದು ತಿಳಿದುಬಂದಿತು. ಇವಾಗ ಬಾಲಕನ ಜೀವನ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿತ್ತು. ಒಂಬತ್ತು ವರ್ಷಗಳಿಂದ ಮಗನನ್ನು ಹುಡುಕುತ್ತಿದ್ದ ಪೋಷಕರು ಕೊನೆಗೂ ಡ್ಯಾನಿಷ್​ನನ್ನು ನೋಡುವ ಸಮಯ ಬಂದಿತ್ತು.

2014ರ ಡಿಸೆಂಬರ್ 16ರಂದು ಡ್ಯಾನಿಶ್ ಮನೆ ಬಿಟ್ಟು ಹೋಗಿದ್ದ. ಎಷ್ಟು ಹುಡುಕಿದರೂ ಮಗ ಸಿಗದ ಕಾರಣ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕ ಹೈದರಾಬಾದ್‌ ನಲ್ಲಿ ರೈಲು ಹತ್ತಿ ಮುಂಬೈ ತಲುಪಿದ್ದ. ಅಲ್ಲಿ ಶಿಶುಪಾಲನಾ ಕೇಂದ್ರದ (ಸಿಡಬ್ಲ್ಯುಸಿ) ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಶಾಲೆಗೆ ಸೇರಿಸಿದ್ದರು. ಸದ್ಯ ಈತ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ.

ಫುಟ್ಬಾಲ್ ತಂಡದ ಆಯ್ಕೆದಾರರಿಂದ ವಿವರ ತಿಳಿದ ನಂತರ ಆರೈಕೆ ಕೇಂದ್ರದ ಅಧಿಕಾರಿಗಳು ನಾರಾಯಣಪೇಟೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಹಬೂಬ್‌ನಗರ ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿ ವೇಣುಗೋಪಾಲ್ ಮತ್ತು ಡಿಸಿಪಿಒ ಕುಸುಮ ಲತಾ ಬಾಲಕನ ಪೋಷಕರಿಗೆ ಮಾಹಿತಿ ನೀಡಿ ಮುಂಬೈಗೆ ಕಳುಹಿಸಿದ್ದಾರೆ. ಅವರು ಮುಂಬೈಗೆ ಹೋಗಿ ತಮ್ಮ ಮಗನನ್ನು ಜೊತೆಗೆ ಕರೆದುಕೊಂಡು ಬಂದಿದ್ದಾರೆ. ಅಧಿಕಾರಿಗಳು ಅಧಿಕೃತ ದಾಖಲೆಗಳೊಂದಿಗೆ ಬಾಲಕನನ್ನು ಅವರಿಗೆ ಹಸ್ತಾಂತರಿಸಿದರು.

ಮತ್ತೊಮ್ಮೆ ನಾವು ಮಗನನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.ದೇವರ ದಯೆ ಹಾಗೂ ಅಧಿಕಾರಿಗಳ ಶ್ರಮದಿಂದ ಮಗ ಮನೆಗೆ ಮರಳಿದ್ದಕ್ಕೆ ಸಮಾಧಾನವಾಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು. ಹೀಗೆ ಕಳೆದು ಹೋದ ಬಾಲಕನೊಬ್ಬ ಫುಟ್​ಬಾಲ್ ತಂಡ ಸೇರಿದ್ದರಿಂದ ಮರಳಿ ಪಾಲಕರೊಂದಿಗೆ ಸೇರುವಂತಾಗಿರುವುದು ಅಚ್ಚರಿಯ ಘಟನೆಯಾಗಿದೆ.

ಇದನ್ನೂ ಓದಿ: 7 ವರ್ಷವಾಗಿದ್ದಾಗ ಮನೆ ಬಿಟ್ಟ ಬಾಲಕ.. ಈಗ ತಂದೆ - ತಾಯಿಗಾಗಿ ಹುಡುಕಾಟ.. ಸಿಗ್ತಾರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.