ನವದೆಹಲಿ : ಭಾರತದ ಮಾನಸ ವಾರಣಾಸಿ, ಇತರ ದೇಶದ ಸ್ಪರ್ಧಿಗಳು ಹಾಗೂ ಸಿಬ್ಬಂದಿ ಸೇರಿದಂತೆ 17 ಮಂದಿಯ ಕೊರೊನಾ ವರದಿ ಪಾಸಿಟಿವ್ ಬಂದಿರುವ ಹಿನ್ನೆಲೆ, 'ವಿಶ್ವ ಸುಂದರಿ 2021' ಗ್ರಾಂಡ್ ಫಿನಾಲೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಕಾರ್ಯಕ್ರಮ ಆರಂಭವಾಗುವ ಕೆಲವೇ ಕೆಲವು ಗಂಟೆಗಳ ಮುಂದೆ ಸ್ಪರ್ಧೆ ಮುಂದೂಡಿಕೆ ಆಗಿರುವ ವಿಚಾರವನ್ನು ನಿನ್ನೆ ಘೋಷಣೆ ಮಾಡಲಾಗಿದೆ. ಪ್ರಸ್ತುತ ಸ್ಪರ್ಧಿಗಳನ್ನು ಪೋರ್ಟೊರಿಕೊದಲ್ಲಿ ಐಸೋಲೇಶನ್‌ನಲ್ಲಿರಿಸಲಾಗಿದೆ.
-
PRESS STATEMENT: Miss World 2021 Postponed.
— Miss World (@MissWorldLtd) December 16, 2021 " class="align-text-top noRightClick twitterSection" data="
See announcement
https://t.co/J98KVc0Kpa pic.twitter.com/lHuLT6x8DV
">PRESS STATEMENT: Miss World 2021 Postponed.
— Miss World (@MissWorldLtd) December 16, 2021
See announcement
https://t.co/J98KVc0Kpa pic.twitter.com/lHuLT6x8DVPRESS STATEMENT: Miss World 2021 Postponed.
— Miss World (@MissWorldLtd) December 16, 2021
See announcement
https://t.co/J98KVc0Kpa pic.twitter.com/lHuLT6x8DV
ಇದನ್ನೂ ಓದಿ: Miss World-2021: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮುತ್ತಿನ ನಗರಿಯ ಸುಂದರಿ ಮಾನಸ
"ಸ್ಪರ್ಧಿಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ವೈರಾಲಜಿಸ್ಟ್‌ಗಳು ಮತ್ತು ವೈದ್ಯಕೀಯ ತಜ್ಞರೊಂದಿಗಿನ ಸಭೆಯ ನಂತರ 70ನೇ ವಿಶ್ವ ಸುಂದರಿ ಫಿನಾಲೆಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ವಿಶ್ವ ಸುಂದರಿ ಸಂಸ್ಥೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ 2020ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಆಗಿ ಹೊರಹೊಮ್ಮಿರುವ ಹೈದರಾಬಾದ್ ಮೂಲದ ಮಾನಸ ವಾರಣಾಸಿ ಅವರು 'ವಿಶ್ವ ಸುಂದರಿ 2021'ರ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿದ್ದರು.