ಹೈದರಾಬಾದ್: 2021ರ ಭುವನ ಸುಂದರಿ ಕಿರೀಟ ಈಗಾಗಲೇ ಭಾರತದ ಪಾಲಾಗಿದ್ದು, 21 ವರ್ಷದ ಹರ್ನಾಜ್ ಕೌರ್ ಸಂಧು ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ಇಂದು 70ನೇ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದ್ದು, ಮುತ್ತಿನನಗರಿಯ ಸುಂದರಿ ಮಾನಸ ವಾರಣಾಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.
Miss India World 2020.. ಹೈದರಾಬಾದ್ನಲ್ಲಿ ಜನಿಸಿರುವ 23 ವರ್ಷದ ಮಾನಸ ವಾರಣಾಸಿ ವೃತ್ತಿಯಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿದ್ದಾರೆ. ಈಗಾಗಲೇ 2020ರಲ್ಲಿ ಭಾರತದ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 70ನೇ ವಿಶ್ವ ಸುಂದರಿ ಸ್ಪರ್ಧೆ ಸಹ ಇಸ್ರೇಲ್ನಲ್ಲಿ ಇಂದು ನಡೆಯುತ್ತಿದ್ದು, ಇದರಲ್ಲಿ ಹೈದರಾಬಾದ್ ಚೆಲುವೆಗೆ ಕಿರೀಟ ಒಲಿದು ಬರಬಹುದು ಎಂಬ ನಿರೀಕ್ಷೆ ಇದೆ.
ಈಗಾಗಲೇ 2020ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಆಗಿ ಹೊರಹೊಮ್ಮಿರುವ ಮಾನಸಗೆ ಪ್ರಿಯಾಂಕಾ ಚೋಪ್ರಾ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಪ್ರಮುಖವಾಗಿ ಸಂಗೀತ, ಯೋಗ ಹಾಗೂ ಪುಸ್ತಕಗಳನ್ನು ಓದುವುದರಲ್ಲಿ ಇವರು ಹೆಚ್ಚು ಆಸಕ್ತಿ ಹೊಂದಿದ್ದಾರೆ.