ETV Bharat / bharat

ಪತಿಯ ಮೇಲೆ ಗುಂಡಿನ ದಾಳಿ: ದುಷ್ಕರ್ಮಿ ವಿರುದ್ಧ ಗಟ್ಟಿಗಿತ್ತಿಯ ಸೆಣಸಾಟ! ವಿಡಿಯೋ - ಉತ್ತರಪ್ರದೇಶದ ಕೌಶಾಂಬಿ

ಕಪಿಲ್​, ಜನತೀರತ್ ಮೇಲೆ ಗುಂಡು ಹಾರಿಸಿದ್ದು, ಆತನನ್ನು ನೀರಿಗೆ ತಳ್ಳಲು ಯತ್ನಿಸಿದ್ದಾನೆ. ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧನ ಪತ್ನಿ ವಿಟಿಲಾ ದೇವಿ ಓಡಿ ಬಂದು ಯುವಕನ ವಿರುದ್ಧ ಹೋರಾಡಿ ಪತಿಯ ಪ್ರಾಣ ಕಾಪಾಡಿದ್ದಾಳೆ.

ಪತಿಯ ಮೇಲೆ ಗುಂಡಿನ ದಾಳಿ, ದುಷ್ಕರ್ಮಿ ವಿರುದ್ಧ ಪತ್ನಿಯ ಸೆಣಸಾಟ

author img

By

Published : Jun 1, 2021, 7:36 PM IST

ಕೌಶಾಂಬಿ (ಉತ್ತರಪ್ರದೇಶ): ವೃದ್ಧನ ಮೇಲೆ ಯುವಕನೋರ್ವ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳದಲ್ಲೇ ಇದ್ದ ವೃದ್ಧನ ಪತ್ನಿ ಆರೋಪಿಯ ಜತೆ ಹೋರಾಡಿ ತನ್ನ ಪತಿಯ ಪ್ರಾಣವನ್ನು ಕಾಪಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಭೀಕರ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತಿಯ ಮೇಲೆ ಗುಂಡಿನ ದಾಳಿ, ಯುವಕನ ವಿರುದ್ಧ ವೃದ್ಧನ ಪತ್ನಿಯ ಸೆಣಸಾಟ

ಮೇ 25 ರಂದು ಜನಿತೀರತ್ ಎಂಬಾತ ಸಮಾರಂಭವೊಂದರಲ್ಲಿ ಭಾಗಿಯಾಗಲು ಚರಣಪುರ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ರಾಂಪುರದ ನಿವಾಸಿ ಕಪಿಲ್ ತಿಲಕ್ ಕೂಡ ಅಲ್ಲಿಗೆ ಬಂದಿದ್ದು, ಸುಖಾಸುಮ್ಮನೆ ಗುಂಡು ಹಾರಿಸುತ್ತಿದ್ದನಂತೆ. ಈ ವೇಳೆ ಅಲ್ಲಿದ್ದ ಜನರೆಲ್ಲ ಭಯಭೀತಗೊಂಡು, ಕಪಿಲ್​ನನ್ನು ಸುಮ್ಮನಿರಿಸಲು ಪ್ರಯತ್ನಿಸಿದ್ದಾರೆ. ಕೆಲ ಕಾಲ ಸುಮ್ಮನಿದ್ದ ಕಪಿಲ್, ಜನತೀರತ್ ಮೇಲೆ ಗುಂಡು ಹಾರಿಸಿದ್ದು, ಆತನನ್ನು ನೀರಿಗೆ ತಳ್ಳಿದ್ದಾನೆ. ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧನ ಪತ್ನಿ ವಿಟಿಲಾ ದೇವಿ, ಓಡಿ ಬಂದು ಯುವಕನ ವಿರುದ್ಧ ಹೋರಾಡಿ ಪತಿಯ ಪ್ರಾಣ ಕಾಪಾಡಿದ್ದಾಳೆ.

ಇದನ್ನು ಓದಿ: ಅಯ್ಯೋ ದುರ್ವಿಧಿಯೇ... ಒಂದೇ ಕುಟುಂಬದ 8 ಮಂದಿ ಕೊರೊನಾಗೆ ಬಲಿ

ವೈರಲ್ ವಿಡಿಯೋ ಆಧರಿಸಿ ಕ್ರಮ ಕೈಗೊಂಡಿರುವ ಪೊಲೀಸರು, ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.