ETV Bharat / bharat

ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ: ಪಿ.ಚಿದಂಬರಂ

ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಭಯ ಮತ್ತು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಪಿ.ಚಿದಂಬರಂ ಆರೋಪಿಸಿದ್ದಾರೆ.

author img

By PTI

Published : Oct 8, 2023, 11:34 AM IST

CHIDAMBARAM
ಚಿದಂಬರಂ

ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರು ದೇಶದಲ್ಲಿ ಭಯದಿಂದ ಬದುಕುತ್ತಿದ್ದಾರೆ, ಇದರ ಜೊತೆಗೆ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ದೂರಿದ್ದಾರೆ. ಶನಿವಾರ ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕರು ಆಯೋಜಿಸಿದ್ದ 'ಕ್ರಿಶ್ಚಿಯನ್ ಹಕ್ಕುಗಳ ಸಮಾವೇಶ'ದಲ್ಲಿ ಅವರು ಮಾತನಾಡಿದರು.

"ದೇಶದಲ್ಲಿ ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಬದುಕುತ್ತಿದ್ದಾರೆ. ನನ್ನಂತೆ ನೀವು ಈ ದೇಶದ ಪ್ರಜೆಗಳು, ಭಯದಿಂದ ಬದುಕಲು ಯಾವುದೇ ಕಾರಣವಿಲ್ಲ, ಆದರೆ ಮೋದಿ ಸರ್ಕಾರದ ಅಡಿಯಲ್ಲಿ ನೀವು ಭಯದಿಂದ ಬದುಕುತ್ತಿದ್ದೀರಿ. ನಿರುದ್ಯೋಗ, ಹಣದುಬ್ಬರ, ಉಳಿತಾಯದಲ್ಲಿ ಕೊರತೆ ಸೇರಿದಂತೆ ಮನೆಯ ಸಾಲದ ಹೆಚ್ಚಳದಿಂದಾಗಿ ದೇಶದ ಎಲ್ಲಾ ಸಮುದಾಯಗಳಿಗೆ ಸರಿಯಾದ ಪಾಲು ಸಿಗುತ್ತಿಲ್ಲ. ಕೇಂದ್ರದ ಎನ್‌ಡಿಎ ಸರ್ಕಾರವಾಗಲೀ ಅಥವಾ ತೆಲಂಗಾಣದ ಬಿಆರ್‌ಎಸ್ ಸರ್ಕಾರವಾಗಲೀ ಈ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿಲ್ಲ" ಎಂದು ವಾಗ್ದಾಳಿ ನಡೆಸಿದರು.

"ಅಲ್ಪಸಂಖ್ಯಾತರ ವಿಷಯದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಅವರಿಗೆ ನ್ಯಾಯಯುತವಾದ ಪಾಲು ಸಿಗುತ್ತಿಲ್ಲ. ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ 3.30 ಕೋಟಿ ಇದ್ದು, ಮೋದಿ ಸರ್ಕಾರದ 79 ಸಚಿವರಲ್ಲಿ ಒಬ್ಬರೇ ಕ್ರೈಸ್ತರಿದ್ದಾರೆ. ಹಾಗೆಯೇ, ಸುಪ್ರೀಂ ಕೋರ್ಟ್‌ನಲ್ಲಿ 34 ನ್ಯಾಯಾಧೀಶರಿದ್ದು, ಒಬ್ಬರೂ ಕ್ರಿಶ್ಚಿಯನ್ನರಿಲ್ಲ, ಅಲ್ಪಸಂಖ್ಯಾತರನ್ನು ಎಲ್ಲೆಡೆ ತಾರತಮ್ಯ ಮಾಡಲಾಗುತ್ತಿದೆ" ಎಂದು ಹೇಳಿದರು.

"ಚರ್ಚ್​ಗಳ ಮೇಲೆ ಆಪಾದಿತ ದಾಳಿಗಳು ಮತ್ತು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಯುಎಸ್ ಸರ್ಕಾರ ನೀಡಿದ ವರದಿಯ ಪ್ರಕಾರ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ. ದೇಶದಲ್ಲಿ ಸಾವಿರಾರು ಸಂಸ್ಥೆಗಳು ಧರ್ಮಕಾರ್ಯಗಳನ್ನು ಮಾಡುತ್ತಿದ್ದು, ಬೇರೆ ದೇಶಗಳಿಂದ ಹಣ ಪಡೆಯುತ್ತಿವೆ. ಕ್ರೈಸ್ತ ಸಂಘಟನೆಗಳು ಇತರೆ ಕ್ರೈಸ್ತ ದೇಶಗಳು ಮತ್ತು ಕ್ರಿಶ್ಚಿಯನ್ ಗುಂಪುಗಳಿಂದ ಅನುದಾನ ಪಡೆಯುತ್ತಿವೆ. ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ನಾವು ಅದನ್ನು ನಿಲ್ಲಿಸಲಿಲ್ಲ" ಎಂದು ಹೇಳಿದರು.

"ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2017-21ರ ನಡುವೆ 2,900 ಕೋಮು ಸಂಘರ್ಷಗಳು ನಡೆದಿವೆ. ಕೇಂದ್ರದ ಎನ್‌ಡಿಎ ಸರ್ಕಾರವು 2017-22ರ ನಡುವೆ 6,622 ಸಂಸ್ಥೆಗಳ ಎಫ್‌ಸಿಆರ್‌ಎ (ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ) ನೋಂದಣಿಯನ್ನು ರದ್ದುಗೊಳಿಸಿದೆ" ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : 2 ಸಾವಿರದ ನೋಟು ಚಲಾವಣೆಗೆ ತಂದು ಬ್ಯಾನ್​ ಮಾಡಿದ್ದು ಅಸಂಬದ್ಧ: ಚಿದಂಬರಂ ಟೀಕೆ

ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, "ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ರೀತಿ ಹಣದುಬ್ಬರ ಅಧಿಕವಾಗುತ್ತಿದೆ. ಕಳೆದ 20 ತಿಂಗಳ ಅವಧಿಯಲ್ಲಿ ಹಣದುಬ್ಬರವು ಶೇಕಡಾ 6 ಕ್ಕಿಂತ ಹೆಚ್ಚಿಗಿದ್ದು, ಸದ್ಯದಲ್ಲೇ 7% ತಲುಪಲಿದೆ. ಆಹಾರ ಹಣದುಬ್ಬರವು ಶೇಕಡಾ 9.2 ರಷ್ಟಿದೆ. ಹಣದುಬ್ಬರ ಹೆಚ್ಚಿದ್ದರೆ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಲಿದೆ. ಇದರಿಂದ ಬಡವರು ಹೆಚ್ಚು ತೊಂದರೆಗೀಡಾಗುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ : ಒಂದು ರಾಷ್ಟ್ರ ಒಂದು ಚುನಾವಣೆ, ಎಲೆಕ್ಷನ್​ ಆಯೋಗ ಕಾಯ್ದೆಗೆ ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್​ ವಿರೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.