ETV Bharat / bharat

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಮಗು ಯಾರದ್ದೆಂದು ತಿಳಿಯಲು ಆರೋಪಿಗಳ DNA ಟೆಸ್ಟ್ - ಸಾಮೂಹಿಕ ಅತ್ಯಾಚಾರ

ಉತ್ತರಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರಿದ್ದು, ಅಪ್ರಾಪ್ತೆಯ ಮೇಲೆ ಏಳು ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಾಲಕಿಯು ಮಗುವಿಗೆ ಜನ್ಮ ನೀಡಿದ್ದು, ಮಗು ಯಾರದ್ದೆಂದು ತಿಳಿಯಲು ಆರೋಪಿಗಳನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗಿದೆ.

Minor rape victim delivers child
Minor rape victim delivers child
author img

By

Published : Aug 21, 2021, 3:16 PM IST

ಬಾರಾಬಂಕಿ (ಉತ್ತರ ಪ್ರದೇಶ): ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ವಿಚಾರವಾಗಿ ಸಂತ್ರಸ್ತೆಯ ತಂದೆ, ಜಿಲ್ಲೆಯ ಅಸಂದ್ರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸಂತ್ರಸ್ತೆಯ ಪತಿ ಸೇರಿ ಏಳು ಜನರನ್ನು ಬಂಧಿಸಿದ್ದಾರೆ. ಬಾಲಕಿಯು ಮಗುವಿಗೆ ಜನ್ಮ ನೀಡಿದ್ದರಿಂದ, ಮಗು ಯಾರದ್ದೆಂದು ತಿಳಿಯಲು ಆರೋಪಿಗಳನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ನನ್ನ ಮಗಳು ಕಳೆದ ಏಳು ತಿಂಗಳಿಂದ, ಆರೋಪಿಯ ಮನೆಯಲ್ಲಿದ್ದಳು. ಈ ವೇಳೆ, ನನ್ನ ಅಳಿಯ ಸೇರಿ ಏಳು ಜನರು ನನ್ನ ಮಗಳ ಮೇಳೆ ಅತ್ಯಾಚಾರ ನಡೆಸಿದ್ದು, ಆಕೆ ಗರ್ಭ ಧರಿಸಿದ್ದಳು. ಅಲ್ಲದೇ, ಆಕೆ ಗರ್ಭಪಾತ ಮಾಡುವಂತೆ ಹಲ್ಲೆ ನಡೆಸಿದ್ದಾರೆ ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮೂರು ವರ್ಷದಿಂದ ಮಹಿಳೆಗೆ ನರಕ ದರ್ಶನ.. ವರದಕ್ಷಿಣೆಗಾಗಿ ದೇಹವೆಲ್ಲ ಸುಟ್ಟು ಚಿತ್ರಹಿಂಸೆ ನೀಡಿದ ಆರೋಪ..

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಮಗುವಿನ ನಿಜವಾದ ತಂದೆ ಯಾರೆಂದು ತಿಳಿಯಲು ಎಲ್ಲರನ್ನೂ ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.