ಸಹರ್ಸಾ (ಬಿಹಾರ): ಬಿಹಾರದ ಸಹರ್ಸಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಜಿಲ್ಲೆಯ ಸಲ್ಖುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಲ್ಖುವಾ ಪೊಲೀಸ್ ಠಾಣೆಯ ಸಿಬ್ಬಂದಿ ಮೃತ ಬಾಲಕಿಯ ಶವವನ್ನು ಜೋಳದ ಗದ್ದೆಯಿಂದ ಹೊರತೆಗೆದಿದ್ದಾರೆ. ಮಾರ್ಚ್ 16 ರಿಂದ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರ ಭೇಟಿ, ಬೆದರಿಕೆಯ ರಾಜಕಾರಣ ಎಂದ ಕಾಂಗ್ರೆಸ್: ಬಿಜೆಪಿ ತಿರುಗೇಟು
ಕಳೆದ ಬುಧವಾರದಿಂದ ಬಾಲಕಿ ಮನೆಯಿಂದ ಕಾಣೆಯಾಗಿದ್ದು, ಕುಟುಂಬಸ್ಥರೆಲ್ಲರೂ ಹುಡುಕಾಟ ನಡೆಸಿದ್ದರು. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಸಂಬಂಧಿಕರು ಸಲ್ಖುವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಾಲಕಿಯ ಅತ್ಯಾಚಾರದ ನಂತರ ಕೊಲೆಯ ವಿಷಯ ಬಯಲಿಗೆ ಬಂದಿದೆ.
ಇದನ್ನೂ ಓದಿ : ಯುವತಿ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಕಾರಿನೊಳಗೆ ತಳ್ಳಿದ ಯುವಕ: ವಿಡಿಯೋ
'ನನ್ನ ಮಗಳು ಮನೆಯಲ್ಲಿದ್ದಳು. ಆಗ ನನ್ನ ಅಳಿಯ ಪಕ್ಕದ ಮನೆಗೆ ಬಂದಿದ್ದನು. ನಂತರ ಅವನು ಮಾರ್ಚ್ 16 ರಂದು ನನ್ನ ಮನೆಗೆ ಬಂದು ಊಟ ಮತ್ತು ಪಾನೀಯವನ್ನು ನೀಡಿದ್ದಾನೆ. ನಂತರ ಮಗಳನ್ನು ಊಟಕ್ಕೆ ಕರೆದೊಯ್ದಿದ್ದಾನೆ. ಅಳಿಯ ಮೊದಲು ನನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ನಂತರ ಅವಳನ್ನು ಕೊಂದಿದ್ದಾನೆ. ಈಗ ಪೊಲೀಸರು ನನ್ನ ಮಗಳ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಸಹರ್ಸಾ ಆಸ್ಪತ್ರೆಗೆ ತಂದಿದ್ದಾರೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.
ಇದನ್ನೂ ಓದಿ : ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್ ಜಾರಿ
ಜೋಳದ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆ: ಮತ್ತೊಂದೆಡೆ ಈ ವಿಷಯಕ್ಕೆ ಸಂಬಂಧಿಸಿದಂತೆ ಚಿರಾಯನ್ ಒಪಿ ಪ್ರಭಾರಿ ರಾಮಶಂಕರ್ ಕುಮಾರ್ ಮಾತನಾಡಿ, ಬಾಲಕಿ ಮಾ. 16 ರಿಂದ ನಾಪತ್ತೆಯಾಗಿದ್ದಳು. ಪಕ್ಕದ ಮನೆಯ ಅಳಿಯ ಇವರ ಮನೆಗೆ ಬಂದಿದ್ದ. ಬಾಲಕಿಯ ತಂದೆ ಅವನಿಗೆ ಊಟ ಹಾಕಿದ್ದಾರೆ. ನಂತರ ಅಳಿಯ ಆಕೆಗೆ ಚಾಕೊಲೇಟ್ ತಿನ್ನಿಸಲು ಕರೆದೊಯ್ದಿದ್ದು, ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ದೂರು ದಾಖಲಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ : ಮುಸ್ಲಿಂರಲ್ಲಿರುವ ಶೇ. 90 ರಷ್ಟು ಜನ ಮತಾಂತರ ಆದವರೇ : ಬಿಹಾರ ಸಚಿವ ಅಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ
ಮತ್ತೊಂದೆಡೆ ಶನಿವಾರ ಜೋಳದ ಗದ್ದೆಯಲ್ಲಿ ಮೃತದೇಹ ಇರುವ ಬಗ್ಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ. ಅದೇ ಮಾಹಿತಿ ಪಡೆದ ಪೊಲೀಸರು ಬಾಲಕಿಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದರು.
ಇದನ್ನೂ ಓದಿ : ಜಾಗಿಂಗ್ ವೇಳೆ ಹಿಂಬದಿಯಿಂದ ಗುದ್ದಿದ ಕಾರು: ಟೆಕ್ ಕಂಪನಿ ಮಹಿಳಾ ಸಿಇಒ ಸ್ಥಳದಲ್ಲೇ ಸಾವು