ಛತ್ತೀಸ್‌ಗಢ: ಐದು ತಿಂಗಳ ಗರ್ಭವತಿಯಾಗಿದ್ದ ಅಪ್ರಾಪ್ತೆ ಗರ್ಭಪಾತ ಮಾತ್ರೆ ತಿಂದು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿ ಪ್ರೇಮಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣವೇನು?: ಘಟನೆ ಛತ್ತೀಸ್ಗಢದ ಗೌರೇಲಾ ಪೆಂಡ್ರಾ ಮರ್ವಾಹಿಯಲ್ಲಿ ಒಂದೂವರೆ ವರ್ಷಗಳ ಹಿಂದೆ ನಡೆದಿತ್ತು. 15 ವರ್ಷದ ಅಪ್ರಾಪ್ತೆ 5 ತಿಂಗಳ ಗರ್ಭವತಿಯಾಗಿದ್ದ ವೇಳೆ ಪ್ರೇಮಿ ತಂದುಕೊಟ್ಟ ಗರ್ಭಪಾತ ಮಾತ್ರೆ ನುಂಗಿದ್ದಳು. ಇದರಿಂದ ತೀವ್ರ ಅಸ್ತಸ್ಥಳಾಗಿ ಆಕೆ ಮೃತಪಟ್ಟಿದ್ದಳು. ಇದರ ವಿರುದ್ಧ ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದರು.
ವಿಚಾರಣೆಯ ವೇಳೆ ಅದೇ ಗ್ರಾಮದ ಯುವಕ, ಬಾಲಕಿಯ ಜೊತೆ ಸಂಬಂಧ ಹೊಂದಿದ್ದು ಗೊತ್ತಾಗಿದೆ. ಆಕೆಯ ಜೊತೆಗೆ ನಿರಂತರ ದೈಹಿಕ ಸಂಪರ್ಕ ಸಾಧಿಸಿದ ಕಾರಣ ಆಕೆ 5 ತಿಂಗಳ ಗರ್ಭವತಿಯಾಗಿದ್ದಳು. ಇದನ್ನು ತಪ್ಪಿಸಲು ಆತ ಸ್ನೇಹಿತನ ನೆರವಿನಿಂದ ಗರ್ಭಪಾತದ ಮಾತ್ರೆ ತಿನ್ನಿಸಿದ್ದ. ಅಸುರಕ್ಷಿತ ಗರ್ಭಪಾತದಿಂದ ಆಕೆ ತೀವ್ರ ಅಸ್ವಸ್ಥಳಾಗಿ ಸಾವನ್ನಪ್ಪಿದ್ದಳು.
ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಕೇಸ್ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದಲ್ಲಿ ಯುವಕ ತನ್ನ ತಪ್ಪನ್ನು ಮರೆಮಾಚಲು ಬಾಲಕಿಗೆ ಗರ್ಭಪಾತ ಮಾಡಿಸಿದ್ದಾನೆ. ಇದು ಭ್ರೂಣವನ್ನು ತೆಗೆದುಹಾಕಲೇ ಹೊರತು, ಬಾಲಕಿಯ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಆಕೆಗೆ ಹಾನಿಯಾಗುವ ಯಾವುದೇ ಔಷಧವನ್ನು ನೀಡಲಾಗಿಲ್ಲ ಎಂದು ಹೇಳಿತು.
ಆದರೆ, ಯುವಕನ ಪ್ರಮಾದದಿಂದಾಗಿ ಬಾಲಕಿ ಅಕಾಲಿಕ ಮರಣ ಹೊಂದುವಂತಾಗಿದೆ. ಹೀಗಾಗಿ ಸೆಕ್ಷನ್ 376 (3), 314 ಮತ್ತು ಸೆಕ್ಷನ್ 6 ರ ಅಡಿ ಆಪಾದಿತ ಎಂದು ಘೋಷಿಸಿ, ಸೆಕ್ಷನ್ 314 ರಡಿ 10 ವರ್ಷಗಳ ಶಿಕ್ಷೆ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 6 ರ ಅಡಿ ಜೀವಾವಧಿ ಶಿಕ್ಷೆ ಮತ್ತು 1,000 ದಂಡ ವಿಧಿಸಿ ತೀರ್ಪು ನೀಡಿದೆ.
ಓದಿ: 100 ಜನರೊಂದಿಗೆ ದಾಳಿ.. ನಿಶ್ಚಿತಾರ್ಥದಂದೇ ಯುವತಿ ಅಪಹರಿಸಿದ ಪ್ರೇಮಿ..6 ತಾಸಿನಲ್ಲೇ ಪ್ರಕರಣ ಭೇದಿಸಿದ ಪೊಲೀಸರು