ಮೌಂಟ್ ಅಬು (ರಾಜಸ್ಥಾನ): 15 ವರ್ಷದ ಬಾಲಕಿ ಕೆಲವು ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿ ಹಿಂತಿರುಗುವಾಗ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಶಾಲೆಯ ಆವರಣಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಇಲ್ಲಿನ ಮ್ಯೂಸಿಯಂ ಕ್ರಾಸ್ರೋಡ್ಸ್ನಲ್ಲಿರುವ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ನಡೆದಿದೆ.
ಹೌದು, ಪಿಯು ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳು ಕೆಲವೊಂದು ವಸ್ತುಗಳನ್ನು ಖರೀದಿಸಲು ಸ್ಥಳೀಯ ಮಾರುಕಟ್ಟೆ ಹೋಗಿದ್ದಾರೆ. ವಾಪಸ್ಸಾಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಬಾಲಕಿಯನ್ನು ಪಕ್ಕದ ಶಾಲೆಯ ಆವರಣದಲ್ಲಿ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರು ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ಓದಿ: ಪುಟಿನ್ ಜೊತೆ ಮಾತುಕತೆಗೆ ನಾನು ಸಿದ್ಧ - ವಿಫಲವಾದರೆ 3ನೇ ವಿಶ್ವ ಯುದ್ಧಕ್ಕೆ ದಾರಿ : ಝೆಲೆನ್ಸ್ಕಿ ಎಚ್ಚರಿಕೆ
ಘಟನೆ ಬಳಿಕ ಸಂತ್ರಸ್ತೆ ಹೇಗೋ ಮನೆ ತಲುಪಿದ್ದಾರೆ. ನಡೆದ ದುಷ್ಕೃತ್ಯ ಬಗ್ಗೆ ಬಾಲಕಿ ತಮ್ಮ ಕುಟುಂಬ ಸದಸ್ಯರಿಗೆ ವಿವರಿಸಿದ್ದಾಳೆ. ಕೂಡಲೇ ಆಕೆಯ ಸೋದರ ಮಾವ ಮೌಂಟ್ ಅಬು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪೋಕ್ಸೋ ಎ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ. ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ.