ಪ್ರಯಾಗ್ ರಾಜ್ (ಉತ್ತರಪ್ರದೇಶ): ಜೈಲಾಧಿಕಾರಿಗಳ ಬೇಜವಾಬ್ದಾರಿತನದಿಂದ ಜಾಮೀನು ಪಡೆದ ಬಳಿಕವೂ ವ್ಯಕ್ತಿ ಎಂಟು ತಿಂಗಳ ಕಾಲ ಜೈಲುವಾಸ ಅನುಭವಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ರಿಮಾಂಡ್ ಶೀಟ್ನಲ್ಲಿ ಅರ್ಜಿದಾರರ ಹೆಸರು ವಿನೋದ್ ಕುಮಾರ್ ಬರುವಾರ್ ಎಂದು ಇದ್ದು, ನ್ಯಾಯಾಲಯದ ಆದೇಶದಲ್ಲಿ ಅವರ ಹೆಸರನ್ನು ವಿನೋದ್ ಬರುವಾರ್ ಎಂದು ಉಲ್ಲೇಖಿಸಲಾಗಿದೆ.
ಏಪ್ರಿಲ್ 9 ರಂದು ವಿನೋದ್ ಉತ್ತರಪ್ರದೇಶ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದರು. ಆದರೆ, ಹೆಸರಿನಲ್ಲಿ ವ್ಯತ್ಯಾಸವಿರುವುದರಿಂದ ಅಧಿಕಾರಿಗಳು ಆರೋಪಿ ಬಿಡುಗಡೆಗೆ ನಿರಾಕರಿಸಿದ್ದರು. ಇದರಿಂದಾಗಿ ವಿನೋದ್ 8 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.
ಆರೋಪಿ ವಿನೋದ್ ಮತ್ತೆ ಹೆಸರು ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಿದಾಗ ನ್ಯಾಯಾಲಯಕ್ಕೆ ಆತನ ಜೈಲುವಾಸದ ಬಗ್ಗೆ ತಿಳಿದಿದೆ. ಈ ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ಈ ದೋಷ ನಡೆದಿದೆ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ. ಬಳಿಕ ಸಿದ್ದಾರ್ಥ ನಗರ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕ ರಾಕೇಶ್ಸಿಂಗ್ರನ್ನು ವಿಚಾರಣೆ ನಡೆಸಿ, ತಾಂತ್ರಿಕ ದೋಷದಿಂದ ಈ ಸಮಸ್ಯೆ ಉದ್ಭವಿಸಿದೆ. ನೀವು ಪರಾಮರ್ಶಿಸಿ ಅವರನ್ನು ಬಿಡುಗಡೆ ಮಾಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ ಎಂದು ಗರಂ ಆಗಿದೆ. ಈ ಸಮಯದಲ್ಲಿ ರಾಕೇಶ್ ಸಿಂಗ್ ಡಿಸೆಂಬರ್ 8 ರಂದು ಜೈಲಿನಿಂದ ರಿಲೀಸ್ ಮಾಡಲಾಗಿದೆ ಎಂದು ನಮೂದಿಸಿ ಅಫಿಡವಿಟ್ ಸಲ್ಲಿಸಿದರು.
ಇದನ್ನೂ ಓದಿ: ಹೈದರಾಬಾದ್ ಏರ್ಪೋರ್ಟ್ನಲ್ಲಿ ವಿದೇಶಿ ಕರೆನ್ಸಿ ವಶಕ್ಕೆ.. ಓರ್ವ ಅರೆಸ್ಟ್
ಈ ಬಗ್ಗೆ ನ್ಯಾಯಮೂರ್ತಿ ಜೆ.ಜೆ. ಮುನೀರ್ ಪ್ರತಿಕ್ರಿಯಿಸಿ, ಅಫಿಡವಿಟ್ಅನ್ನು ಪರಿಶೀಲಿಸಲಾಗಿದೆ. ಆರೋಪಿ ಬಿಡುಗಡೆ ವಿಚಾರವಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಬಗ್ಗೆ ವಿವರಣೆ ನೀಡಲಾಗಿದೆ ಎಂದರು.