ETV Bharat / bharat

ಸ್ನೇಹಿತೆಯ ಮನೆಯಲ್ಲೇ ಬಾಲಕಿಗೆ ಚಿತ್ರಹಿಂಸೆ.. ಚಿಕಿತ್ಸೆ ಫಲಕಾರಿಯಾಗದೆ ಸಾವು - kannada top news

12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಚಿತ್ರಹಿಂಸೆ - ಬಾಲಕಿಯ ಸ್ನೇಹಿತೆಯೆ ಮೆನೆಯಲ್ಲೇ ನಡೆದ ಕೃತ್ಯ - ಆರೋಪಿಗಳನ್ನು ಬಂಧಿಸುವಂತೆ ಠಾಣೆ ಮುಂದೆ ಪ್ರತಿಭಟನೆ.

minor-dies-after-killers-burn-her-with-iron-twist-her-neck-burn-her-face-in-arrah-bihar
ಬಿಹಾರ್ : ಸ್ನೇಹಿತೆಯ ಮನೆಯಲ್ಲೇ ಬಾಲಕಿಗೆ ಚಿತ್ರಹಿಂಸೆ, ಚಿಕಿತ್ಸೆ ಫಲಕಾರಿಯಾಗದೆ ಸಾವು
author img

By

Published : Mar 12, 2023, 11:01 PM IST

ಅರಾಹ್​ (ಬಿಹಾರ): 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕೆಲವು ದುಷ್ಕರ್ಮಿಗಳು ತೀವ್ರ ಹಲ್ಲೆ ಮಾಡಿದ್ದು, ನಂತರ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿರುವ ಘಟನೆ ಬಿಹಾರ ರಾಜ್ಯದ ಅರಾಹ್​ ಜಿಲ್ಲೆಯ ತಿಯಾರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್ ​​ಪ್ರಕಾರ, ತಿಯಾರ್​ ಗ್ರಾಮದ ನಿವಾಸಿಯಾಗಿರುವ ಮೃತ 12 ವರ್ಷದ ಬಾಲಕಿ ಅಂಶುಕುಮಾರಿ ಬೆಳಗ್ಗೆ ಶಾಲೆಗೆ ತೆರಳಿ ಮನೆಗೆ ವಾಪಸಾಗಿರಲಿಲ್ಲ. ಬಾಲಕಿಯ ಕುಟುಂಬ ಸದಸ್ಯರು ಆಕೆಯನ್ನು ಹುಡುಕಲು ಪ್ರಾರಂಭಿಸುತ್ತಾರೆ. ಅದೇ ಗ್ರಾಮದ ಖುಷಿ ಎಂಬ ಸ್ನೇಹಿತೆ ತನ್ನ ಸ್ನೇಹಿತೆಯನ್ನು ಮನೆಗೆ ಕರೆದೊಯ್ದಿದ್ದಾಳೆ ಎಂದು ತಿಳಿದು ಬರುತ್ತದೆ.

ಅಂಶು ಕುಮಾರಿ ಕುಟುಂಬಸ್ಥರು ಆಕೆಯ ಸ್ನೇಹಿತೆಯ ಮನೆಗೆ ಬಂದು ವಿಚಾರಿಸಿದಾಗ ಸ್ನೇಹಿತೆಯ ಮನೆಯವರು, ಆಕೆ ಇಲ್ಲಿಗೆ ಬಂದಿಲ್ಲ ಎಂದು ನಿರಾಕರಿಸುತ್ತಾರೆ. ಆದರೆ, ಮನೆಯೊಳಗೆ ಗಲಾಟೆ ಶಬ್ದ ಕೇಳಿದ ಅಂಶು ಕುಟುಂಬಸ್ಥರಿಗೆ ಅನುಮಾನ ಬಂದು ಮನೆಯೊಳಗೆ ನುಗ್ಗಿ ಬಾಲಕಿಯನ್ನು ಹುಡುಕ್ಕಿದ್ದಾರೆ. ಬಾಲಕಿ ಅದೇ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು, ಆಕೆಯ ದೇಹದ ಮೇಲೆ ಹಲವಾರು ಸುಟ್ಟ ಗಾಯಗಳಾಗಿದ್ದು, ಬಿಸಿ ಕಬ್ಬಿಣದ ರಾಡ್​ನಿಂದ ಸುಟ್ಟು ತೀವ್ರವಾಗಿ ಗಾಯಗೊಳಿಸಿದ್ದರು ಮತ್ತು ಸೀಮೆಎಣ್ಣೆ ಸುರಿದು ಸುಟ್ಟಿದ್ದರು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಬಾಲಕಿ ಪತ್ತೆಯಾದ ಕೂಡಲೇ ಬಬಿಯಾದಲ್ಲಿರುವ ಸಮುದಾಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಅರಾಹ್​ ಜಿಲ್ಲೆಯ ಸದರ್​ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅದೇ ರಾತ್ರಿ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಬಾಲಕಿ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಘಟನೆಗೆ ಸಂಬಂಧ ಪಟ್ಟಂತೆ ಪರಾಸ್​ ಗಿರಿ, ದುರ್ಗಾದೇವಿ ಮತ್ತು ಖುಷಿ ಕುಮಾರಿ ಈ ಮೂವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಜೊತೆಗೆ ಸಂತ್ರಸ್ತೆಯ ಕುಟಂಬವು ದೂರಿನಲ್ಲಿ ಅಪರಿಚಿತ ಯುವಕನ ಪಾತ್ರವು ಇದೇ ಎಂದು ಉಲ್ಲೇಖಿಸಿದ್ದಾರೆ.

ಬಾಲಕಿಯ ಕುಟುಂಬಸ್ಥರು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ತಿಯಾರ್​ ಪೊಲೀಸ್​ ಠಾಣೆ ಮುಂದೆ ಮೃತ ಬಾಲಕಿಯ ಶವದೊಂದಿಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಜಗದೀಶ್​ಪುರ ಉಪವಿಭಾಗದ ಡಿಎಸ್​ಪಿ ರಾಜೀವ್​ ಚಂದ್ರ ಸಿಂಗ್​ ಪ್ರತಿಭಟನಾ ಸ್ಥಳಕ್ಕೆ ದಾವಿಸಿ, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಸಂತ್ರಸ್ತೆ ಕುಟುಂಬಕ್ಕೆ ಭರವಸೆ ನೀಡಿದರು. ಆದರೆ, ಪೊಲೀಸ್​ ಮೂಲಗಳ ಪ್ರಕಾರ ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

ಮಹಡಿ ಮೇಲಿಂದ ಬಿದ್ದು ಗಗನಸಖಿ ಸಾವು : ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೋರಮಂಗಲದ 8ನೇ ಬ್ಲಾಕ್​ನಲ್ಲಿ ಇತ್ತೀಚೆಗೆ ನಡೆದಿದೆ. ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್​ನ ನಾಲ್ಕನೇ ಮಹಡಿಯಿಂದ ಬಿದ್ದು ಅರ್ಚನಾ ಧಿಮಾನ್ (28) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಇಬ್ಬರನ್ನು ಹೊರದಬ್ಬಿದ ಸಹ ಪ್ರಯಾಣಿಕರು.. ಓರ್ವ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.