ETV Bharat / bharat

14ರ ವಯಸ್ಸಿಗೇ ಅಶ್ಲೀಲ ಚಿತ್ರ ವ್ಯಸನ: ಆಟದ ನೆಪದಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ - ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ

ಅಶ್ಲೀಲ ಚಿತ್ರಗಳ ವ್ಯಸನಿಯಾಗಿದ್ದ 14 ವರ್ಷದ ಬಾಲಕ ಆಟವಾಡುವ ನೆಪದಲ್ಲಿ 8 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

minor-boy-murdered-girl-child-after-rape-in-chhattisgarh
14 ವರ್ಷಕ್ಕೇ ಅಶ್ಲೀಲ ಚಿತ್ರಗಳ ವ್ಯಸನಿ... ಆಟವಾಡುವ ನೆಪದಲ್ಲಿ ಬಾಲಕಿಯ ಕರೆದೊಯ್ದು ರೇಪ್​ ಆ್ಯಂಡ್​ ಮರ್ಡ
author img

By

Published : Dec 15, 2022, 10:14 PM IST

ರಾಯ್ಪುರ(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದ 14 ವರ್ಷದ ಬಾಲಕನೊಬ್ಬ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾನೆ.

ರಾಜಧಾನಿ ರಾಯ್ಪುರದಲ್ಲಿ ಡಿ.7 ರಂದು ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಡಿ.13ರಂದು ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಖಾಲಿ ಜಾಗದಲ್ಲಿ ಮೃತದೇಹ ಸಿಕ್ಕಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ. ಬಾಲಕಿಯ ಸಾವಿನ ಕಾರಣದೊಂದಿಗೆ ಆಕೆಯನ್ನು ಹತ್ಯೆ ಮಾಡುವ ಮೊದಲು ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧೀಕ್ಷಕ ಪ್ರಶಾಂತ್ ಅಗರವಾಲ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬಾಲಕಿಯನ್ನು ಬಾಲಕನೊಬ್ಬ ತನ್ನೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆತನನ್ನು ಪತ್ತೆ ಹಚ್ಚಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಆರೋಪಿ ತಾನು ಅಶ್ಲೀಲ ಚಿತ್ರಗಳ ವ್ಯಸನಿ ಎಂದೂ ಒಪ್ಪಿಕೊಂಡಿದ್ದಾನೆ. ಡಿ.7ರಂದು ಆಟವಾಡುವ ನೆಪದಲ್ಲಿ ಹುಡುಗಿಯನ್ನು ತನ್ನೊಂದಿಗೆ ಹತ್ತಿರದ ಕಾಲೋನಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಅಲ್ಲಿ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಅವರು ಹೇಳಿದರು.

ಬಾಲಕನ ತಂದೆ ಕೂಡಾ ಪೋಕ್ಸೋ ಆರೋಪಿ: ಬಾಲಕನ ಮೇಲೆ ಅಪಹರಣ, ಕೊಲೆ, ಸಾಕ್ಷ್ಯ ನಾಶ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ತಂದೆ ಕೂಡ ಪೋಕ್ಸೋ ಕಾಯ್ದೆಯಡಿ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆತ್ತಲೆ ಫೋಟೋಗಳನ್ನ ಕಳುಹಿಸಿ ಪತ್ನಿಯಿಂದಲೇ ಪತಿಗೆ ಬ್ಲಾಕ್​ ಮೇಲ್​​ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.