ETV Bharat / bharat

ಕಡಿಮೆ ಅಂತರದ ಪ್ಯಾಸೆಂಜರ್ ರೈಲು ಪ್ರಯಾಣ ದರ ಹೆಚ್ಚಳ - ಕೇಂದ್ರ ರೈಲ್ವೆ ಇಲಾಖೆ ನ್ಯೂಸ್​

ರೈಲ್ವೆ ಇಲಾಖೆಯಿಂದ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣ ಮಾಡುವ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್ ಸಿಕ್ಕಿದ್ದು, ರೈಲ್ವೆ ಪ್ರಯಾಣ ದರದಲ್ಲಿ ಸ್ವಲ್ಪ ಮಟ್ಟದ ಏರಿಕೆ ಮಾಡಲಾಗಿದೆ.

Ministry of Railways
Ministry of Railways
author img

By

Published : Feb 24, 2021, 10:11 PM IST

ನವದೆಹಲಿ: ಕಡಿಮೆ ಅಂತರದ ಪ್ಯಾಸೆಂಜರ್​ ರೈಲುಗಳ ಪ್ರಯಾಣಕ್ಕೆ ಇದೀಗ ಹೆಚ್ಚಿನ ದರ ನಿಗದಿ ಮಾಡಿ ಕೇಂದ್ರ ರೈಲ್ವೆ ಇಲಾಖೆ ಮಹತ್ವದ ಆದೇಶ ಹೊರಹಾಕಿದೆ. ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ದರ ಜಾರಿಗೊಳ್ಳಲಿದೆ.

ಕೊರೊನಾ ವೈರಸ್ ಹಾವಳಿ ಜೋರಾಗಿದ್ದ ಕಾರಣ ದೇಶದಲ್ಲಿ ವಿಶೇಷ ರೈಲು ಮಾತ್ರ ಓಡಿಸಲಾಗುತ್ತಿತ್ತು. ಇದೀಗ ಎಲ್ಲ ರೈಲುಗಳ ಪ್ರಯಾಣ ಆರಂಭಗೊಂಡಿದ್ದು, ಅಲ್ಪ ದೂರದ ಪ್ರಯಾಣಿಕರು ಹೆಚ್ಚಿನ ಹಣ ಸಂದಾಯ ಮಾಡಬೇಕಾಗುತ್ತದೆ.

  • There have been reports about higher price being charged from those travelling in passenger trains over small distances. Railways would like to inform that these slightly higher fares had been introduced to discourage people from avoidable travels: Ministry of Railways pic.twitter.com/Oxb5A0ZWBa

    — ANI (@ANI) February 24, 2021 " class="align-text-top noRightClick twitterSection" data=" ">

ಉದಾಹರಣೆಗೆ ಅಮೃತಸರದಿಂದ ಪಠಾಣ್​ಕೋಟ್​ಗೆ ಇಷ್ಟುದಿನ 25 ರೂ. ಬೆಲೆ ನಿಗದಿಯಾಗಿತ್ತು. ಆದರೆ ಇದೀಗ 55 ರೂ ನೀಡಬೇಕಾಗುತ್ತದೆ. ಅಂತೆಯೇ ಜಲಂಧರ್​ ಸಿಟಿ ರೈಲ್ವೆ ನಿಲ್ದಾಣದಿಂದ ಫಿರೋಜ್​ಪುರ್ ನಡುವಿನ ಟಿಕೆಟ್ ಬೆಲೆ 30 ಇದ್ದಿದ್ದು, ಇದೀಗ 60 ರೂ ಆಗಿದೆ. ಸದ್ಯ ದೇಶದಲ್ಲಿ 1,250 ಮೇಲ್​ ಮತ್ತು ಎಕ್ಸ್​ಪ್ರೆಸ್ ರೈಲು, 5,350 ಉಪನಗರ ಸೇವೆ ಹಾಗೂ 326ಕ್ಕೂ ಹೆಚ್ಚು ಪ್ಯಾಸೆಂಜರ್​ ರೈಲು ಪ್ರತಿದಿನ ಸಂಚಾರ ನಡೆಸುತ್ತಿವೆ. ಇದೀಗ ಒಟ್ಟು ರೈಲುಗಳ ಶೇ 3ರಷ್ಟು ಮಾತ್ರ ಪ್ರಯಾಣ ದರ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.