ನವದೆಹಲಿ: ದೇಶದ ವಿವಿಧ ಸುದ್ದಿ ವಾಹಿನಿಗಳ ವೀಕ್ಷಕರ ರೇಟಿಂಗ್‌ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿಡುಗಡೆ ಮಾಡಲು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ಗೆ (BARC) ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಹತ್ವದ ಸೂಚನೆ ನೀಡಿದೆ. ಇದರ ಜೊತೆಗೆ, ಕಳೆದ ಮೂರು ತಿಂಗಳ ದತ್ತಾಂಶವನ್ನೂ ಬಿಡುಗಡೆ ಮಾಡಲು ತಿಳಿಸಿದೆ.
ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಸಮಿತಿಯ ವರದಿ ಮತ್ತು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿರುವ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಟಿಆರ್‌ಪಿ ಹಗರಣ: 12 ವಾರಗಳ ರೇಟಿಂಗ್ಸ್ ನಿಲ್ಲಿಸಿದ ಬಾರ್ಕ್!
2020ರ ಅಕ್ಟೋಬರ್ ತಿಂಗಳಲ್ಲಿ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ದೇಶಾದ್ಯಂತ ಸುದ್ದಿ ಚಾನೆಲ್‌ಗಳ ವಾರದ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು.