ETV Bharat / bharat

Qutub Minar complex​ survey: ವಿಗ್ರಹಗಳ ಉತ್ಖನನ, ಪ್ರತಿಮಾಶಾಸ್ತ್ರ ನಡೆಸಲು ಸರ್ಕಾರದ ಆದೇಶ - ಕುತುಬ್ ಮಿನಾರ್​ನಲ್ಲಿ ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ

ಕುತುಬ್ ಮಿನಾರ್‌ನಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಪತ್ತೆಯಾದ ಬಳಿಕ, ಅದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವ ಸಲುವಾಗಿ ಸಂಸ್ಕೃತಿ ಸಚಿವಾಲಯವು ಉತ್ಖನನ ನಡೆಸುವಂತೆ ಎಎಸ್‌ಐಗೆ ಸೂಚನೆ ನೀಡಿದೆ.

Qutub Minar complex
ಕುತುಬ್ ಮಿನಾರ್​ನಲ್ಲಿ ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ
author img

By

Published : May 22, 2022, 4:05 PM IST

ನವದೆಹಲಿ: ರಾಷ್ಟ್ರ ರಾಜಧಾನಿಯ ಐತಿಹಾಸಿಕ ಕುತುಬ್ ಮಿನಾರ್‌ನಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ. ಹೀಗಾಗಿ ವಿಗ್ರಹಗಳ ಉತ್ಖನನ ಮತ್ತು ಪ್ರತಿಮಾಶಾಸ್ತ್ರವನ್ನು ನಡೆಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚನೆ ನೀಡಿದೆ.

ಕುತುಬ್ ಮಿನಾರ್​ನನ್ನು ಕುತುಬ್ ಅಲ್-ದೀನ್ ಐಬಕ್ ನಿರ್ಮಿಸಿಲ್ಲ. ಬದಲಿಗೆ ಇದನ್ನು ನಿರ್ಮಿಸಿರುವುದು ಹಿಂದೂ ಚಕ್ರವರ್ತಿ ರಾಜಾ ವಿಕ್ರಮಾದಿತ್ಯ ಎಂದು ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಪ್ರತಿಪಾದಿಸಿದ ನಂತರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಕುತುಬ್ ಮಿನಾರ್ ಜೊತೆಗೆ ಅನಂಗ್ತಾಲ್ ಮತ್ತು ಲಾಲ್ಕೋಟ್ ಕೋಟೆ ಸೇರಿದಂತೆ ಸುತ್ತಮುತ್ತಲಿನ ಇತರ ನಿರ್ಮಾಣಗಳನ್ನು ಸಹ ಉತ್ಖನನ ಮಾಡಲು ಆದೇಶಿಸಲಾಗಿದೆ. ದೊರೆತಿರುವ ಮಾಹಿತಿಯ ಪ್ರಕಾರ, ಕುತುಬ್ ಮಿನಾರ್​ನ ದಕ್ಷಿಣದಿಂದ ಮತ್ತು ಮಸೀದಿಯಿಂದ 15 ಮೀಟರ್ ದೂರದಲ್ಲಿ ಉತ್ಖನನ ಆರಂಭವಾಗಲಿದೆ.

Qutub Minar complex
ಕುತುಬ್ ಮಿನಾರ್​ನಲ್ಲಿ ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ

ಉತ್ಖನನದ ಆದೇಶವನ್ನು ಅಂಗೀಕರಿಸುವ ಮೊದಲು, ಸಂಸ್ಕೃತಿ ಕಾರ್ಯದರ್ಶಿ ಗೋವಿಂದ್ ಸಿಂಗ್ ಮೋಹನ್ ಅವರು ಮೂವರು ಇತಿಹಾಸಕಾರರು, ನಾಲ್ವರು ಎಎಸ್ಐ ಅಧಿಕಾರಿಗಳು ಮತ್ತು ತನಿಖಾ ಅಧಿಕಾರಿಗಳು ಸೇರಿದಂತೆ 12 ಅಧಿಕಾರಿಗಳ ತಂಡದೊಂದಿಗೆ ಸ್ಮಾರಕಕ್ಕೆ ಭೇಟಿ ನೀಡಿದರು. ಸ್ಮಾರಕದ ಉತ್ಖನನವನ್ನು 1991 ರಲ್ಲಿ ನಡೆಸಲಾಗಿತ್ತು. ಇದೀಗ ಎರಡನೇ ಬಾರಿಗೆ ಉತ್ಖನನ ಮಾಡಲಾಗುತ್ತಿದೆ ಎಂದು ತಂಡದಲ್ಲಿರುವ ಎಎಸ್ಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ನಿಮ್ಮ ವಾಹನದ ನಂಬರ್‌ಪ್ಲೇಟ್ ಮೇಲೆ‌ ಹೆಸರು, ಹುದ್ದೆಗಳನ್ನು ಹಾಕುವಂತಿಲ್ಲ

ಧರ್ಮವೀರ್ ಶರ್ಮಾ ಅವರ ಹೊರತಾಗಿ, ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ವಕ್ತಾರ ವಿನೋದ್ ಬನ್ಸಾಲ್ ಅವರು ಕುತುಬ್ ಮಿನಾರ್ ವಾಸ್ತವವಾಗಿ 'ವಿಷ್ಣು ಸ್ತಂಭ' ಮತ್ತು ವಿದೇಶಿ ಇಸ್ಲಾಮಿಕ್ ಆಕ್ರಮಣಕಾರರು ಹತ್ತಾರು ಜೈನ-ಹಿಂದೂ ದೇವಾಲಯಗಳನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.