ETV Bharat / bharat

’ಕೊರೊನಾದಿಂದ ಕಾಪಾಡು ತಾಯಿ’: ಏರ್​​ಪೋರ್ಟ್​​ನಲ್ಲಿ ಪೂಜೆ ಮಾಡಿದ ಮಧ್ಯಪ್ರದೇಶದ ಸಚಿವೆ!

ಮಹಾಮಾರಿ ಹೋಗಲಾಡಿಸಲು ಮಧ್ಯಪ್ರದೇಶದ ಸಚಿವೆಯೊಬ್ಬರು ಏರ್​ಪೋರ್ಟ್​ನಲ್ಲಿ ಪೂಜೆ ಮಾಡಿದ್ದು, ಈ ವೇಳೆ ಅವರು ಮಾಸ್ಕ್​ ಹಾಕಿಕೊಳ್ಳದೇ ವಿವಾದಕ್ಕೆ ಕಾರಣವಾಗಿದ್ದಾರೆ.

Madhya Pradesh Minister Performs 'Puja'
Madhya Pradesh Minister Performs 'Puja'
author img

By

Published : Apr 10, 2021, 5:47 PM IST

ಭೋಪಾಲ್​​(ಮಧ್ಯಪ್ರದೇಶ): ದೇಶಾದ್ಯಂತ ಎರಡನೇ ಹಂತದ ಕೋವಿಡ್​ ಅಲೆ ಜೋರಾಗಿದ್ದು, ಈಗಾಗಲೇ ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣಗಳು ಪತ್ತೆಯಾಗ್ತಿವೆ. ಇದರ ಮಧ್ಯೆ ಮಧ್ಯಪ್ರದೇಶದ ಸಚಿವರೊಬ್ಬರು ಏರ್​ಪೋರ್ಟ್​​ನಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ.

ಏರ್​​ಪೋರ್ಟ್​​ನಲ್ಲಿ ಪೂಜೆ ಮಾಡಿದ ಮಧ್ಯಪ್ರದೇಶ ಸಚಿವೆ

ಮಧ್ಯಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಷಾ ಠಾಕೂರ್​ ಈ ರೀತಿಯಾಗಿ ನಡೆದುಕೊಂಡಿದ್ದು, ಇದೀಗ ಎಲ್ಲೆಡೆ ಸುದ್ದಿಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್​​ನಲ್ಲಿನ ವಿಮಾನ ನಿಲ್ದಾಣದಲ್ಲಿ ದೇವಿ ಅಹಲ್ಯಾ ಬಾಯಿ ಹೋಲ್ಕರ್​ ಪ್ರತಿಮೆ ಮುಂದೆ ಕುಳಿತುಕೊಂಡು ಪೂಜೆ ಮಾಡಿದ್ದಾರೆ. ವಿಶೇಷವೆಂದರೆ ದೇವಿ ಮುಂದೆ ಕುಳಿತುಕೊಂಡು ಚಪ್ಪಾಳೆ ತಟ್ಟಿ, ಭಜನೆ ಹಾಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದ ಕೆಲ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಹೃದಯ ವಿದ್ರಾವಕ: ಊಟವಿಲ್ಲದೇ ನರಳುತ್ತಿದ್ದ ಮಗು ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ಫ್ಲೇಟ್ ನೆಕ್ಕಿತು!

ಇನ್ನು ಪೂಜೆ ವೇಳೆ ಸಚಿವೆ ಮಾಸ್ಕ್ ಹಾಕಿಕೊಂಡಿಲ್ಲ ಎಂಬ ಮಾಹಿತಿ ಬಹಿರಂಗಗೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಯಜ್ಞ, ಹವನ ನಡೆಸುವುದರಿಂದ ತಮಗೆ ಕೊರೊನಾ ಬರುವುದಿಲ್ಲ ಎಂದಿದ್ದಾರೆ. ಈ ಹಿಂದೆ ಕೂಡ ವಿವಾದಕ್ಕೆ ಒಳಗಾಗಿದ್ದ ಸಚಿವೆ ಯುವತಿಯರು ಹರಿದ ಜೀನ್ಸ್​ ಧರಿಸುವ ಬಗ್ಗೆ ಕಮೆಂಟ್​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.