ETV Bharat / bharat

ಬೈಕ್‌ ಇಂಜಿನ್‌ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್​ : ಪ್ರತಿ ಲೀಟರ್ ಪೆಟ್ರೋಲ್​ಗೆ ಮೈಲೇಜ್​ ಎಷ್ಟು ಗೊತ್ತಾ? - ಬಿಹಾರದ ಬೆಟ್ಟಿಯಾ ಮೆಕ್ಯಾನಿಕ್​

ಲಾಕ್‌ಡೌನ್ ಸಮಯದಲ್ಲಿ ಏನಾದ್ರೂ ಹೊಸದನ್ನು ಮಾಡಬೇಕೆಂದು ಯೋಚಿಸಿ ಮೆಕ್ಯಾನಿಕ್ ಲೋಹಾ ಸಿಂಗ್, ಬೈಕ್‌ನ ಇಂಜಿನ್‌ನಿಂದ ಮಿನಿ ಕ್ಲಾಸಿಕ್ ಜೀಪ್ ತಯಾರಿಸಿದ್ದಾರೆ. 150 ಸಿಸಿ ಎಂಜಿನ್​ನ ಜೀಪ್​ನಲ್ಲಿ ನಾಲ್ವರು ಕುಳಿತು ಪ್ರಯಾಣಿಸಬಹುದಾಗಿದೆ. ಇದು ಒಂದು ಲೀಟರ್ ಪೆಟ್ರೋಲ್​ಗೆ 30 ಕಿ.ಮೀ. ದೂರ ಕ್ರಮಿಸುತ್ತದೆ..

ಬೈಕ್‌ ಇಂಜಿನ್‌ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್​

author img

By

Published : Apr 15, 2022, 2:21 PM IST

ಬೆಟ್ಟಿಯಾ : ಬಿಹಾರದ ಮೆಕ್ಯಾನಿಕ್​ವೊಬ್ಬರು ಬೈಕ್‌ನ ಇಂಜಿನ್‌ನಿಂದ ಮಿನಿ ಕ್ಲಾಸಿಕ್ ಜೀಪ್ ತಯಾರಿಸಿದ್ದಾರೆ. 150 ಸಿಸಿ ಎಂಜಿನ್​ನ ಜೀಪ್​ನಲ್ಲಿ ನಾಲ್ವರು ಕುಳಿತು ಪ್ರಯಾಣಿಸಬಹುದಾಗಿದೆ. ಇದು ಒಂದು ಲೀಟರ್ ಪೆಟ್ರೋಲ್​ಗೆ 30 ಕಿ.ಮೀ. ದೂರ ಕ್ರಮಿಸುತ್ತದೆ. ಅಲ್ಲದೇ, ಅಂದಾಜು 10 ಕ್ವಿಂಟಾಲ್ ಭಾರದ ಸರಕುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದ ಮೆಕ್ಯಾನಿಕ್ ಆಗಿರುವ ಲೋಹಾ ಸಿಂಗ್ ಈ ವಿಶೇಷವಾದ ಜೀಪ್​ ಸಿದ್ಧಪಡಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂದು ಯೋಚಿಸಿದ್ದರ ಫಲ ಇದಾಗಿದೆ. ಯೂಟ್ಯೂಬ್​​ ನೋಡುವಾಗ ಈ ಕ್ಲಾಸಿಕ್ ಜೀಪ್‌ ಮಾಡುವ ಆಲೋಚನೆ ಮೂಡಿದೆ. ಅಂತೆಯೇ ಲೋಹಾ ಸಿಂಗ್​ ಜೀಪ್ ತಯಾರಿಸಲು ಪ್ರಾರಂಭಿಸಿ, ಯೂಟ್ಯೂಬ್​ ನೋಡಿಯೇ 50 ದಿನಗಳಲ್ಲಿ ನಾಲ್ಕು ಆಸನಗಳ ಈ ಮಿನಿ ಜೀಪ್​ ರಸ್ತೆಗಿಳಿಸಿದ್ದಾರೆ.

ಬೈಕ್‌ ಇಂಜಿನ್‌ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್​
ಬೈಕ್‌ ಇಂಜಿನ್‌ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್​

ಈ ಜೀಪ್ ಒಟ್ಟು 6 ಗೇರ್‌ಗಳನ್ನು ಹೊಂದಿದೆ. ಇದನ್ನು ಆಟೋಮ್ಯಾಟಿಕ್​ ಸ್ಟಾರ್ಟ್ ಮಾಡಬಹುದು. ಇದರ ಪವರ್ ಟಿಲ್ಲರ್ ವೀಲ್​ಗಳು ಕಚ್ಚಾ ರಸ್ತೆಗಳು ಮತ್ತು ಜಲಾವೃತ ರಸ್ತೆಗಳಲ್ಲೂ ಸರಾಗವಾಗಿ ಓಡಲಿವೆ. ಇದರಲ್ಲಿ ನಾಲ್ವರು ಪ್ರಯಾಣಿಕರು ಮತ್ತು 10 ಕ್ವಿಂಟಾಲ್ ತೂಕದೊಂದಿಗೆ ಗಂಟೆಗೆ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಒಂದು ಲೀಟರ್ ಪೆಟ್ರೋಲ್ 30 ಕಿ.ಮೀ ದೂರ ಹೋಗಬಹುದು. ಈ ಜೀಪ್ ಸಿದ್ಧಪಡಿಸಲು 1.50 ಲಕ್ಷ ರೂ. ವೆಚ್ಚವಾಗಿದೆ ಅಂತಾರೆ ಲೋಹಾ ಸಿಂಗ್.

ಈ ಜೀಪ್​ ನೋಡಿದ ಗ್ರಾಹಕರು ಖರೀದಿಸಲು ಮುಂದೆ ಬರುತ್ತಿದ್ದಾರೆ. ಆದರೆ, ಇದು ನಾನು ಸಿದ್ಧಪಡಿಸಿದ ಮೊದಲ ಜೀಪ್​ ಆಗಿದೆ. ಆದ್ದರಿಂದ ಮಾರಾಟ ಮಾಡುವ ಇಚ್ಛೆ ಇಲ್ಲ. ಆದರೆ, ಮಾರುಕಟ್ಟೆಯಲ್ಲಿ ಜೀಪ್​​ಗೆ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಜೀಪ್​ ತಯಾರಿಸಿ ಮಾರಾಟ ಮಾಡುವ ಯೋಚನೆ ಇದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಇಂಡಿಗೋ ವಿಮಾನದ ಪ್ರಯಾಣಿಕನ ಮೊಬೈಲ್​ನಲ್ಲಿ ಕಾಣಿಸಿಕೊಂಡ ಬೆಂಕಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.