ETV Bharat / bharat

ಸಾಲ, ಪತ್ನಿಯಿಂದ ದೂರವಾಗಲು ತನ್ನದೇ ಕೊಲೆ ಕತೆ ಕಟ್ಟಿದ ವ್ಯಕ್ತಿ.. ಕೊನೆಗೆ ಏನಾಯ್ತು ಗೊತ್ತಾ?

ಪತ್ನಿ ಮತ್ತು ಮಾಡಿದ ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಒಡಿಶಾದ ವ್ಯಕ್ತಿಯೊಬ್ಬ ತನ್ನ ಸಾವಿನ ಕತೆ ಹೆಣೆದು ಮುಂಬೈನಲ್ಲಿ ಸಿಕ್ಕಿಬಿದ್ದಿದ್ದ ಘಟನೆ ನಡೆದಿದೆ.

author img

By

Published : Mar 18, 2023, 12:21 PM IST

ಸಾವಿನ ಕತೆ ಹೆಣೆದು ಸಿಕ್ಕಿಬಿದ್ದ ವ್ಯಕ್ತಿ
ಸಾವಿನ ಕತೆ ಹೆಣೆದು ಸಿಕ್ಕಿಬಿದ್ದ ವ್ಯಕ್ತಿ

ಗಜಪತಿ (ಒಡಿಶಾ): ಇದು ಸಿನಿಮಾ ಕಥೆಯಂತಿದ್ದರೂ ಸಿನಿಮಾವಲ್ಲ. ತನ್ನ ಸಾವನ್ನು ತಾನೇ ಸೃಷ್ಟಿಸಿ, ಮೃತಪಟ್ಟಿದ್ದಾಗಿ ಮನೆಯವರನ್ನು ನಂಬಿಸಿದ್ದ. ಆದರೆ, ಮೊಬೈಲ್​ ಟ್ರ್ಯಾಕ್​ ಮಾಡಿ ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಮೃತಪಟ್ಟಿದ್ದ ವ್ಯಕ್ತಿ ಮುಂಬೈನಲ್ಲಿ ಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ತನ್ನ ಸಾವಿನ ಪ್ರಸಂಗ ಸೃಷ್ಟಿಸಿದ್ದಾದರೂ ಯಾಕೆ ಅಂತೀರಾ. ತಾನು ಮಾಡಿದ ಸಾಲದ ಹೊರೆ ಮತ್ತು ಹೆಂಡತಿಯಿಂದ ದೂರವಾಗಲು ಈ ನಾಟಕ ಮಾಡಿದ್ದಾನೆ. ಆದರೆ, ತಂತ್ರಜ್ಞಾನದ ಸಹಾಯದಿಂದಾಗಿ ಸಿಕ್ಕಿ ಹಾಕಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ ಏನು?: ಒಡಿಶಾದ ಗಜಪತಿ ಜಿಲ್ಲೆಯ ಬರಿಯಾಪ ಗ್ರಾಮದ ಸರತ್​ ಪರಿಚಾ ಎಂಬ ಕಾರ್ಮಿಕ ಜೀವನ ನಿರ್ವಹಣೆಗಾಗಿ ಊರಲ್ಲೆಲ್ಲಾ ಮೈತುಂಬಾ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೇ ಆತ ಏನೇನೋ ಪ್ಲಾನ್​ ಮಾಡುತ್ತಿದ್ದ. ಅಲ್ಲದೇ, ಕಟ್ಟಿಕೊಂಡ ಪತ್ನಿಯನ್ನೂ ಕೂಡ ತೊರೆಯಲು ಯೋಜಿಸಿದ್ದ. ಅದರಂತೆ ಸರತ್​ ಪರಿಚಾ ಐಡಿಯಾ ಹುಡುಕಿದ್ದು ತನ್ನ ಕೊಲೆ. ಅಂದರೆ, ತಾನು ಕೊಲೆಯಾಗಿದ್ದೇನೆ ಎಂದು ಸೃಷ್ಟಿಸಿದರೆ, ಸಾಲ ಮತ್ತು ಹೆಂಡತಿಯಿಂದ ದೂರವಾಗಬಹುದು ಎಂದು ಅಂದುಕೊಂಡಿದ್ದ.

ತಮಿಳುನಾಡಿನಲ್ಲಿ ಕೊಲೆ ನಾಟಕ: ಮಾರ್ಚ್ 6 ರಂದು ತನ್ನ ಮೇಲೆ ದುಷ್ಕರ್ಮಿಗಳು ತಮಿಳುನಾಡಿನಲ್ಲಿ ದಾಳಿ ಮಾಡಿದ್ದಾರೆ ಎಂದು ಬಿಂಬಿಸಿ ಸರತ್​ ಪರಿಚಾ ಒಡಿಶಾದಲ್ಲಿದ್ದ ಕುಟುಂಬಕ್ಕೆ ವಿಡಿಯೋ ಕಾಲ್​ ಮಾಡಿದ್ದ. ಕೆಲವು ದಿನಗಳ ನಂತರ, ಕುಟುಂಬ ಸದಸ್ಯರಿಗೆ ಮೊಬೈಲ್ ಫೋನ್‌ನಿಂದ ಪರಿಚಾ ಮೃತದೇಹದ ಚಿತ್ರವನ್ನು ಕಳುಹಿಸಲಾಗಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತಂಡ ರಚಿಸಿ ತನಿಖೆ ನಡೆಸಿದ್ದರು. ತಮಿಳುನಾಡು ಪೊಲೀಸರನ್ನು ಸಂಪರ್ಕಿಸಿದ್ದು, ಸರತ್ ತಮಿಳುನಾಡಿನಲ್ಲಿ ಕೆಲಸ ಮಾಡಿಲ್ಲ ಎಂಬುದು ಖಚಿತವಾಗಿದೆ. ನಂತರ ಆತನ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಅದು ತಮಿಳುನಾಡಿನ ಬದಲು ಮುಂಬೈನಲ್ಲಿ ಇರುವುದು ಗೋಚರವಾಗಿದೆ. ಹೀಗಾಗಿ ಸರತ್​ ಮುಂಬೈನಲ್ಲಿ ಇರುವ ಶಂಕೆಯ ಮೇಲೆ ಒಡಿಶಾ ಪೊಲೀಸ್ ತಂಡಗಳು ಮುಂಬೈ ತಲುಪಿವೆ.

ವ್ಯಕ್ತಿಯ ಚಿತ್ರ ಮತ್ತು ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಆತ, "ಮುಂಬೈನ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂತು. ಬಳಿಕ ಆತನನ್ನು ವಶಕ್ಕೆ ಪಡೆದು, ಒಡಿಶಾಕ್ಕೆ ಕರೆತರಲಾಯಿತು. ಆರೋಪಿಯು ತನ್ನ ಸಾವನ್ನು ತಾನೇ ಸೃಷ್ಟಿಸಿ ಕೊಲೆಯ ವದಂತಿ ಹರಡುವ ಮೂಲಕ ಪೊಲೀಸ್​ ತನಿಖೆಯ ದಿಕ್ಕು ತಪ್ಪಿಸಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಗಜಪತಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಲಸಿಕೆಯ ವಿಚಾರಕ್ಕೆ ಹೆಂಡತಿ ಕೊಂದ ಗಂಡ: ಮಗುವಿಗೆ ಲಸಿಕೆ ಹಾಕಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಪತಿ ಮಹಾಶಯ, ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಲ್ಲದೇ, 25 ವರ್ಷದ ಮಗುವನ್ನು ನೀರಿನ ತೊಟ್ಟಿಗೆ ಹಾಕಿ ಹತ್ಯೆ ಮಾಡಿದ ಘಟನೆ ಹೈದರಾಬಾದ್​ನಲ್ಲಿ ಈಚೆಗೆ ವರದಿಯಾಗಿತ್ತು. ಆರೋಪಿ ಧನರಾಜ್​ ತನ್ನ ಎರಡೂವರೆ ವರ್ಷದ ಮಗಳ ಮುಂದೆಯೇ ಪತ್ನಿಯ ಹತ್ಯೆ ಮಾಡಿದ್ದ. ಅಪ್ಪ ಅಮ್ಮನ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ರು. ತನ್ನ ಕಿರಿಯ ಸಹೋದರನನ್ನು ನೀರಿನ ತೊಟ್ಟಿಗೆ ಎಸೆದರು ಎಂದು ಪುಟ್ಟ ಬಾಲಕಿ ಹೇಳಿಕೆ ನೀಡಿದ್ದಳು.

ಓದಿ: ಯೂಟ್ಯೂಬ್ ನೋಡಿ ತೂಕದ ಸ್ಕೇಲ್‌ನಲ್ಲಿ ಗೋಲ್ಮಾಲ್: ಗ್ರಾಹಕರಿಗೆ ವಂಚಿಸುತ್ತಿದ್ದ ಹದಿನೇಳು ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.