ಲಖನೌ(ಉತ್ತರ ಪ್ರದೇಶ): ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದ ನಂತರ ಕಾಣಿಸಿಕೊಂಡು ಗಮನ ಸೆಳೆದಿದ್ದ ಸೆಲ್ಫಿ ಮ್ಯಾನ್ ಕಿರಣ್ ಗೋಸಾವಿ ಎಂಬಾತನ ಬಂಧನ ಸುದ್ದಿ ಸುಳ್ಳು ಎಂದು ಲಖನೌ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಕ್ರೂಸ್ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಿರಣ್ ಗೋಸಾವಿ ಪ್ರಮುಖ ಸಾಕ್ಷಿದಾರನಾಗಿದ್ದು, ಆತನಿಗಾಗಿ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ. ಆತ ಯಾವುದೇ ಸಮಯದಲ್ಲೂ ಕೂಡಾ ಪೊಲೀಸರ ಮುಂದೆ ಶರಣಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬೆನ್ನಲ್ಲೇ ಒಂದು ಆಡಿಯೋ ಕ್ಲಿಪ್ ಸಾಕಷ್ಟು ಕುತೂಹಲವನ್ನು ಸೃಷ್ಟಿ ಮಾಡುತ್ತಿದೆ. ಈ ಕ್ಲಿಪ್ನಲ್ಲಿ ಕಿರಣ್ ಗೋಸಾವಿ ಎಂದು ಅಂದಾಜು ಮಾಡಬಹುದಾದ ವ್ಯಕ್ತಿ ಪೊಲೀಸರೊಂದಿಗೆ ಮಾತನಾಡಿದ್ದಾರೆ. ಮೊದಲಿಗೆ ಇದು ಉತ್ತರ ಪ್ರದೇಶದ ಮಡಿಯಾಂ ಪೊಲೀಸ್ ಸ್ಟೇಷನ್ಗೆ ಕರೆ ಮಾಡಿ ಈ ರೀತಿ ಮಾತನಾಡಿದ್ದಾನೆ. ಮೊದಲಿಗೆ ಇದು ಮಡಿಯಾಂವ್ ಪೊಲೀಸ್ ಠಾಣೆಯೇ ಎಂದು ಖಚಿತಪಡಿಸಿಕೊಂಡ ಆ ವ್ಯಕ್ತಿ (ಕಿರಣ್ ಗೋಸಾವಿ ಇರಬಹುದು) ಮತ್ತು ಪೊಲೀಸ್ನೊಂದಿಗಿನ ಸಂಭಾಷಣೆ ಹೀಗಿದೆ..
ಕಿರಣ್ ಗೋಸಾವಿ: ನಾನು ಅಲ್ಲಿಗೆ ಬರುತ್ತೇನೆ. ನಾನು ಕಿರಣ್ ಗೋಸಾವಿ. ನಾನು ಶರಣಾಗಬೇಕಿದೆ.
ಪೊಲೀಸ್: ನೀನು ಯಾಕೆ ಇಲ್ಲಿಗೆ ಬರಬೇಕು?
ಕಿರಣ್ ಗೋಸಾವಿ: ಇದೇ ನನಗೆ ಅತ್ಯಂತ ಹತ್ತಿರದ ಪೊಲೀಸ್ ಸ್ಟೇಷನ್
ಪೊಲೀಸ್ : (ಸ್ವಲ್ಪ ಸಮಯದ ನಂತರ) ನೀನು ಇಲ್ಲಿ ಶರಣಾಗಲು ಸಾಧ್ಯವಿಲ್ಲ. ಬೇರೆ ಕಡೆ ಪ್ರಯತ್ನಿಸಿ..
ಈ ಸಂಭಾಷಣೆ ವೈರಲ್ ಆಗಿದ್ದು, ಈ ಘಟನೆಯ ನಂತರ ಮಡಿಯಾಂವ್ ಪೊಲೀಸ್ ಠಾಣೆಯ ಬಳಿ ಮಾಧ್ಯಮಗಳು ಗುಂಪುಗೂಡಿದ್ದು, ಸಂಪೂರ್ಣ ಭದ್ರತೆ ನೀಡಲಾಗಿತ್ತು. ಸಾಕಷ್ಟು ಮಂದಿ ಅಧಿಕಾರಿಗಳು ಕಚೇರಿಯ ಹೊರಗಡೆ ಬೀಡುಬಿಟ್ಟಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಧಿಕಾರಿಯೊಬ್ಬರು ಕಿರಣ್ ಗೋಸಾವಿ ಬರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮಧ್ಯರಾತ್ರಿಯವರೆಗೆ ಅಲ್ಲಿ ಸಾಕಷ್ಟು ಮಂದಿ ನೆರೆದಿದ್ದರು.
ಸೋಮವಾರ ಸಂಜೆ ಮಾಧ್ಯಮಗಳಿಗೆ ಮತ್ತೊಂದು ಆಡಿಯೋ ಕ್ಲಿಪ್ ಸಿಕ್ಕಿದ್ದು, ಆ ಕ್ಲಿಪ್ನಲ್ಲಿ ನನಗೆ ಮಹಾರಾಷ್ಟ್ರ ಪೊಲೀಸರಿಂದ ಬೆದರಿಕೆಯಿದೆ. ನಾನು ಉತ್ತರ ಪ್ರದೇಶ ಪೊಲೀಸರಿಗೇ ಶರಣಾಗುತ್ತೇನೆ ಎಂದು ಹೇಳಿದ್ದು ವರದಿಯಾಗಿತ್ತು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಮಡಿಯಾಂವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮನೋಜ್ ಸಿಂಗ್ ನಾವು ಯಾವುದೇ ಪೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ನೈಜೀರಿಯಾದಲ್ಲಿ ಮಸೀದಿ ಮೇಲೆ ಬಂದೂಕುಧಾರಿಗಳ ದಾಳಿ, ಕನಿಷ್ಠ 18 ಜನರು ಸಾವು