ETV Bharat / bharat

ಭಾರತ ಪ್ರವಾಸದಲ್ಲಿ ಬಿಲ್ ಗೇಟ್ಸ್: ಆರ್​ಬಿಐ ಕಚೇರಿಗೆ ಭೇಟಿ, ಮಹತ್ವದ ಮಾತುಕತೆ

ಭಾರತದ ಪ್ರವಾಸದಲ್ಲಿರುವ ಬಿಲ್ ಗೇಟ್ಸ್ ಇಂದು ಮುಂಬೈನಲ್ಲಿ ಆರ್​ಬಿಐ ಕಚೇರಿಗೆ ಭೇಟಿ ಕೊಟ್ಟರು.

microsofts-co-founder-bill-gates-visits-rbi-office-in-mumbai
ಆರ್​ಬಿಐ ಕಚೇರಿಗೆ ಬಿಲ್ ಗೇಟ್ಸ್ ಭೇಟಿ
author img

By

Published : Feb 28, 2023, 4:43 PM IST

ಮುಂಬೈ (ಮಹಾರಾಷ್ಟ್ರ): ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ, ಜಾಗತಿಕ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರಿಂದು ಮುಂಬೈನಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್​ (ಆರ್​ಬಿಐ) ಕಚೇರಿಗೆ ಭೇಟಿ ನೀಡಿ, ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ಬಗ್ಗೆ ಆರ್​​ಬಿಐ ಟ್ವೀಟ್​ ಮಾಡಿದ್ದು, ಬಿಲ್​ ಗೇಟ್ಸ್ ಭೇಟಿ ಕೊಟ್ಟು ಗವರ್ನರ್ ಶಕ್ತಿಕಾಂತ ದಾಸ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು ಎಂದು ತಿಳಿಸಿದೆ. ಮತ್ತೊಂದೆಡೆ, ಶಕ್ತಿಕಾಂತ್ ದಾಸ್ ಕೂಡ ಟ್ವೀಟಿಸಿ, ಬಿಲ್​ ಗೇಟ್ಸ್‌​ ಅವರೊಂದಿಗೆ ಮಹತ್ವದ ಸಭೆ ನಡೆಯಿತು. ಹಣಕಾಸು, ಪಾವತಿ ವ್ಯವಸ್ಥೆಗಳು, ಕಿರು ಬಂಡವಾಳ ಹಾಗೂ ಡಿಜಿಟಲ್ ಸಾಲ ನೀಡುವಿಕೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಬಿಲಿಯನೇರ್ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಉದಾರ ದಾನ ನೀಡುವ ಬಿಲ್​ ಗೇಟ್ಸ್, ಇತ್ತೀಚೆಗೆ ಭಾರತದಲ್ಲಿ ವ್ಯಾಪಾರ ಮತ್ತು ಇತರ ಚಟುವಟಿಕೆಗಳನ್ನು ನಡೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. ಭೂಮಿಯಲ್ಲಿರುವ ಇತರ ದೇಶಗಳಂತೆ ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ, ಆ ನಿರ್ಬಂಧದ ಹೊರತಾಗಿಯೂ ಜಗತ್ತು ಇನ್ನೂ ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಭಾರತ ನಮಗೆ ತೋರಿಸಿದೆ ಎಂದು ಗೇಟ್ಸ್ ಸೋಮವಾರ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ: ಬಿಲ್ ಗೇಟ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.