ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮನ್ ಕಿ ಬಾತ್ ನ 100 ನೇ ಸಂಚಿಕೆಯ ಪ್ರಸಾರಕ್ಕೂ ಮುನ್ನ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ್ದಾರೆ. ಈ ಮೂಲಕ ಅವರು ಪ್ರಧಾನಿ ಮೋದಿ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ಮನ್ ಕಿ ಬಾತ್ 100ನೇ ಸಂಚಿಕೆಯ ಸಂಭ್ರಮದಲ್ಲಿದೆ. ಇದೀಗ ಈ ಸಂಭ್ರಮ ದುಪ್ಪಟ್ಟಾಗಿದೆ. ಮೈಕ್ರೋಸಾಫ್ಟ್ ಸಂಹ ಸಂಸ್ಥಾಪಕ, ವಿಶ್ವದ 4ನೇ ಶ್ರೀಮಂತ ಬಿಲ್ ಗೇಟ್ಸ್ ಅವರು ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೊಂಡಾಡಿದ್ದಾರೆ. ದೇಶದಲ್ಲಿ ನಾಗರಿಕರ ಪ್ರಜ್ಞೆಯ ಜೊತೆಗೆ ಸುಸ್ಥಿರ ಅಭಿವೃದ್ಧಿ ವೇಗದಲ್ಲಿ ಮನ್ ಕಿ ಬಾತ್ ಮಹತ್ತರ ಕೊಡುಗೆ ನೀಡಿದೆ ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ಧಾರೆ.
-
Mann ki Baat has catalyzed community led action on sanitation, health, women’s economic empowerment and other issues linked to the Sustainable Development Goals. Congratulations @narendramodi on the 100th episode. https://t.co/yg1Di2srjE
— Bill Gates (@BillGates) April 29, 2023 " class="align-text-top noRightClick twitterSection" data="
">Mann ki Baat has catalyzed community led action on sanitation, health, women’s economic empowerment and other issues linked to the Sustainable Development Goals. Congratulations @narendramodi on the 100th episode. https://t.co/yg1Di2srjE
— Bill Gates (@BillGates) April 29, 2023Mann ki Baat has catalyzed community led action on sanitation, health, women’s economic empowerment and other issues linked to the Sustainable Development Goals. Congratulations @narendramodi on the 100th episode. https://t.co/yg1Di2srjE
— Bill Gates (@BillGates) April 29, 2023
ಪ್ರಧಾನಿ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆ ನಾಳೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಬಗ್ಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ಕುರಿತು ಅವರು ಮಹತ್ವದ ಮಾತುಗಳನ್ನಾಡಿದ್ದಾರೆ.
ಮನ್ ಕಿ ಬಾತ್ ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣದ ಜೊತೆಗೆ ಸುಸ್ಥಿರ ಅಭಿವೃದ್ಧಿ, ಸಮುದಾಯ ನೇತೃತ್ವದ ಕಾರ್ಯಕ್ರಮಗಳ ವೇಗ ಹೆಚ್ಚಿಸಿದೆ. 100ನೇ ಸಂಚಿಕೆ ಪ್ರಸಾರವಾಗಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ದೇಶ ವಿದೇಶದಲ್ಲಿ ಜನಪ್ರಿಯವಾಗಿರುವ ಮನ್ ಕಿ ಬಾತ್ ನಾಳೆ 100ನೇ ಸಂಚಿಕೆ ಪ್ರಸಾರವಾಗುತ್ತಿದೆ. ಮನ್ ಕಿ ಬಾತ್ನ ಈ ವಿಶೇಷ ಸಂಚಿಕೆ ಈಗಾಗಲೇ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಮನ್ ಕಿ ಬಾತ್ 100ನೇ ವಿಶೇಷ ಕಾರ್ಯಕ್ರಮದಲ್ಲಿ ದೇಶದ ಹಲವು ಗಣ್ಯರು ಪಾಲ್ಗೊಂಡು ಮಾತನಾಡಿರುವುದು ಗೊತ್ತಿರುವ ಸಂಗತಿ.
'ಮನ್ ಕಿ ಬಾತ್' ಒಂದು ಮಾಸಿಕ ಕಾರ್ಯಕ್ರಮ. ವರ್ಷದ ಪ್ರತೀ ತಿಂಗಳ ಕೊನೆ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ. ಈ 'ಮನ್ ಕಿ ಬಾತ್' ಮೂಲಕ ದೇಶದ ಪ್ರಧಾನಿ ನರೇದ್ರ ಮೋದಿ ಅವರು ಪ್ರಜೆಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಈ ಕಾರ್ಯಕ್ರಮ ದೊಡ್ಡ ಸಂಖ್ಯೆಯ ಕೇಳುಗರನ್ನು ಹೊಂದಿದ್ದು, ಇದೀಗ ಬಾಲಿವುಡ್ ಹಿರಿಯ, ಬಹುಬೇಡಿಕೆ ನಟ ಅಮೀರ್ ಖಾನ್ ಮಾತನಾಡಿದ್ದಾರೆ.
ನವದೆಹಲಿಯಲ್ಲಿ ನಡೆದ "ಮನ್ ಕಿ ಬಾತ್ @100" ರಾಷ್ಟ್ರೀಯ ಸಮಾವೇಶದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಭಾಗಿ ಆಗಿದ್ದರು. ಪಿಎಂ ಮೋದಿ ಅವರ 'ಮನ್ ಕಿ ಬಾತ್' ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮನ್ ಕಿ ಬಾತ್ ಭಾರತದ ಜನರ ಮೇಲೆ ಭಾರಿ ಪ್ರಭಾವ ಬೀರಿದೆ, ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಿದೆ ಎಂದು ತಿಳಿಸಿದರು.
2014ರಲ್ಲಿ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಆರಂಭಿಸಿದ್ದರು. ರೇಡಿಯೋ ಮೂಲಕ ಪ್ರಸಾರವಾಗುವ ಈ ಕಾರ್ಯಕ್ರಮ ಅಷ್ಟೇ ವೇಗದಲ್ಲಿ ಭಾರತದಲ್ಲಿ ಜನಪ್ರಿಯವಾಗಿದೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯ, ದೇಶದ ಸಂಸ್ಕೃತಿ, ಕಲೆ, ಪ್ರತಿಭೆಗಳನ್ನು ಮೋದಿ ಅವರು ಉಲ್ಲೇಖಿದ್ದಾರೆ. ಸಾಧಕರ ನಡೆ, ಪ್ರಯತ್ನ, ಮೂಲ ಸೌಕರ್ಯ, ಮಹಿಳಾ ಸಂಘಗಳ ಆರ್ಥಿಕ ಸಬಲೀಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಬೆಳಕು ಚೆಲ್ಲಿರುವುದು ಗೊತ್ತಿರುವ ಸಂಗತಿ.
ಓದಿ: ಅಂಗಾಂಗ ದಾನ, ನಾರಿ ಶಕ್ತಿ ಮಹತ್ವ ಕುರಿತು ಮೋದಿ 'ಮನ್ ಕಿ ಬಾತ್'