ನವದೆಹಲಿ: ಭ್ರಷ್ಟಾಚಾರದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪೊಲೀಸ್ ಅಧಿಕಾರಿಯನ್ನು ಗೃಹ ಸಚಿವಾಲಯ ಅಮಾನತುಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆರೋಪಿ ಅಧಿಕಾರಿಯನ್ನು ವಿಶಾಲ್ ಗಾರ್ಗ್ ಎಂದು ಗುರುತಿಸಲಾಗಿದ್ದು, 2019ರಿಂದ ಎರಡನೇ ಬಾರಿ ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
2019ರಲ್ಲಿ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ತನ್ನ ಹೆಸರನ್ನು ಬಹಿರಂಗಪಡಿಸದ್ದಕ್ಕಾಗಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ಬೇಡಿಕೆ ಇಟ್ಟ ಆರೋಪದ ಮೇಲೆ ನಿಶಾಂತ್ ಮತ್ತು ಮಿಥಿಲೇಶ್ ಎಂಬ ಎನ್‌ಐಎ ಅಧಿಕಾರಿಗಳೊಂದಿಗೆ ವಿಶಾಲ್ ಗಾರ್ಗ್ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಎನ್‌ಐಎ ಅಧಿಕಾರಿಗಳಾದ ನಿಶಾಂತ್ ಮತ್ತು ಮಿಥಿಲೇಶ್ ಅವರನ್ನು ಎನ್‌ಐಎ ಗುಪ್ತಚರ ಮತ್ತು ಕಾರ್ಯಾಚರಣೆ ವಿಭಾಗಕ್ಕೆ ನಿಯೋಜಿಸಲಾಗಿತ್ತು.
2020ರಲ್ಲಿ ಗಾರ್ಗ್ ಅವರಿಗೆ ಗೃಹ ವ್ಯವಹಾರಗಳ ಸಚಿವಾಲಯವು ಗಾರ್ಗ್ ಅವರಿಗೆ ಕ್ಲೀನ್ ಚೀಟ್ ನೀಡಿ ಲಕ್ನೋದಿಂದ ನವದೆಹಲಿಗೆ ವರ್ಗಾಯಿಸಲಾಯಿತು ಮತ್ತು "ತಕ್ಷಣದ ಪರಿಣಾಮ" ದೊಂದಿಗೆ ತರಬೇತಿಯ ಉಸ್ತುವಾರಿ ಜವಬ್ದಾರಿಯನ್ನು ವಹಿಸಲಾಗಿತ್ತು. ಗಾರ್ಗ್ ಅವರ ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಗೃಹ ಸಚಿವಾಲಯವು ಐಪಿಎಸ್ ಮತ್ತು ಎನ್‌ಐಎ ಅಧಿಕಾರಿಗಳಿಗೆ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದೆ. ಗಾರ್ಗ್ ಅವರು ಈ ಹಿಂದೆ 2007 ಫೆಬ್ರವರಿಯಲ್ಲಿ ನಡೆದ ಸಂಜೋತಾ ಮತ್ತು ಅಜ್ಮೀರ್ ಸ್ಫೋಟ ಪ್ರಕರಣಗಳಲ್ಲಿ ಮುಖ್ಯ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಸ್ಫೋಟದಲ್ಲಿ ಸುಮಾರು 68 ಜನರು ಸಾವನ್ನಪ್ಪಿದ್ದರು. ಮೃತ ಪಟ್ಟವರ ಪೈಕಿ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ ಹೆಚ್ಚಾಗಿತ್ತು. 26/11 ದಾಳಿಯ ನಂತರ ಸ್ಥಾಪಿತವಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶಾಶ್ವತವಾಗಿ ಸೇರ್ಪಡೆಗೊಂಡ ಗಡಿ ಭದ್ರತಾ ಪಡೆಯ ಮೊದಲ ಅಧಿಕಾರಿಗಳಲ್ಲಿ ವಿಶಾಲ್ ಗಾರ್ಗ್ ಒಬ್ಬರು.
ನಿಷೇಧಿತ ಸಂಘಟನೆ ಮುಖ್ಯಸ್ಥನ ಮಕ್ಕಳ ಆಸ್ತಿ ಮುಟ್ಟುಗೋಲು : ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಇಬ್ಬರು ಪುತ್ರರ ಆಸ್ತಿಯನ್ನು ಎನ್‌ಐಎ ಸೋಮವಾರ ಮುಟ್ಟುಗೋಲು ಹಾಕಿಕೊಂಡಿತ್ತು. ಉಗ್ರಗಾಮಿಗಳ ಪರ ಮತ್ತು ನಿಷೇಧಿತ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ, ಯುನೈಟೆಡ್ ಜಿಹಾದ್‌ನ ಅಧ್ಯಕ್ಷ ಸೈಯದ್ ಸಲಾವುದ್ದೀನ್ನ ಇಬ್ಬರು ಪುತ್ರರಿಗೆ ಸೇರಿದ ಎರಡು ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಎನ್‌ಐಎ ವಕ್ತಾರರು ತಿಳಿಸಿದ್ದರು.
ಎನ್‌ಐಎ ವಕ್ತಾರರ ಪ್ರಕಾರ, ಬುದ್ಗಾಮ್ ಜಿಲ್ಲೆಯ ಸುಯಾಬೋಗ್ ಮತ್ತು ಶ್ರೀನಗರದ ನರಸಿಂಗ್‌ಗಢ್ ರಾಮ್‌ಬಾಗ್‌ನಲ್ಲಿರುವ ಶಾಹಿದ್ ಯೂಸುಫ್ ಮತ್ತು ಸೈಯದ್ ಅಹ್ಮದ್ ಶಕೀಲ್ ಅವರ ಆಸ್ತಿಗಳನ್ನು ಯುಎಪಿಎ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನ ಇಬ್ಬರು ಪುತ್ರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶಾಹಿದ್ ಯೂಸುಫ್ ಮತ್ತು ಸೈಯದ್ ಅಹ್ಮದ್ ಶಕೀಲ್ರನ್ನು ಅಕ್ಟೋಬರ್ 2017 ಮತ್ತು ಆಗಸ್ಟ್ 2018ರಲ್ಲಿ ಬಂಧಿಸಿದ ನಂತರ ದೆಹಲಿ ತಿಹಾರ್ ಜೈಲಿನಲ್ಲಿ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮರಾಠವಾಡಕ್ಕೂ ವಿಸ್ತರಿಸಲಿದೆ ತೆಲಂಗಾಣದ ಬಿಆರ್ ಎಸ್ ಪಕ್ಷ; ಮಹಾರಾಷ್ಟ್ರದತ್ತ ದೃಷ್ಟಿ ಹಾಯಿಸಲು ಕಾರಣಗಳೇನು?