ನವದೆಹಲಿ: ರೈತರ ಹೋರಾಟವು ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಈ ಬೆನ್ನಲ್ಲೇ ಪ್ರತಿಭಟನಾಕಾರರ ಸಂಚಾರ ಮತ್ತಷ್ಟು ನಿರ್ಬಂಧಿಸಲು ಸಿಂಘು ಗಡಿಯಲ್ಲಿರುವ ಮುಖ್ಯ ಹೆದ್ದಾರಿಯಲ್ಲಿ ಎರಡು ಸಾಲುಗಳ ಸಿಮೆಂಟ್ ತಡೆಗೋಡೆಗಳ ನಡುವೆ ಕಬ್ಬಿಣದ ರಾಡ್ಗಳನ್ನು ಜೋಡಿಸಲಾಗಿದೆ. ದೆಹಲಿ - ಹರಿಯಾಣ ಗಡಿಯಲ್ಲಿರುವ ಹೆದ್ದಾರಿಯ ಮತ್ತೊಂದು ಭಾಗವನ್ನು ತಾತ್ಕಾಲಿಕ ಸಿಮೆಂಟ್ ಗೋಡೆ ನಿರ್ಮಿಸಿ ನಿರ್ಬಂಧಿಸಲಾಗಿದೆ.
ಜನವರಿ 26 ರಂದು ಕೆಲವು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. 60 ದಿನಗಳಿಂದ ರೈತರ ಪ್ರತಿಭಟನೆಯ ಕೇಂದ್ರ ಬಿಂದುವಾಗಿರುವ ಸಿಂಘು ಗಡಿಯಲ್ಲಿರುವ ಹೆದ್ದಾರಿಯ ವಿಭಾಗದಲ್ಲಿ ಇತ್ತೀಚೆಗೆ ರೈತರು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಘರ್ಷಣೆ ನಡೆದಿತ್ತು.
-
GOI,
— Rahul Gandhi (@RahulGandhi) February 2, 2021 " class="align-text-top noRightClick twitterSection" data="
Build bridges, not walls! pic.twitter.com/C7gXKsUJAi
">GOI,
— Rahul Gandhi (@RahulGandhi) February 2, 2021
Build bridges, not walls! pic.twitter.com/C7gXKsUJAiGOI,
— Rahul Gandhi (@RahulGandhi) February 2, 2021
Build bridges, not walls! pic.twitter.com/C7gXKsUJAi
ಹೊಸ ಕೃಷಿ ಕಾನೂನುಗಳನ್ನು ಖಂಡಿಸುವ ಭಾಷಣಗಳು ಮತ್ತು ಗಣರಾಜ್ಯೋತ್ಸವದ ನಂತರ ನಡೆದ ಘಟನೆಯ ಹಿನ್ನೆಲೆ ಮುಂದಿನ ಆಂದೋಲನದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ರೈತರು ಮುಂದಾಗುತ್ತಿದ್ದಾರೆ. ಇನ್ನು ಕೆಲವು ದಿನಗಳಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿ ಸೇನಾ ಪಡೆಯ ಸಿಬ್ಬಂದಿ ಕಂಡು ಬಂದಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಪ್ರತಿಭಟನಾ ಸ್ಥಳದಿಂದ ಒಂದು ಮೈಲಿ ದೂರದಲ್ಲಿ ನಿಯೋಜನೆಗೊಂಡಿದ್ದಾರೆ.
ಇನ್ನು ಪ್ರಮುಖ ವಿಷಯ ಎಂದರೆ ಪ್ರತಿಭಟನಾ ಸ್ಥಳಕ್ಕೆ ಹೇಗಾದರೂ ಬರಬಹುದೆಂದು ಊಹಿಸಿ ಹೆದ್ದಾರಿಯಲ್ಲಿ ತಾತ್ಕಾಲಿಕ ಗೋಡೆಯ ಹೊರತಾಗಿ, ಹೆದ್ದಾರಿಯಿಂದ ಸ್ವಲ್ಪ ಒಳಗಿನ ಬೀದಿಗೆ ಅಡ್ಡಲಾಗಿ ಒಂದು ಸಣ್ಣ ಕಂದಕವನ್ನು ಸಹ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರೈತರು, ನಮ್ಮ ಸುತ್ತಲಿನ ಈ ಬ್ಯಾರಿಕೇಡ್‌ಗಳು ನಮ್ಮ ಚೈತನ್ಯವನ್ನು ಪಂಜರದ ಒಳಗೆ ಇರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಆಂದೋಲನದ ನಿಮಿತ್ತ ತನ್ನ ಖಾಸಗಿ ಉದ್ಯೋಗ ತೊರೆದ ಮೊಹಾಲಿ ನಿವಾಸಿ ಜಶಂದೀಪ್ ಸಿಂಗ್ (28) ಪತ್ನಿ ಮತ್ತು ಒಂದು ವರ್ಷದ ಮಗಳನ್ನು ತಮ್ಮ ಊರಿನಲ್ಲಿ ಬಿಟ್ಟು ಬಂದು ಸಿಂಘು ಗಡಿಯಲ್ಲಿ ಚಳವಳಿಗೆ ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾವು ಈ ಆಂದೋಲನದಿಂದ ಒಂದು ಇಂಚು ಕೂಡ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
-
किसान देश का पेट पालने के लिए फसलें रोपता है,
— Randeep Singh Surjewala (@rssurjewala) February 2, 2021 " class="align-text-top noRightClick twitterSection" data="
और...
झूठी किसान हितैषी सरकार उसे दिल्ली आने से रोकने के लिए कीलें रोप रही है।
मोदी/शाह का न्यू इंडिया यही तो है ?#Farmers pic.twitter.com/VpdvOG0Ppx
">किसान देश का पेट पालने के लिए फसलें रोपता है,
— Randeep Singh Surjewala (@rssurjewala) February 2, 2021
और...
झूठी किसान हितैषी सरकार उसे दिल्ली आने से रोकने के लिए कीलें रोप रही है।
मोदी/शाह का न्यू इंडिया यही तो है ?#Farmers pic.twitter.com/VpdvOG0Ppxकिसान देश का पेट पालने के लिए फसलें रोपता है,
— Randeep Singh Surjewala (@rssurjewala) February 2, 2021
और...
झूठी किसान हितैषी सरकार उसे दिल्ली आने से रोकने के लिए कीलें रोप रही है।
मोदी/शाह का न्यू इंडिया यही तो है ?#Farmers pic.twitter.com/VpdvOG0Ppx
ಈ ತಂತ್ರಗಳಿಂದ ನಾವು ಭಯಭೀತರಾಗುತ್ತೇವೆ ಎಂದು ಅವರು ಯೋಚಿಸಿರಬಹುದು. ಅದು ಅವರ ತಪ್ಪು ಭಾವನೆ. ನಾವು ಯೋಧರು, ನಮ್ಮ ಹೋರಾಟ ಎಲ್ಲರಿಗೂ ಅನ್ವಯ. ಹಾಗೆಯೇ ಈ ಹೋರಾಟ ಈ ದೇಶದ ಭವಿಷ್ಯದ ಪೀಳಿಗೆಗೆ. ಅವರು ಸಿಮೆಂಟ್ ಗೋಡೆಗಳನ್ನು ಕಟ್ಟಿರಬಹುದು. ಆದರೆ, ನಮ್ಮಲ್ಲಿರುವ ಆತ್ಮಸ್ಥೈರ್ಯಕ್ಕಲ್ಲ. ಈ ಆಂದೋಲನವು ಅಣೆಕಟ್ಟಿನೊಂದಿಗೆ ಪರಿಶೀಲಿಸಬಹುದಾದ ಪ್ರವಾಹವಲ್ಲ. ಇದು ಸುನಾಮಿ, ಯಾವುದೇ ಗೋಡೆಗಳು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಹರಿಯಾಣದ ರೈತ ರಣಧೀರ್ ಸಿಂಗ್ (85) ಮಾತನಾಡಿ, ನಾನು ಮಹೇಂದ್ರ ಸಿಂಗ್ ಟಿಕೈಟ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕೆಲವು ವರ್ಷಗಳ ಹಿಂದೆ ಜಾಟ್ ಚಳವಳಿ ಹೇಗೆ ದುರ್ಬಲಗೊಂಡಿತು ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
-
प्रधानमंत्री जी, अपने किसानों से ही युद्ध? pic.twitter.com/gn2P90danm
— Priyanka Gandhi Vadra (@priyankagandhi) February 2, 2021 " class="align-text-top noRightClick twitterSection" data="
">प्रधानमंत्री जी, अपने किसानों से ही युद्ध? pic.twitter.com/gn2P90danm
— Priyanka Gandhi Vadra (@priyankagandhi) February 2, 2021प्रधानमंत्री जी, अपने किसानों से ही युद्ध? pic.twitter.com/gn2P90danm
— Priyanka Gandhi Vadra (@priyankagandhi) February 2, 2021
ಜನವರಿ 26 ರಂದು ನಡೆದದ್ದು ಪಿತೂರಿ. ಇದನ್ನು ರೈತರು ಮಾಡಿಲ್ಲ. ಆದರೆ, ಎಲ್ಲವೂ ಆಂದೋಲನವನ್ನು ಕೆಣಕುವ ಸ್ಮೀಯರ್ ಅಭಿಯಾನದ ಭಾಗವಾಗಿತ್ತು ಎಂದು ಆರೋಪಿಸಿದರು. ನಾವು ಭಯೋತ್ಪಾದಕರು ಅಥವಾ ಖಲಿಸ್ತಾನಿಗಳಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ನಮ್ಮನ್ನು ಕೆಣಕಲು ಮತ್ತು ದುರ್ಬಲಗೊಳಿಸಲು ಇನ್ನೂ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಟಿಕಾಯತ್ ಅವರ ಕಣ್ಣೀರು ಹರಿಯಾಣ, ಯುಪಿ ಮತ್ತು ಇತರ ರಾಜ್ಯಗಳ ರೈತರನ್ನು ಜಾಗೃತಗೊಳಿಸಿದೆ ಎಂದಿದ್ದಾರೆ.
ಪ್ರತಿಭಟನೆಗೆ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಗಳು, ದೇಶಾದ್ಯಂತ 'ಚಕ್ಕಾ ಜಾಮ್' ಘೋಷಣೆ ಮಾಡಿವೆ. ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡುವುದಾಗಿ ತಿಳಿಸಿದ್ದಾರೆ.
ರೈತರನ್ನು ಸ್ಥಳದಿಂದ ತೆರವುಗಳಿಸಲು ಉತ್ತರ ಪ್ರದೇಶ ಪ್ರಯತ್ನಸಿದ ಬೆನ್ನಲ್ಲೇ, ಗಡಿಯಲ್ಲಿ ಲಕ್ಷಾಂತರ ರೈತರು ಜಮಾವಣೆಯಾದರು. ಕಾರಣ ಈ ಕ್ರಮವನ್ನು ವಿರೋಧಿಸಿ ಮಾತನಾಡುವ ವೇಳೆ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಟಿಕಾಯತ್ ಅವರ ಕಣ್ಣೀರು ಅಲ್ಲಿ ಲಕ್ಷಾಂತರ ಜನರು ಸೇರುವಂತೆ ಮಾಡಿದೆ. ಇದನ್ನೆಲ್ಲ ಅರಿತ ಪೊಲೀಸರು ಮತ್ತೆ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎಂದು ಭಾರಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.