ಮುಂಬೈ, ಮಹಾರಾಷ್ಟ್ರ: ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ಮುಂಬೈನ ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವವನ್ನು ಆಚರಿಸಲು ನಾನು ಹೊರಗೆ ಹೋಗಿದ್ದೆ. ಈ ವೇಳೆ ನನ್ನನ್ನುಸಾಂತಾಕ್ರೂಜ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
-
Now being allowed to go. Proceeding to August Kranti Maidan. Inquilab Zindabad!
— Tushar GANDHI (@TusharG) August 9, 2023 " class="align-text-top noRightClick twitterSection" data="
">Now being allowed to go. Proceeding to August Kranti Maidan. Inquilab Zindabad!
— Tushar GANDHI (@TusharG) August 9, 2023Now being allowed to go. Proceeding to August Kranti Maidan. Inquilab Zindabad!
— Tushar GANDHI (@TusharG) August 9, 2023
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನನ್ನನ್ನು ವಶಕ್ಕೆ ಪಡೆಯಲಾಗಿದೆ. ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವವನ್ನು ಆಚರಿಸಲು ನಾನು ಆಗಸ್ಟ್ 9 ರಂದು ಮನೆಯಿಂದ ಹೊರಟಿದ್ದೆ. ನನ್ನನ್ನು ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದರು. ಈ ಐತಿಹಾಸಿಕ ದಿನಾಂಕದಂದು ನನ್ನ ಮುತ್ತಜ್ಜ ಬಾಪು ಮತ್ತು ಬಾ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿರುವುದು ನನಗೆ ಹೆಮ್ಮೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವಿಟರ್‌ನಲ್ಲಿ ಬಳಕೆದಾರರಿಗೆ ಉತ್ತರಿಸಿದ ತುಷಾರ್, ಆಗಸ್ಟ್ ಕ್ರಾಂತಿ ಮೈದಾನಕ್ಕೆ ಶಾಂತಿಯುತ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ನನ್ನನ್ನು ನನ್ನ ಬೆಂಬಲಿಗರೊಂದಿಗೆ ವಶಕ್ಕೆ ಪಡೆಯಲಾಗಿದೆ. ವೈರಲ್ ಆಗ್ತಿರುವ ಫೋಟೋಗಳಲ್ಲಿ ತುಷಾರ್ ಗಾಂಧಿ ಜೊತೆ ಇತರರು ಬಸ್ಸಿನಲ್ಲಿ ಕುಳಿತುಕೊಂಡಿರುವುದು ಕಂಡು ಬಂದಿದೆ.
ಬಿಡುಗಡೆಯಾದ ತಕ್ಷಣ ಆಗಸ್ಟ್ ಕ್ರಾಂತಿ ಮೈದಾನಕ್ಕೆ ಮೆರವಣಿಗೆ ನಡೆಸುವುದಾಗಿ ಪೊಲೀಸ್ ಠಾಣೆಯಿಂದಲೇ ತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದು ಹುತಾತ್ಮರನ್ನು ಸ್ಮರಿಸುವ ದಿನವಾಗಿದ್ದು, ಆಗಸ್ಟ್ ಕ್ರಾಂತಿ ದಿವಸ್ ಅನ್ನು ಖಂಡಿತಾ ಆಚರಿಸಲಾಗುವುದು ಎಂದು ಹೇಳಿದ್ದಾರೆ.
ಠಾಕ್ರೆ ಗುಂಪಿನ ಸಂಸದ ಸಂಜಯ್ ರಾವುತ್ ಅವರು ಇದನ್ನು ಖಂಡಿಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವುತ್, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗದವರನ್ನು ಸ್ಮರಿಸುವ ದಿನ. ಈ ಕ್ರಾಂತಿ ದಿನದಂದು ಅವರು ಶಾಂತಿ ಹಂಚುತ್ತಿದ್ದಾರೆ. ಇದೊಂದು ದೊಡ್ಡ ಜೋಕ್. ತುಷಾರ್ ಗಾಂಧಿಯನ್ನು ಪೊಲೀಸರು ತಡೆದಿರುವುದು ಹೆಚ್ಚು ಗಂಭೀರವಾಗಿದೆ ಎಂದು ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಬುಲ್ಧಾನಾದಲ್ಲಿ ರಾಹುಲ್ ಗಾಂಧಿಯೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ತುಷಾರ್ ಗಾಂಧಿ ಕೂಡ ಕಾಣಿಸಿಕೊಂಡಿದ್ದರು. ತುಷಾರ್ ಅವರ ಪೂರ್ಣ ಹೆಸರು ತುಷಾರ್ ಅರುಣ್ ಗಾಂಧಿ. ಅವರ ತಂದೆ ಪತ್ರಕರ್ತ ಅರುಣ್ ಮಣಿಲಾಲ್ ಗಾಂಧಿ. ಅವರು ಗಾಂಧೀಜಿ ಅವರ ಮಗ ಮಣಿಲಾಲ್ ಗಾಂಧಿಯವರ ಮೊಮ್ಮಗ. ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಕಸ್ತೂರಬಾ ಗಾಂಧಿ ಎಂಬ ಹೆಸರಿನಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಕಸ್ತೂರಿ ಎಂದು ಹೆಸರಿಟ್ಟಿದ್ದಾರೆ.
ಓದಿ: ಭಾರತದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಕುರಿತು ಚರ್ಚೆ: ಅಮೆರಿಕ