ETV Bharat / bharat

ಕತ್ತು ಸೀಳಿದ ಗಾಳಿಪಟದ ದಾರ: ಮುಂಬೈನಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಸಾವು

author img

By ETV Bharat Karnataka Team

Published : Dec 25, 2023, 9:51 AM IST

ಗಾಳಿಪಟದ ದಾರದಿಂದ ಕತ್ತು ಸೀಳಿ ಮಹಾರಾಷ್ಟ್ರದ ಪೊಲೀಸ್ ಕಾನ್ಸ್​ಟೇಬಲ್​ವೊಬ್ಬರು ಮೃತಪಟ್ಟಿದ್ದಾರೆ ಎಂದು ಖೇರ್ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

police constable
ಕಾನ್ಸ್​ಟೇಬಲ್ ಸಾವು

ಮುಂಬೈ : ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಗಾಳಿಪಟದ ಮಾಂಜಾ ದಾರವು ಕತ್ತಿಗೆಗೆ ಸಿಲುಕಿ ಪೊಲೀಸ್ ಕಾನ್ಸ್​ಟೇಬಲ್​ಒಬ್ಬರು​ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಸಮೀರ್ ಸುರೇಶ್ ಜಾಧವ್ (37) ಮೃತ ಪೊಲೀಸ್​ ಸಿಬ್ಬಂದಿ.

ವರ್ಲಿಯ ಬಿಡಿಡಿ ಚಾಲಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಸಮೀರ್ ಜಾಧವ್ ಅವರನ್ನು ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಬೀಟ್ ಮಾರ್ಷಲ್ ಆಗಿ ನಿಯೋಜಿಸಲಾಗಿತ್ತು. ಸಮೀರ್ ಅವರು ಭಾನುವಾರ ಮಧ್ಯಾಹ್ನ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ವಕೋಲಾ ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಾರಿ ಬಂದ ಪತಂಗದ ದಾರವು ಗಂಟಲಿಗೆ ಸಿಕ್ಕಿಹಾಕಿಕೊಂಡಿದೆ. ಬಳಿಕ, ಕುತ್ತಿಗೆಯಿಂದ ರಕ್ತ ಬರುತ್ತಿದ್ದುದನ್ನು ಕಂಡು ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಇದನ್ನು ಕಂಡ ಚಾಲಕರೊಬ್ಬರು ದೂರದಲ್ಲಿ ಗಸ್ತಿನಲ್ಲಿದ್ದ ಖೇರವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಖೇರವಾಡಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಜಾಧವ್ ಅವರನ್ನು ಸಯಾನ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಜಾಧವ್ ಅವರ ಜೇಬಿನಲ್ಲಿದ್ದ ಗುರುತಿನ ಚೀಟಿಯಿಂದ ಗುರುತು ಪತ್ತೆ ಪಡೆದ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದರು.

ಇದನ್ನೂ ಓದಿ : ಗಾಳಿಪಟಕ್ಕೆ ಚೈನೀಸ್ ದಾರ ಬಳಕೆಗೆ ಕಡಿವಾಣ ಹಾಕಲು ಡ್ರೋನ್ ನಿಗಾ : ಪೊಲೀಸರಿಂದ ನೂತನ ಪ್ರಯೋಗ

ಪ್ರತಿ ವರ್ಷ ಅನೇಕ ಜನರು ನೈಲಾನ್ ದಾರ ಕತ್ತಿಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಇದು ಪಕ್ಷಿಗಳ ಜೀವನಕ್ಕೆ ಕೂಡ ತುಂಬಾ ಅಪಾಯಕಾರಿ ಎಂಬುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ, ಅನೇಕ ಸಂಸ್ಥೆಗಳು ನೈಲಾನ್ ದಾರವನ್ನು ನಿಷೇಧಿಸಲು ಪ್ರಯತ್ನಿಸುತ್ತಿವೆ. ಅದರಲ್ಲೂ, ಬೈಕ್ ಸವಾರರು ಆಗಾಗ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಇಂತಹ ದಾರ ಮಾರಾಟ ಮಾಡುವ ಅಂಗಡಿಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗಾಳಿಪಟ ಹಾರಿಸುವಾಗ ಅವಘಡ : ಹೈಟೆನ್ಶನ್​ ತಂತಿ ತಗುಲಿ ಬಾಲಕ ಸಾವು

ದೇಶದಲ್ಲಿ ಸಾಂಕ್ರಾಂತಿ ಹಬ್ಬ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಗಾಳಿಪಟ ಹಾರಿಸುವ ರೂಢಿ ಇದೆ. ಆದರೆ, ಈ ಗಾಳಿಪಟಗಳಿಗೆ ಚೈನೀಸ್ ದಾರ ಬಳಕೆ ಮಾಡುತ್ತಿರುವುದು ಸಾರ್ವಜನಿಕರು ಮಾತ್ರವಲ್ಲದೇ, ಪಕ್ಷಗಳ ಜೀವಕ್ಕೂ ಕಂಟಕವಾಗಿದೆ. ಆದ್ದರಿಂದ ಗಾಜು ಲೇಪಿತ, ನೈಲಾನ್ ಅಥವಾ ಇತರ ಕೃತಕ ವಸ್ತುಗಳಿಂದ ತಯಾರಿಸಲ್ಪಟ್ಟ ದಾರ ಬಳಸದಂತೆ ಸೂಚಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.